ಗದಗ

ಸಾಧನೆಗೆ ಕ್ರಿಯಾಶೀಲತೆ ಮುಖ್ಯ: ಡಾ. ಶಿರೂರ

Published On :

ಕನ್ನಡಪ್ರಭ ವಾರ್ತೆ, ರೋಣ, ಆ. 16
ಸಾಧನೆ ಮತ್ತು ಭವಿಷ್ಯದ ಜೀವನ ಉಜ್ವಲಗೊಳ್ಳಲು ಮನಸ್ಸಿನ ಸ್ಥಿರ ಚಿತ್ತತೆ, ಸದ್ವರ್ತನೆ ಮತ್ತು ಕ್ರಿಯಾಶೀಲತೆ ಅತ್ಯಂತ ಮುಖ್ಯ ಎಂದು ವಿಶ್ರಾಂತ ಪ್ರಾಧ್ಯಾಪಕ ಡಾ. ಬಿ.ವಿ. ಶಿರೂರ ಹೇಳಿದರು.
ಅವರು ಶುಕ್ರವಾರ ಪಟ್ಟಣದ ಕನಕದಾಸ ಶಿಕ್ಷಣ ಸಂಸ್ಥೆಯ ಶರಣಬಸವೇಶ್ವರ ಸಂಯುಕ್ತ ಪಪೂ ಮಹಾವಿದ್ಯಾಲಯ ಮತ್ತು ಕೆಎಸ್‌ಎಸ್ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ 2013-14ನೇ ಸಾಲಿನ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆ ಉದ್ಘಾಟಿಸಿ ಮಾತನಾಡಿದರು.
ಕ್ರೀಡಾ ಚಟುವಟಿಕೆಯಿಂದ ಸರ್ವ ಸಂಪತ್ತನ್ನು ಪಡೆಯಬಹುದು. ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆ ಅನಾವರಣಗೊಳಿಸಲು ಸೂಕ್ತ ವೇದಿಕೆ ಅವಶ್ಯಕತೆಯಿದೆ. ವಿದ್ಯಾರ್ಥಿ ದಿಶೆಯಿಂದಲೇ ಪ್ರತಿ ಕ್ಷೇತ್ರದ ಬಗ್ಗೆ ಆಳವಾದ ಜ್ಞಾನ ಹೊಂದಬೇಕು. ಅದು ಭವಿಷ್ಯದ ಜೀವನಕ್ಕೆ ಆಸರೆಯಾಗಲಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಡಾ. ಬಿ.ಎಪ್. ದಂಡಿನ, ಸಾನ್ನಿದ್ಯ ವಹಿಸಿದ್ದ ಗುಲಗಂಜಿ ಮಠದ ಗುರವಾದ ಶ್ರೀಗಳು ಮಾತನಾಡಿದರು.
ಜಾನಪದ ಕಲಾವಿದ ರಾಮಕೃಷ್ಣ ಪೂಜಾರ ಅವರಿಂದ ಜಾನಪದ ನಡೆದು ಬಂದ ದಾರಿ, ಇಂದಿನ ಸ್ಥಿತಿ ಕುರಿತು ಉಪನ್ಯಾಸ ಜರುಗಿತು. 2013-14ನೇ ಸಾಲಿನ ಕಾಲೇಜ್ ವಿದ್ಯಾರ್ಥಿ ಸಂಸತ್ ಪದಾಧಿಕಾರಿಗಳಿಗೆ ದೈಹಿಕ ಶಿಕ್ಷಕ ಬಿ.ಎನ್. ಸುಗ್ಗಿ ಪ್ರತಿಜ್ಞಾವಿಧಿ ಬೋಧಿಸಿದರು. ಪ್ರಾಚಾರ್ಯ ಡಾ. ವಿ.ಬಿ. ಸಣ್ಣಸಕ್ಕರಗೌಡ್ರ, ಎಸ್.ಬಿ. ಜಗಾಪುರ, ವೈ.ಬಿ. ಹೊಳಗಿ, ಎಸ್.ಬಿ. ಶಿರಗುಂಪಿ, ಪಿ.ಬಿ. ಗೊಗೇರಿ, ಆರ್.ಎನ್. ಉಮಚಗಿ, ಜ್ಯೋತಿ ಹೊಸಮಠ, ಮುಂತಾದವರು ಇದ್ದರು. ಬಿ.ಎಸ್. ಜೋಗಿ ಸ್ವಾಗತಿಸಿದರು. ಡಾ. ಎಸ್.ಎಂ. ಸಜ್ಜನ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.