ಗಾಂಧೀಜಿ ಮಂದಿರ ನಿರ್ಮಾಣ: ಸ್ವಾಗತಾರ್ಹ
ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ, ಆ. 11
ಪಟ್ಟಣದ ಹೃದಯ ಭಾಗ ಸೋಮೇಶ್ವರ ಪಾದಗಟ್ಟಿ ಹತ್ತಿರ ಇರುವ ಜಾಗೆಯಲ್ಲಿ ಗಾಂಧೀಜಿ ಮಂದಿರ ನಿರ್ಮಾಣ ಮಾಡಲು ಮುಂದಾಗಿರುವುದು ಸ್ವಾಗತಾರ್ಹ ಎಂದು ಪಟ್ಟಣದ ಯುವಕರು ಸಂತಸ ವ್ಯಕ್ತಪಡಿಸಿದ್ದಾರೆ.
ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾನ್ ಚೇತನ ಮಹಾತ್ಮಾ ಗಾಂಧೀಜಿಯವರ ಮಂದಿರ ನಿರ್ಮಾಣ ಮಾಡಲು 1948ರಲ್ಲೇ ಶಂಕು ಸ್ಥಾಪನೆ ಮಾಡಿದ್ದು, ಆದರೆ ಇದುವರೆಗೂ ಆ ಸ್ಥಳ ಮಂದಿರ ನಿರ್ಮಾಣವಾಗದೆ ಪಾಳು ಬಿದ್ದಿತ್ತು.
ಆಗಸ್ಟ್ 15 ರಂದು ಮಾತ್ರ ಇಲ್ಲಿ ಧ್ವಜಾರೋಹಣ ಮಾಡಿದ ನಂತರ ಮಂದಿರ ನಿರ್ಮಾಣದ ವಿಷಯ ಮರೆತು ಹೋಗುತ್ತಿತ್ತು. ಆದರೆ ಪಟ್ಟಣದ ಹಿರಿಯರು ಹಾಗೂ ಯುವಕರು ಸೇರಿಕೊಂಡು ಆ ಸ್ಥಳದಲ್ಲಿ ಮಂದಿರ ನಿರ್ಮಾಣ ಮಾಡುವುದು ಸೇರಿದಂತೆ ಜಾಗೆಯ ಸುತ್ತಲೂ ಕಬ್ಬಿಣದ ಕಟಾಂಜನವನ್ನು ನಿರ್ಮಾಣ ಮಾಡಲು ಉದ್ದೇಶಿಸಿದ್ದಾರೆ. ಗಾಂಧೀಜಿ ಮಂದಿರವನ್ನು ಸ್ಥಾಪಿಸಲು ನಗರದ ಹಿರಿಯ ಜೀವಿ ಹಾಗೂ ಅಂದಿನ ಪುರಸಭೆಯ ಅಧ್ಯಕ್ಷರಾಗಿದ್ದ ತಟ್ಟಿ ಅಣ್ಣಾ ಅವರು ಎಂದು ನಗರದಲ್ಲಿ ಎಲ್ಲರೂ ಹೆಮ್ಮೆಯಿಂದ ಕರೆಯಲ್ಪಡುತ್ತಿದ್ದ ಬಸಟ್ಟೆಪ್ಪ ತಟ್ಟಿ ಅವರು 12-2-1948 ರಲ್ಲಿಯೇ ಗಾಂಧಿ ಮಂದಿರ ಸ್ಥಾಪನೆಗೆ ಅಡಿಗಲ್ಲನ್ನು ಇರಿಸಿದ್ದರು.
ಸುಮಾರು 65 ವರ್ಷಗಳು ಗತಿಸುತ್ತಾ ಬಂದರೂ ಅದು ಈಡೇರುವ ಯಾವುದೇ ಲಕ್ಷಣ ಕಾಣದಂತಾಗಿತ್ತು. ಪಟ್ಟಣದ ಪ್ರಮುಖ ಜನನಿಬಿಡ ರಸ್ತೆಯಲ್ಲಿರುವ ಜಾಗವನ್ನು ಗಾಂಧೀಜಿ ಮಂದಿರ ನಿರ್ಮಿಸುವ ಸಲುವಾಗಿಯೇ ನೀಡಲಾಗಿತ್ತು. ಅದಕ್ಕಾಗಿ ನಗರದ ಪ್ರಮುಖರಿಬ್ಬರನ್ನು ಹಿರಿಯರನ್ನಾಗಿ ನೇಮಿಸಲಾಗಿತ್ತು. ಮುಂದೆ ಆ ಹಿರಿಯರು ಕಾಲವಾದ ನಂತರ ಚಂಬಣ್ಣ ಬಾಳಿಕಾಯಿ ಹಾಗೂ ಭರತಣ್ಣ ಬರಿಗಾಲಿಯವರನ್ನು ಇದಕ್ಕೆ ಮುಖ್ಯಸ್ಥರೆಂದು ನೇಮಿಸಲಾಗಿದೆ. ಆ ಕಟ್ಟಡಕ್ಕಾಗಿ ವಿವಿಧ ಮೂಲಗಳಿಂದ ಈಗಾಗಲೇ ರು. 9 ಲಕ್ಷಕ್ಕೂ ಅಧಿಕ ಹಣ ಸಂಗ್ರಹವಾಗಿದೆ.
ಈಗ ಮಂದಿರ ನಿರ್ಮಾಣ ಕಾರ್ಯ ಪ್ರಾರಂಭವಾಗುತ್ತಿದೆ. ಈ ಕಟ್ಟಡ ನಿರ್ಮಾಣ ಮಾಡಲು ಯುವಪೀಳಿಗೆ ಹಾಗೂ ಹಿರಿಯರು ಮುಂದಾಗಿರುವುದು ಶ್ಲಾಘನೀಯ ಎಂದು ಯುವಕರಾದ ಸತೀಶ ಮೆಕ್ಕಿ, ವಿರೂಪಾಕ್ಷಪ್ಪ ಶಿರಹಟ್ಟಿ, ಯಲ್ಲಪ್ಪ ಜಬಡಿ, ರಾಮಣ್ಣ ಗೌರಿ, ದುಂಡೇಶ ಗೌರಿ, ಮಹೇಶ ಬಾಳಿಕಾಯಿ, ಈರಪ್ಪ ಶಿರಹಟ್ಟಿ, ಬಸಪ್ಪ ಕಣವಿ, ಸೋಮಣ್ಣ ಗೌರಿ ಮುಂತಾದವರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

