ಗದಗ

ಮಾನಸಿಕ ಕಾಯಿಲೆಯಿಂದ ಸಮಸ್ಯೆ ಸೃಷ್ಟಿ

Published On :

ಕನ್ನಡಪ್ರಭ ವಾರ್ತೆ, ಗದಗ, ಆ. 9
ಸಮಾಜದಲ್ಲಿ ತಪ್ಪು ಕಲ್ಪನೆಯ ಪರಿಣಾಮವಾಗಿ ಉಂಟಾಗುವ ಮಾನಸಿಕ ಕಾಯಿಲೆಯಿಂದ ವ್ಯಕ್ತಿ ಆರೋಗ್ಯವಂತನಾಗಿದ್ದರೂ ಅವನಲ್ಲಿ ಸಮಸ್ಯೆಗಳು ಹೆಚ್ಚೆಚ್ಚು ಸೃಷ್ಟಿಯಾಗುತ್ತವೆ ಎಂದು ರಾಜ್ಯ ಮಾನಸಿಕ ಆರೋಗ್ಯ ಕಾರ್ಯಪಡೆ ಅಧ್ಯಕ್ಷ ಡಾ. ಕೆ.ಎ.ಅಶೋಕ ಪೈ ಹೇಳಿದರು.
ಅವರು ನಗರದ ಕಳಸಾಪುರ ರಸ್ತೆಯ ಡಿ.ಜಿ.ಎಂ. ಆಯುರ್ವೇದಿಕ್ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ನೂತನ ಮಾನಸ ಅಧ್ಯಯನ ಕೇಂದ್ರ ಉದ್ಘಾಟಿಸಿ ಮಾತನಾಡಿದರು.
ಈಗಾಗಲೇ ಮಾನಸ ಅಧ್ಯಯನ ಕೇಂದ್ರವು ಶಿವಮೊಗ್ಗ, ಬೆಂಗಳೂರು, ಮೈಸೂರು ಮತ್ತು ಗುಲ್ಬರ್ಗಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಡಿಜಿಎಂ  ಆಯುರ್ವೇದ ಮಹಾವಿದ್ಯಾಲಯದಲ್ಲಿ ಪ್ರಾರಂಭಿಸಲಾದ ಮಾನಸ ಅಧ್ಯಯನ ಕೇಂದ್ರದ ಸದುಪಯೋಗ ಪಡೆದುಕೊಳ್ಳಬೇಕಿದೆ. ದೂರಸಂಪರ್ಕ ಮಾನಸ ಅಧ್ಯಯನ ಕೇಂದ್ರದಲ್ಲಿ ಎಂ.ಎಸ್. ಮತ್ತು ಎಂ.ಎ. ಸ್ನಾತಕೋತ್ತರ ಮತ್ತು ಡಿಪ್ಲೊಮಾ ವಿಭಾಗದಲ್ಲಿ ಒಟ್ಟು ನಾಲ್ಕು ವಿಷಯಗಳನ್ನು ಅಧ್ಯಯನ ಮಾಡಬಹುದಾಗಿದೆ. ಇದರಿಂದ ಮನೋರೋಗಿಗಳಲ್ಲಿ ಮತ್ತು ಆರೋಗ್ಯವಂತರನ್ನು ಸಹ ಮಾನಸಿಕ ಆರೋಗ್ಯದ ಕುರಿತು ಆಪ್ತಸಮಾಲೋಚನೆ ಮಾಡಬಹುದಾಗಿದೆ ಎಂದು ವಿವರಿಸಿದರು.
ಮನೋವಿಜ್ಞಾನದ ಮೂಲಕ ಮಾನಸಿಕ ಆರೋಗ್ಯದ ಬಗ್ಗೆ ಜನಜಾಗೃತಿ ಮೂಡಿಸುವುದು ಮತ್ತು ಸಮಾಜದಲ್ಲಿನ ಕಂದಾಚಾರ, ಮೂಢನಂಬಿಕೆ ತೊಡೆದುಹಾಕಿ ಸ್ವಾಸ್ಥ್ಯ, ಮಾನಸಿಕ ಆರೋಗ್ಯದ ಪರಿಕಲ್ಪನೆ ನೀಡಲಾಗುವುದು. ಮನುಷ್ಯ ಮಾನಸಿಕ ಕಾಯಿಲೆಗಳಿಂದ ತೊಂದರೆಪಡುತ್ತಿದ್ದಾನೆ ಎಂದು ವಿಷಾದವ್ಯಕ್ತಪಡಿಸಿದ ಅವರು, ಮಾನಸಿಕ ಕಾಯಿಲೆಗಳಿಂದಲೇ ಇತ್ತೀಚಿನ ದಿನಗಳಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ. ವಿಶ್ವದಲ್ಲಿ ಸಾಮಾನ್ಯವಾಗಿ ಮಾನಸಿಕ ಕಾಯಿಲೆಗಳಲ್ಲಿ ಮಾರಕ ರೋಗಗಳು ಪ್ರಥಮ ಹತ್ತು ಸ್ಥಾನಗಳಲ್ಲಿ ಖಿನ್ನತೆ, ಆತ್ಮಹತ್ಯೆ, ಮಾದಕ ದ್ರವ್ಯಗಳ ವ್ಯಸನ, ಬಹು ಅಂಗವೈಕಲ್ಯತೆಯಂತಹ ಸಮಸ್ಯೆಗಳು ಮನುಷ್ಯನನ್ನು ಬಾಧಿಸುತ್ತಿವೆ ಎಂದರು.
ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಜಿ.ಬಿ.ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧಿಕಾರಿಗಳ ಕಚೇರಿಯ ಕಾನೂನು ಸಲಹೆಗಾರ ಎಸ್.ಜಿ. ಪಲ್ಲೇದ, ಡಾ. ರಜನಿ ಪೈ ಇತರರು ವೇದಿಕೆಯಲ್ಲಿದ್ದರು. ಗುಲ್ಬರ್ಗ ಮಾನಸ ಅಧ್ಯಯನ ಕೇಂದ್ರದ ಸಂಯೋಜಕ ಎಸ್.ಎಸ್. ಹಿರೇಮಠ ಪರಿಚಯಿಸಿದರು. ಗದುಗಿನ ಮಾನಸ ಅಧ್ಯಯನ ಕೇಂದ್ರದ ಸಂಯೋಜಕ ಡಾ. ಬೂದೇಶ ಕನಾಜ ಸ್ವಾಗತಿಸಿದರು. ಅರ್ಚನಾ, ದಿವ್ಯಾ ನಿರೂಪಿಸಿದರು. ಡಾ. ರವಿ ನಂದಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.