ಗದಗ

ಕುಸ್ತಿಯಲ್ಲಿ ಸಲಾವುದ್ದಿನ್ಗೆ ಜಯ

Published On :

ಲಕ್ಷ್ಮೇಶ್ವರ: ಮದ ಗಜಗಳ ನಡುವಿನ ಹೋರಾಟಕ್ಕೆ ಏನೂ ಕಡಿಮೆ ಇಲ್ಲದಂತೆ ಕುಸ್ತಿ ಕಣದಲ್ಲಿ ಹೋರಾಡಿದ ಸಲಾವುದ್ದೀನ ತೊರವಿ ಹಾಗೂ ರಮೇಶ ಗೊಜಗೋಜಿ (ಲಕ್ಷ್ಮೇಶ್ವರ) ಪೈಲ್ವಾನರ ಮಧ್ಯೆ ನಡೆದ ಕುಸ್ತಿ ಕೂತಹಲ ಮೂಡಿಸಿತ್ತು. ಆದರೆ, ಸಲಾವುದ್ದೀನ್ ತೊರವಿಯವರು ರಮೇಶ ಪೈಲ್ವಾನರನ್ನು ಸೋಲಿಸಿ, ವಿಜಯದ ನಗೆ ಬೀರಿದರು.
ಪಟ್ಟಣದ ಕೋಡಿಯಲ್ಲಮ್ಮನ ಜಾತ್ರಾ ಮಹೋತ್ಸವದ ಅಂಗವಾಗಿ 3 ದಿನಗಳ ಕಾಲ ನಡೆದ ಭರ್ಜರಿ ಬಯಲು ಕುಸ್ತಿ ಸೋಮವಾರ ಕೊನೆಗೊಂಡಿತು. ಸುಮಾರು 30ಕ್ಕೂ ಹೆಚು ಕುಸ್ತಿ ಪಟುಗಳು ಭಾಗವಹಿಸಿದ್ದರು. ಮಹಿಳಾ ಕುಸ್ತಿಗಳು ಜರುಗಿದ್ದು ವಿಶೇಷವಾಗಿತ್ತು. ಅಂತಾರಾಷ್ಟ್ರೀಯ ಮಹಿಳಾ ಕುಸ್ತಿ ಪಟು ಪ್ರೇಮಾ ಹುಚ್ಚಣ್ಣವರ, ಶಾಹೀದಾ ಬಳಿಗಾರ, ಜ್ಯೋತಿ ಮತ್ತು ಶ್ವೇತಾ ಭಾಗವಹಿಸಿದ್ದರು. 3 ದಿನಗಳ ಕಾಲ ಪಟ್ಟಣದ ಕುಸ್ತಿ ಪ್ರೇಮಿಗಳು ಆಟದ ಸವಿ ಸವಿದರು. ಕುಸ್ತಿ ಪೈಲ್ವಾನರಾದ ಹುಸೇನ ಮಾಸೂರು, ನಾಗರಾಜ ಗೊಜಗೋಜಿ, ಲೋಕೇಶ ಲಕ್ಷ್ಮೇಶ್ವರ, ಶರಣಪ್ಪ ಲಕ್ಷ್ಮೇಶ್ವರ, ಯಲ್ಲಪ್ಪ ಜಡೆ ಮುಂತಾದವರು ಭಾಗವಹಿಸಿದ್ದರು. ಕೋಡಿಯಲ್ಲಮ್ಮ ದೇವಸ್ಥಾನ ಕಮಿಟಿಯ ಪರಸಪ್ಪ ಮುಳಗುಂದ, ಶಂಕರ ಗೋಡಿ, ಸೋಮಣ್ಣ ಮುಳಗುಂದ, ಕೃಷ್ಣಪ್ಪ ಚವ್ಹಾಣ, ಮಹಾಂತೇಶ ನಾವಿ, ಶಂಕ್ರು ಬೂದಿಹಾಳ, ಚೆನ್ನಪ್ಪ ಕರೆಯತ್ತಿನ, ನಾಗೇಶ ಹುಬ್ಬಳ್ಳಿ, ಅಮರ ಗುಡಗುಂಟಿ, ಗೂಳಪ್ಪ ಅಂಕಲಿ, ಮುದಕಣ್ಣ ಹಾದಿಮನಿ, ಸಿದ್ದಪ್ಪ ದುರಗಣ್ಣವರ ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.