ಗದಗ

ನಾಳೆ ಚನ್ನಬಸವಣ್ಣ ದೇವಸ್ಥಾನ ಉದ್ಘಾಟನೆ

Published On :

ಕನ್ನಡಪ್ರಭ ವಾರ್ತೆ, ಗದಗ, ಆ. 19
ಆ. 21 ರಂದು ಜೀರ್ಣೋದ್ಧಾರಗೊಂಡ ಬಸವೇಶ್ವರ ನಗರದಲ್ಲಿರುವ ಚನ್ನಬಸವಣ್ಣ (ಕಾಮನಕಟ್ಟಿ ಬಸವಣ್ಣ) ದೇವಸ್ಥಾನದ ಉದ್ಘಾಟನೆ ಹಾಗೂ ಕಳಸಾರೋಹಣ ಸಮಾರಂಭ, ಕುಂಭಮೇಳ, ಚನ್ನಬಸವೇಶ್ವರರ ಭಾವಚಿತ್ರ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಭಾರತ ಬಣಗಾರ ಸಮಾಜದ ಗೌರವಾಧ್ಯಕ್ಷ ಹಾಗೂ ಚನ್ನಬಸವಣ್ಣ ದೇವಸ್ಥಾನದ ಜೀರ್ಣೋದ್ಧಾರ ಉಸ್ತುವಾರಿಗಳಾದ ದಾನಪ್ಪ ತಡಸದ ಹೇಳಿದರು.
ಅವರು ಭಾನುವಾರ ಸಂಜೆ ದೇವಸ್ಥಾನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಆ. 21ರ ಬೆಳಗ್ಗೆ 7.20 ಗಂಟೆಗೆ ಚನ್ನಬಸವಣ್ಣನಿಗೆ ಮಹಾರುದ್ರಾಭಿಷೇಕ, 9 ಗಂಟೆಗೆ ಮಹಾಕುಂಭಮೇಳ ಹಾಗೂ ಚನ್ನಬಸವಣ್ಣನವರ ಭಾವಚಿತ್ರ ಮೆರವಣಿಗೆ ಜರುಗಲಿದ್ದು, ಬಣಗಾರ ಸಮಾಜ ಸೇವಾ ಸಂಘದ ಅಧ್ಯಕ್ಷ ಶಿವಪುತ್ರಪ್ಪ ಶಿವಶಿಂಪಗೇರ ಚಾಲನೆ ನೀಡುವರು. ಕುಂಭಮೇಳಕ್ಕೆ ವೀರಮ್ಮ ಚಳ್ಳಮರದ ಚಾಲನೆ ನೀಡಲಿದ್ದಾರೆ.
ಮಧ್ಯಾಹ್ನ 12ಗಂಟೆಗೆ ಚನ್ನಬಸವಣ್ಣ ದೇವಸ್ಥಾನದ ಜೀರ್ಣೋದ್ಧಾರದ ಉದ್ಘಾಟನೆ ಮತ್ತು ಕಳಸಾರೋಹಣ ಸಮಾರಂಭ ಜರುಗಲಿದ್ದು, ಸಾನ್ನಿಧ್ಯವನ್ನು ಜ. ತೋಂಟದ ಡಾ. ಸಿದ್ಧಲಿಂಗ ಶ್ರೀಗಳು, ಅಡ್ನೂರು ದಾಸೋಹ ಮಠದ ಪಂಚಾಕ್ಷರ ಶಿವಾಚಾರ್ಯರು ವಹಿಸುವರು.
ಉದ್ಘಾಟನೆಯನ್ನು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಎಚ್.ಕೆ. ಪಾಟೀಲ ನೆರವೇರಿಸುವರು. ಅಧ್ಯಕ್ಷತೆಯನ್ನು ಶಂಕರಲಿಂಗಪ್ಪ ಮುನವಳ್ಳಿ ವಹಿಸುವರು. ದಾನಪ್ಪ ತಡಸದ ಹಾಗೂ ಮಹೇಶ ಗಡಾದ ಅವರಿಗೆ ಸನ್ಮಾನ ಕಾರ್ಯಕ್ರಮ ಜರುಗಲಿದ್ದು, ಶ್ರೀಶೈಲಪ್ಪ ಬಿದರೂರ, ಸಂಸದ ಶಿವಕುಮಾರ ಉದಾಸಿ, ವಿಪ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ, ನಗರಸಭೆ ಸದಸ್ಯ ಸದಾನಂದ ಪಿಳ್ಳಿ, ಎಸ್.ಪಿ. ಸಂಶಿಮಠ, ಶಂಕರ ತಡಸದ, ನಗರಸಭೆಯ ಮಾಜಿ ಸದಸ್ಯೆ ಸುಶೀಲಾ ಶೀರಿ, ಗುರುಲಿಂಗಪ್ಪ ತಡಸದ ಮುಂತಾದವರು ಆಗಮಿಸುವರು ಎಂದರು.
ಬಸವರಾಜ ಸಿರಿ, ಗಂಗಾಧರ ಬಡಿಗಣ್ಣವರ, ವೀರೇಶ ಮುನವಳ್ಳಿ, ಗುರುಬಸವಲಿಂಗ ತಡಸದ, ಸಿದ್ಧಲಿಂಗಪ್ಪ ಪಿಳ್ಳಿ, ಡಾ. ವಿ.ವಿ. ಉಮಚಗಿ, ತೊಂಟೇಶ ಬೇವಿನಮರದ, ಸಿದ್ದು ಮಿಣಜಗಿ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.