ಜನ್ಮದಿನ ಆಚರಣೆ ಅರ್ಥಪೂರ್ಣವಾಗಿರಲಿ
ಹೊಳೆಆಲೂರ: ಇಂದಿನ ದಿನಮಾನಗಳಲ್ಲಿ ಹುಟ್ಟುಹಬ್ಬ ಆಚರಣೆ ಅದ್ಧೂರಿ ಮತ್ತು ಆಡಂಬರದಿಂದ ಆಚರಿಸಲಾಗುತ್ತಿದ್ದು, ಇದರ ಬದಲಾಗಿ ಹುಟ್ಟುಹಬ್ಬವನ್ನು ಬಡ ರೋಗಿಗಳಿಗೆ, ಅಸಾಹಾಯಕರಿಗೆ, ಅಂಗವಿಕಲ, ಅಂಧರಿಗೆ ಸ್ವಲ್ಪವಾದರೂ ಉಪಯೋಗವಾಗುವ ರೀತಿಯಲ್ಲಿ ಆಚರಿಸಿಕೊಳ್ಳಿ. ಇದರಿಂದ ನಿಜವಾದ ಹುಟ್ಟುಹಬ್ಬ ಆಚರಿಸಿದಂತಾಗುತ್ತದೆ ಎಂದು ಗದಗ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಲ್ಲಣ್ಣ ಕೋಳೇರಿ ಹೇಳಿದರು.
ಅವರು ಈಚೆಗೆ ಹೊಳೆಆಲೂರಿನ ಜ್ಞಾನಸಿಂಧು ಅಂಧ ಮಕ್ಕಳ ವಸತಿಯುತ ಶಾಲೆಯಲ್ಲಿ ಹೊಳೆಆಲೂರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಶರಥ ಗಾಣಿಗೇರ ಅವರ 49ನೇ ಹುಟ್ಟುಹಬ್ಬದ ಅಂಗವಾಗಿ ನಡೆದ ಹಾಲು-ಹಣ್ಣು ವಿತರಣೆ ಕಾರ್ಯಕ್ರಮದ ನೇತೃತ್ವವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಗ್ರಾಪಂ ಸದಸ್ಯ ಮಲ್ಲಪ್ಪ ಸಜ್ಜನರ, ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷ ಎಫ್.ಎಸ್.ಚಿಕ್ಕಮಣ್ಣೂರ, ಶ್ರೀಶೈಲಪ್ಪ ಕಾತರಕಿ, ಬಿ.ಎಲ್. ಶಿರಗುಂಪಿ, ಪ್ರವೀಣ ಶೆಲ್ಲಿಕೇರಿ, ಪ್ರವೀಣ ಬ್ಯಾಳಿ, ನಾಸೀರ ಅನಸಾರಿ, ಬಸವರಾಜ ಬೀರನೂರ, ಮಕ್ತುಂ ಚಿಕ್ಕಮಣ್ಣೂರ, ಗುರು ವಸ್ತ್ರದ ಉಪಸ್ಥಿತರಿದ್ದರು. ಚಿಕ್ಕಮಣ್ಣೂರ ಸ್ವಾಗತಿಸಿದರು. ಶೆಲ್ಲಿಕೇರಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

