ಗದಗ

ಜಲಾವೃತಗೊಂಡ ಹಳೆ ಸಿಂಗಟಾಲೂರು ಗ್ರಾಮ

Published On :

ಮುಂಡರಗಿ: ನಮ್ಗ ಮನಿ ಇಲ್ಲ. ನಮ್ಮನ್ನ ನಡು ನೀರಾಗ ಕೈಬಿಡಬ್ಯಾಡ್ರಿಯಪ್ಪಾ. ನಮ್ಮ ಬದುಕು ನೀರಾಗ ನಿಂತೈತಿ ಎಂದು ತುಂಗಭದ್ರಾ ನದಿ ನೀರಿನಿಂದ ಮುಳುಗಡೆಯಾಗುತ್ತಿರುವ ತಾಲೂಕಿನ ಹಳೇ ಸಿಂಗಟಾಲೂರು ಗ್ರಾಮದ ಗ್ರಾಮಸ್ಥರು ಶಿರಹಟ್ಟಿ ಶಾಸಕ ರಾಮಕೃಷ್ಣ ದೊಡ್ಡಮನಿ ಅವರ ಮುಂದೆ ತಮ್ಮ ನೋವು ತೋಡಿಕೊಂಡರು.
ಭಾನುವಾರ ತುಂಗಭದ್ರಾ ನದಿ ನೀರಿನಿಂದ ಮುಳುಗಡೆಯಾಗಿರುವ ಹಳೇ ಸಿಂಗಟಾಲೂರು ಗ್ರಾಮಕ್ಕೆ ಶಿರಹಟ್ಟಿ ಶಾಸಕ ರಾಮಕೃಷ್ಣ ದೊಡ್ಡಮನಿ ಭೇಟಿ ನೀಡಿದ ವೇಳೆ ಗ್ರಾಮದ ಜನರು ತಮ್ಮ ಸಮಸ್ಯೆ ತಿಳಿಸಿದರು. ಇಲ್ಲಿನ ಅನೇಕ ಕುಟುಂಬಗಳು ಈಗಾಗಲೇ ಹೊಸ ಸಿಂಗಟಾಲೂರು ಗ್ರಾಮಕ್ಕೆ ಸ್ಥಳಾಂತರಗೊಂಡಿದ್ದು, ಹಳೇ ಸಿಂಗಟಾಲೂರು ಗ್ರಾಮದಲ್ಲಿ ಇನ್ನೂ 45 ರಿಂದ 50 ಕುಟುಂಬಗಳು ವಾಸವಾಗಿವೆ. ನಮಗ್ಯಾರಿಗೂ ವಾಸಕ್ಕೆ ಮನೆಯಿಲ್ಲ. ಆದ್ದರಿಂದ ನಮಗೂ ಹೊಸ ಸಿಂಗಟಾಲೂರಿನಲ್ಲಿ ಮನೆ ನಿರ್ಮಿಸಿಕೊಡಿ ಎಂದು ಅಲ್ಲಿನ ನಿರಾಶ್ರಿತರು ಕೇಳಿಕೊಂಡರು. ಶಾಸಕ ದೊಡ್ಡಮನಿ ಮಾತನಾಡಿ, ಈ ಕೂಡಲೇ ಸಿಎಂ ಹಾಗೂ ವಸತಿ ಸಚಿವರೊಂದಿಗೆ ಮಾತನಾಡಿ, ರಾಜೀವ್‌ಗಾಂಧಿ ಹೌಸಿಂಗ್ ಸೊಸೈಟಿಯಿಂದ ಎಲ್ಲ ನಿರಾಶ್ರಿತರಿಗೂ ಮನೆ ಒದಗಿಸುವ ಪ್ರಯತ್ನ ಮಾಡುತ್ತೇನೆ. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ  ನೀರು ಬಂದರೆ ತಮಗೆ ಇಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಉಳಿಯುವ ವ್ಯವಸ್ಥೆ ಮಾಡಿ, ಅವಶ್ಯವಿದ್ದರೆ ಗಂಜಿಕೇಂದ್ರವನ್ನು ತೆರೆಸುವುದಾಗಿ ಭರವಸೆ ನೀಡಿದರು. ತಹಸೀಲ್ದಾರ್ ಎಸ್.ಆರ್. ಶಿರಕೋಳ, ಗ್ರಾಪಂ ಉಪಾಧ್ಯಕ್ಷ ಉಮಾ ಶಿರಹಟ್ಟಿ, ಈರಪ್ಪ ಮುಂಡವಾಡ, ಈರಮ್ಮ ಮಲ್ಲಿಕೇರಿ, ಈರಪ್ಪ ಡಂಬಳ, ದಂಡೆಪ್ಪ ಹರಿಜನ, ಬಸವರಡ್ಡಿ ಸಂಗನಾಳ, ಫಕ್ಕೀರಡ್ಡಿ ನೀಲಗಿರಿ ಅನೇಕರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.