ಗದಗ

ಸೀಮೆ ಎಣ್ಣೆ ವಿತರಣೆಯಲ್ಲಿ ಹಗಲು ದರೋಡೆ: ಸಿಪಿಐ(ಎಂ) ಆರೋಪ

Published On :

ಗಜೇಂದ್ರಗಡ:  ಸ್ಥಳೀಯ ಎಲ್ಲ ನ್ಯಾಯಬೆಲೆ ಕೇಂದ್ರಕ್ಕೆ ಸರ್ಕಾರ ಪೂರೈಸಿರುವ ಸೀಮೆ ಎಣ್ಣೆ ಯನ್ನು ಬಡವರಿಗೆ ಸಮರ್ಪಕವಾಗಿ ವಿತರಿಸದೇ ಹಗಲು ದರೋಡೆ ನಡೆಸಿದ್ದಾರೆ ಎಂದು ಸಿಪಿಐ (ಎಂ) ಪಕ್ಷ ಆರೋಪಿಸಿದೆ.  ಈ ಕುರಿತು ಪ್ರಕಟಣೆ ನೀಡಿರುವ ಅವರು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ನಿಯಮಗಳನ್ನು ಗಾಳಿಗೆ ತೂರುವುದು ಎಂದರೆ ನ್ಯಾಯಬೆಲೆ ಕೇಂದ್ರ ನಿರ್ವಹಣೆಗಾರರಿಗೆ ಅತಿ ಅಚ್ಚುಮೆಚ್ಚು ಎಂದು ಲೇವಡಿ ಮಾಡಿರುವ ಸಿಪಿಐ (ಎಂ), ವ್ಯವಸ್ಥೆ ನಿಯಮ ಉಲ್ಲಂಘಿಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಆಗ್ರಹಿಸಿದೆ.
ಸರ್ಕಾರ ಪ್ರತಿ ಪಡಿತರ ಕಾರ್ಡ್‌ದಾರರಿಗೆ 5 ಲೀಟರ್ ಸೀಮೆ ಎಣ್ಣೆ ವಿತರಿಸಲು ಆದೇಶ ನೀಡಿದೆ. ಆದರೆ ಪಡಿತರ ಕೇಂದ್ರದಲ್ಲಿ 4 ಲೀಟರ್ ಸೀಮೆ ಎಣ್ಣೆ ಕೊಟ್ಟು, ಖೊಟ್ಟಿ ದಾಖಲೆ ಸೃಷ್ಟಿಸಿ ಬಡವರ ಪಾಲಿನ ಸೀಮೆ ಎಣ್ಣೆಯನ್ನು ಪಡಿತರ ಕೇಂದ್ರದವರು ಫಲಾನುಭವಿಗಳಿಗೆ ವಿತರಿಸದೇ ಲಪಟಾಯಿಸಿದ್ದಾರೆ ಎಂದು ದೂರಿದೆ. ಪಡಿತರ ಕೇಂದ್ರದ ರಜಿಸ್ಟರ್ ನೋಟ್‌ಪುಸ್ತಕ ಹಾಗೂ ಮಾರಾಟ ಮಾಡುವ ರಶೀದಿ ಬುಕ್ ಒಂದಕ್ಕೊಂದು ತಾಳೆಯಿಲ್ಲದನ್ನು ಪಡೆದಿರುವ ಸಿಪಿಐ (ಎಂ) ಕಾರ್ಯಕರ್ತರು, ಅವ್ಯವಹಾರ ಹಾಗೂ ಅನ್ಯಾಯದ ಪರಾಕಾಷ್ಠೆ ಇದಾಗಿದೆ. ಇದನ್ನು ಸರಿಪಡಿಸಬೇಕು ಎಂದು ಮೇಲಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಪಡಿತರ ಆಹಾರ ಮತ್ತು ಸೀಮೆ ಎಣ್ಣೆಯನ್ನು ನಿಯಮ ಉಲ್ಲಂಘಿಸಿ ಹೆಚ್ಚಿನ ಬೆಲೆಗೆ ಕಾಳ ಸಂತೆಯಲ್ಲಿ ಮಾರಾಟ ಮಾಡಿದ ನ್ಯಾಯಬೆಲೆ ಅಂಗಡಿಗಳ ಪರವಾನಗಿ ರದ್ದು ಮಾಡಿರುವುದು ಹಿಂದೆ ನಡೆದಿದೆ. ಇದು ಹೊಸದೇನಲ್ಲ. ಅದು ನಿರಂತರ ಪ್ರಕ್ರಿಯೆಯಾಗಿದೆ. ಸಾರ್ವಜನಿಕರ ದೂರಿನನ್ವಯ ಜಿಲ್ಲಾಡಳಿತ ಪಟ್ಟಣದ ಸೀಮೆ ಎಣ್ಣೆ ವಿತರಕರ ಪರವಾನಗಿ ಅಮಾನತ್ ಮಾಡಿರುವುದು ತಾತ್ಕಾಲಿಕ ಶಮನ ಮಾಡಿ, ಮರಳಿ ಮತ್ತೆ ಅವರಿಗೆ ಅನುಮತಿ ನೀಡಿದೆ.
ಈ ಕುರಿತು ಸಂಬಂಧಿಸಿದ ಅಧಿಕಾರಿಗಳು ಈ ಕೂಡಲೇ ಕ್ರಮ ಕೈಗೊಂಡು ಅಕ್ರಮವಾಗಿ ಸೀಮೆಎಣ್ಣೆ ಮಾರಾಟ ಮಾಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸಿಪಿಐ (ಎಂ) ಜಿಲ್ಲಾ ಮುಖಂಡ ಎಂ.ಎಸ್. ಹಡಪದ, ಮಾರುತಿ ಚಿಟಗಿ, ಬಾಲು ರಾಠೋಡ, ಬಿ.ಎಸ್. ಶೀಲವಂತರ, ಪೀರು ರಾಠೋಡ, ಎಫ್.ಎಫ್. ತೋಟದ ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.