ಸಹಕಾರಿ ಕಾಯ್ದೆ ತಿಳಿವಳಿಕೆ ಆವಶ್ಯಕ
ಗದಗ: ಸಂವಿಧಾನದ 97ನೇ ತಿದ್ದುಪಡಿಯ ಅನ್ವಯ ಸಹಕಾರಿ ಕಾಯ್ದೆಯಲ್ಲಿ ಆಮೂಲಾಗ್ರ ಬದಲಾವಣೆಗಳಾಗಿದ್ದು, ಈ ಕುರಿತು ಸಹಕಾರಿ ಕ್ಷೇತ್ರದಲ್ಲಿರುವವರು ತಿಳಿದುಕೊಳ್ಳುವುದು ಅವಶ್ಯವಾಗಿದೆ ಎಂದು ಜಿಲ್ಲಾ ಸಹಕಾರಿ ಸಂಘಗಳ ಉಪ ನಿಬಂಧಕಿ ಸಾವಿತ್ರಿ ಕಡಿ ಹೇಳಿದರು. ಅವರು ಮಂಗಳವಾರ ನಗರದ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಸಭಾಭವನದಲ್ಲಿ ರಾಜ್ಯ ಸಹಕಾರ ಮಹಾಮಂಡಳ, ರಾಜ್ಯ ಸಹಕಾರ ಚುನಾವಣಾ ಆಯೋಗ, ಜಿಲ್ಲಾ ಸಹಕಾರಿ ಯೂನಿಯನ್ ಹಾಗೂ ಸಹಕಾರಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ಸಹಕಾರ ಚುನಾವಣಾ ಆಯೋಗ ನೇಮಕ ಮಾಡಿದ ಚುನಾವಣಾಧಿಕಾರಿಗಳಿಗೆ ಹಾಗೂ ಮುಖ್ಯ ಕಾರ್ಯ ನಿರ್ವಾಹಕರುಗಳಿಗೆ ವಿಶೇಷ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಕಾಯ್ದೆ ತಿದ್ದುಪಡಿಯಿಂದ ಸಹಕಾರಿ ಚುನಾವಣೆಗಳಿಗಾಗಿ ಪ್ರತ್ಯೇಕ ಸಹಕಾರ ಚುನಾವಣಾ ಆಯೋಗ ರಚಿಸಲಾಗಿದ್ದು, ಸಾರ್ವತ್ರಿಕ ಚುನಾವಣೆಗಳ ಮಾದರಿಯಲ್ಲಿಯೇ ಈ ಬಾರಿ ಸಹಕಾರಿ ಚುನಾವಣೆಗಳು ಜರುಗಲಿವೆ. ಚುನಾವಣಾ ಸಿಬ್ಬಂದಿ ಆಯೋಗಕ್ಕೆ ಅಧೀನಕ್ಕೆ ಒಳಪಟ್ಟು ಕಾರ್ಯ ನಿರ್ವಹಿಸಬೇಕು. ಚುನಾವಣೆಯ ಕುರಿತು ನೀಡುತ್ತಿರುವ ಈ ತರಬೇತಿಯನ್ನು ಸಿಬ್ಬಂದಿ ಸದುಪಯೋಗ ಪಡಿಸಿಕೊಂಡು, ನಿಷ್ಪಕ್ಷಪಾತ ಚುನಾವಣೆಗಳನ್ನು ನಡೆಸುವ ನಿಟ್ಟಿನಲ್ಲಿ ಗಮನ ನೀಡಬೇಕು ಎಂದರು. ಮುಖ್ಯ ಸಂಪನ್ಮೂಲ ಅಧಿಕಾರಿ ಎಸ್.ಎಸ್. ಹಾದಿಮನಿ ವಿಶೇಷ ತರಬೇತಿ ನೀಡಿದರು. ಸಹಕಾರಿ ಸಂಘಗಳ ಸಹಾಯಕ ನಿಬಂಧಕಿ ಎಸ್.ಬಿ. ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಶ್ರೀಮತಿ ಶಿವನಗೌಡ್ರ ಪ್ರಾರ್ಥಿಸಿದರು. ಹಾಲಪ್ಪ ಕೋಡಿಹಳ್ಳಿ ನಿರೂಪಿಸಿದರು. ರವಿ ಕಲ್ಲನಗೌಡ್ರ ವಂದಿಸಿದರು. ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ್ದ ವಿಶೇಷ ಚುನಾವಣಾಧಿಕಾರಿಗಳು ಹಾಗೂ ಸಿಬ್ಬಂದಿ ತರಬೇತಿಯಲ್ಲಿ ಪಾಲ್ಗೊಂಡಿದ್ದರು.
ದುಶ್ಚಟಗಳಿಂದ ದೂರವಿರಿ: ಅರಬರ
ಗದಗ: ಆಟೋ ಚಾಲಕರು ದುಶ್ಚಟಗಳಿಂದ ದೂರವಿದ್ದು, ಉತ್ತಮ ಆರೋಗ್ಯ ಹೊಂದಬೇಕು ಎಂದು ಟಂಟಂ ಮಾಲೀಕರ ಚಾಲಕರ ಸಂಘದ ಉಪಾಧ್ಯಕ್ಷ ಬಾಲರಾಜ ಅರಬರ ಹೇಳಿದರು. ಅವರು ಈಚೆಗೆ ಬಡವರ ಬಂಧು ಟಂ ಟಂ ಆಟೋ ಮಾಲೀಕರ ಹಾಗೂ ಚಾಲಕರ ಸಂಘದ ವತಿಯಿಂದ ಗದಗ ಆರ್ಟಿಒ ಕಚೇರಿಯಿಂದ ಕೊಡಮಾಡಿದ ಕಲಿಕೆ ವಾಹನ ಚಾಲನೆ ಪ್ರಮಾಣ ಪತ್ರ ವಿತರಣಾ ಸಮಾರಂಭದಲ್ಲಿ ಮಾತನಾಡಿದರು. ಹಣವನ್ನು ಉತ್ತಮ ಭವಿಷ್ಯಕ್ಕಾಗಿ ಬಳಕೆ ಮಾಡಿ ಎಂದರು. ಬೆಟಗೇರಿ ಪಿಎಸ್ಐ, ಎಂ.ಬಿ. ಮೋಖಾಶಿ, ದಲಿತ ಸಂಘರ್ಷ ಸಮಿತಿ ಅಂಬೇಡ್ಕರವಾದ ಜಿಲ್ಲಾ ಸಂಚಾಲಕ ಮುತ್ತಪ್ಪ ಭಜಂತ್ರಿ ಮಾತನಾಡಿದರು. ಟಂಟಂ ಸಂಘದ ಅಧ್ಯಕ್ಷ ರಾಮಣ್ಣ ಕಟ್ನಳ್ಳಿ ಅಧ್ಯಕ್ಷತೆ ವಹಿಸಿದ್ದರು. ಯಮನೂರ ಇಳಕಲ್ಲ, ಕುಮಾರ ಕಮತರ, ರಾಜು ದುಗ್ಗಾಣಿ, ಯಲ್ಲಪ್ಪ ಭಜಂತಿ, ಲಕ್ಷಣ ಕುರಿ, ಶಂಕ್ರಪ್ಪ ಶಿರೋಳ ಹಾಗೂ ಇನ್ನಿತರರಿದ್ದರು.
ಸ್ವಾತಂತ್ರ್ಯ ಹೋರಾಟಗಾರರು ಇಂದಿಗೂ ಮಾದರಿ: ಕಟ್ಟಿಮನಿ
ಕನ್ನಡಪ್ರಭ ವಾರ್ತೆ, ಗದಗ, ಆ. 15
ದೇಶದ ಹಲವು ಮಹಾನ್ ನಾಯಕರು ದೇಶದ ಸ್ವಾತಂತ್ರ್ಯೋತ್ಸವಕ್ಕಾಗಿ ತಮ್ಮ ಪ್ರಾಣವನ್ನೇ ಬಲಿ ನೀಡಿದ್ದಾರೆ. ಅಂತಹ ಮಹಾನ್ ನಾಯಕರ ಆದರ್ಶಗಳು ಇಂದಿನ ಯುವ ಮಿತ್ರರಿಗೆ ಮಾದರಿ ಎಂದು ರಾಜೇಶ ಕಟ್ಟಿಮನಿ ಹೇಳಿದರು.
ಅವರು ಗುರುವಾರ ನಗರದ ರಾಜೀವಗಾಂಧಿ ನಗರದ ಪ್ರಜಾಪ್ರಭುತ್ವ ರಕ್ಷಣಾ ಸಮಿತಿ ಹಾಗೂ ಗಜಾನನ ಮಿತ್ರ ಮಂಡಳಿ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ 67ನೇ ಸ್ವಾತಂತ್ರ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಎನ್. ಶಿವಶಿಂಪಿಗೇರ ಮಾತನಾಡಿ, ಎಲ್ಲ ಸಮಾಜದ ಹಿರಿಯರಲ್ಲಿ ಮಕ್ಕಳಿಗೆ ಸ್ವಾತಂತ್ರ್ಯೋತ್ಸವದ ಮಹತ್ವವನ್ನು ತಿಳಿಸಿಕೊಟ್ಟು ಪ್ರತಿಯೊಬ್ಬರು ಭಾರತ ದೇಶದ ಸೈನಿಕರಂತೆ ಶಿಸ್ತು ಮತ್ತು ಶಿಕ್ಷಣ ಕಲಿಸಲೇಬೇಕು ಎಂದರು.
ಶ್ರೀಕಾಂತ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಕೇಶ ಘೋರ್ಪಡೆ, ವಸಂತ ಕಣವಿ, ಬಸವರಾಜ ಬಂಡಿವಾಡಮಠ, ಬಸವರಾಜ ಬದಾಮಿ, ರುದ್ರೇಶ ಕಣವಿ, ಬಾಬು ಶಿವಶಿಂಪಗೇರ, ರಾಜು ಘೋರ್ಪಡೆ, ಪ್ರಕಾಶ ಭಜಂತ್ರಿ, ಮಲ್ಲೇಶ, ಮಂಜು ಅಗಸಿಮನಿ, ಕರೀಮಸಾಬ ಕಲೇಗಾರ, ವೀರಯ್ಯ ಕಾರಡಗಿಮಠ, ಸುರೇಶ ನಿದ್ರೆ, ಅಶೋಕ ನರಗುಂದ, ಸುಭಾಸ ಐಹೊಳೆ ಮುಂತಾದವರು ಇದ್ದರು. ಇಮಾಮಸಾಬ ಕಲೇಗಾರ ನಿರೂಪಿಸಿದರು. ವಾಸು ಹುಯಿಲಗೋಳ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

