ಆಟೋ ಚಾಲಕರ ಕಾರ್ಯಕ್ಕೆ ಎಚ್ಕೆ ಶ್ಲಾಘನೆ
ಕನ್ನಡಪ್ರಭ ವಾರ್ತೆ, ಗದಗ, ಆ. 19
ಜನರನ್ನು ಅವರ ನಿಗದಿತ ಸ್ಥಳಗಳಿಗೆ ಸುರಕ್ಷಿತವಾಗಿ ತಲುಪಿಸುವ ಆಟೋ ರಿಕ್ಷಾ ಚಾಲಕರ ಕಾರ್ಯ ಶ್ಲಾಘನೀಯ. ಶಿಸ್ತು ಹಾಗೂ ಸಂಯಮದಿಂದ ಮಾತ್ರ ಏಳ್ಗೆ ಸಾಧ್ಯ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಅವರು ಈಚೆಗೆ ಯಂಗ್ ಇಂಡಿಯಾ ಪರಿವಾರ ಸಂಸ್ಥೆಯ ಕಾರ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಆಟೋ ರಿಕ್ಷಾ ಚಾಲಕರಿಗೆ ಸಾಲ ಪತ್ರ ವಿತರಿಸಿ ಮಾತನಾಡಿದರು. ಪರಿಶ್ರಮದಿಂದ ಮೇಲೆ ಬಂದಾಗ ಮಾತ್ರ ಸುಖ, ಶಾಂತಿ ಸಿಗುವುದು. ಯಶಸ್ಸಿಗೆ ಯಾವುದೇ ಅಡ್ಡ ದಾರಿ ಇರುದಿಲ್ಲ. ಆಟೋ ರಿಕ್ಷಾ ಚಾಲಕರು ಪರಿಶ್ರಮದಿಂದ ದುಡಿಯುವ ಮೂಲಕ ನಿಮ್ಮನ್ನು ನಂಬಿಕೊಂಡು ಬದುಕುತ್ತಿರುವ ನಿಮ್ಮ ಕುಟುಂಬವನ್ನು ಸುಖಿಯಾಗಿಟ್ಟುಕೊಳ್ಳಲು ಪರಿಶ್ರಮ ವಹಿಸುವಂತೆ ಕೋರಿದರು. ಯಂಗ್ ಇಂಡಿಯಾ ಪರಿವಾರದ ಸಂಸ್ಥಾಪಕ ಅಧ್ಯಕ್ಷ ವೆಂಕನಗೌಡ ಗೋವಿಂದಗೌಡ್ರ, ಸಚಿನ ಪಾಟೀಲ, ಡಾ. ಪವನ ಪಾಟೀಲ, ರಮೇಶ ಹೊನ್ನಿನಾಯ್ಕರ, ವಿಜಯ ಕಲ್ಮನಿ, ರಫೀಕ ಜಮಾಲಖಾನ, ಪ್ರಶಾಂತ ಹೊಸಳ್ಳಿ, ಗಂಗಾಧರ ಬ್ಯಾಗೋಟಿ, ಈರಣ್ಣ ಗೆಜ್ಜಳ್ಳಿ, ದಾವಲ್ ಮುಳಗುಂದ ಸೇರಿದಂತೆ ಅನೇಕ ಆಟೋ ಚಾಲಕರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

