ಉಪವಾಸದಿಂದ ಆರೋಗ್ಯ, ಮನಸ್ಸು ನಿಯಂತ್ರಣ
ಕನ್ನಡಪ್ರಭ ವಾರ್ತೆ, ಗದಗ, ಆ. 2
ಆರೋಗ್ಯ ಮತ್ತು ಮನಸ್ಸು ನಿಯಂತ್ರಿಸುವಲ್ಲಿ ಉಪವಾಸ ಮಹತ್ವದ ಪಾತ್ರವನ್ನು ವಹಿಸುತ್ತದೆ ಎಂದು ಲಾಲಹುಸೇನ ಕಂದಗಲ್ ಅಭಿಪ್ರಾಯ ಪಟ್ಟರು.
ಅವರು ಈಚೆಗೆ ಸ್ಥಳೀಯ ತಾಜ್ ನಗರದ ಹೀರಾ ಸೆಂಟರ್ನಲ್ಲಿ ರಾಜ್ಯ ಪ್ರೌಢಶಾಲಾ ಹಿಂದಿ ಭಾಷಾ ಶಿಕ್ಷಕರ ಸಂಘ ಗದಗ ಜಿಲ್ಲಾ ಘಟಕದ ವತಿಯಿಂದ ರಂಜಾನ್ ಹಿನ್ನೆಲೆಯಲ್ಲಿ ಏರ್ಪಡಿಸಿದ್ದ ಇಫ್ತಾರ್ ಕೂಟದಲ್ಲಿ ಉಪವಾಸ ವ್ರತದ ಮಹತ್ವ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಕಾಮ, ಮೋಹ, ಮದ, ಮತ್ಸರವನ್ನು ಸರಿ ದಾರಿಗೆ ತರುವ ಮೂಲಕ ಅವುಗಳನ್ನು ನಿಯಂತ್ರಿಸುವಲ್ಲಿ ಉಪವಾಸ ವ್ರತ, ದೇವೋಪಾಸನೆ ಮಹತ್ವದ ಪಾತ್ರ ವಹಿಸುತ್ತದೆ. ಜತೆಗೆ ವ್ಯಕ್ತಿತ್ವವನ್ನು ವಿಕಸನಗೊಳಿಸುತ್ತದೆ. ದೇವರು ಒಬ್ಬನೆ ಎಂಬ ಅರಿವನ್ನು ಮೂಡಿಸುವ ಕುರಾನ್ ಬಹು ಧರ್ಮಿಯರ ಮತ್ತು ಬಹು ಸಂಸ್ಕೃತಿಯ ಜನಾಂಗಕ್ಕೆ ಕುರಾನ್ ಒಳ್ಳೆ ಸಂದೇಶವನ್ನು ನೀಡಿದೆ. ಸರ್ವ ಧರ್ಮದ ಗ್ರಂಥಗಳೂ ಮಾನವ ಜನಾಂಗದ ಹಾಗೂ ಸಮಾಜದ ಒಳಿತನ್ನೇ ಬಯಸುವ ಸಂದೇಶ ನೀಡಿವೆ ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಮಾತೆ ಇಸ್ಲಾಮಿ ಹಿಂದ್ ಸಂಘಟನೆಯ ಜಿಲ್ಲಾಧ್ಯಕ್ಷ ಕೆ.ಐ.ಶೇಖ, ಗದಗ ಗ್ರಾಮೀಣ ಶಿಕ್ಷಣಾಧಿಕಾರಿ ಎಸ್.ಎಸ್. ಗುಡ್ಲಾನೂರ, ಬಸವಪ್ರಭು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಬಸವರಾಜ ಧಾರವಾಡ ಮಾತನಾಡಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಎಸ್.ಎನ್. ಖಾಜಿ, ಮುಂಡರಗಿ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎ. ರಡ್ಡೇರ, ಎಂ.ಎನ್. ಮಕಾನದಾರ, ರಜಾಕ್ ಡಂಕೇದ, ಜುನೇದ ಉಮಚಗಿ, ಅ.ದ. ಕಟ್ಟಿಮನಿ, ಮೊಬಸಿರ್ ಮುಲ್ಲಾ, ವಿನೂಸ್ ಉಮಚಗಿ, ಶಾನವಾಸ್ ಯರಗುಡಿ, ಸಾಧಿಕ ಶಿರಹಟ್ಟಿ, ಖಾಲೀದ್ ಧಾರವಾಡ, ತಾಹೀರ್ ಡಂಬಳ, ಆಸಿಫ್ ಶಿರಹಟ್ಟಿ, ಎ.ಎಸ್. ಖವಾಸ ಸೇರಿದಂತೆ ರಾಜ್ಯ ಪ್ರೌಢ ಶಾಲಾ ಹಿಂದಿ ಭಾಷಾ ಶಿಕ್ಷಕರ ಸಂಘ ಗದಗ ಜಿಲ್ಲಾ ಘಟಕದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಇದೇ ಸಂದರ್ಭದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿನಿ ಸುಮತಿ ಗೌರಿ ಹಾಗೂ ಶಿಕ್ಷಕ ಬಿ.ಆರ್. ಪಾಟೀಲ ಅವರನ್ನು ಗೌರವಿಸಲಾಯಿತು. ಹಾಫೀಜ್ ಮುಜಿಬರ್ರಹ್ಮಾನ ಅವರಿಂದ ಕುರಾನ್ ಪಠಣವಾಯಿತು. ಶಿಕ್ಷಕ ಎಸ್.ಎಂ. ಅಂಗಡಿ ಸ್ವಾಗತಿಸಿದರು. ಶಿಕ್ಷಕ ಎ.ಎಲ್. ಬಿಜಾಪುರ ನಿರೂಪಿಸಿದರು. ಎಫ್.ಡಿ. ಚಾಂದಖಾನ್ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

