ಗದಗ

ಪತ್ರಿಕೋದ್ಯಮ ಬದುಕು ರೂಪಿಸುವ ಮಾಧ್ಯಮ

Published On :

ಕನ್ನಡಪ್ರಭ ವಾರ್ತೆ, ಗದಗ, ಆ. 19
ಸಾಹಿತ್ಯ ಮತ್ತು ಪತ್ರಿಕೋದ್ಯಮ ಅಕ್ಷರಗಳ ಮೂಲಕ ಬದುಕು ಕಟ್ಟಿಕೊಡುವ ಮಾಧ್ಯಮವಾಗಿದೆ ಎಂದು ಪತ್ರಕರ್ತ ಬಸವರಾಜ ದಂಡಿನ ಅಭಿಪ್ರಾಯಪಟ್ಟರು.
ಅವರು ಶನಿವಾರ ಗದಗ ತಾಲೂಕು ಪಂಚಾಯತ್ ಆವರಣದಲ್ಲಿರುವ ಗದಗ ಜಿಲ್ಲಾ ಕಸಾಪ ಏರ್ಪಡಿಸಿದ್ದ ಶನಿವಾರ ಸಾಹಿತ್ಯ ಸಂಜೆ ಮಾಲಿಕೆ-34ರಲ್ಲಿ ಸಾಹಿತ್ಯ ಮತ್ತು ಪತ್ರಿಕೋದ್ಯಮ ವಿಷಯವಾಗಿ ಅತಿಥಿ ಉಪನ್ಯಾಸ ನೀಡಿದರು.
ಸಾಹಿತ್ಯ ಒಂದು ಹವ್ಯಾಸವಾದರೆ ಪತ್ರಿಕೋದ್ಯಮ ಒಂದು ಉದ್ಯಮವಾಗಿದೆ. ಪ್ರಾಚೀನ ಕಾಲದಿಂದಲೂ ಮಾನವನ ಮನೋಭೂಮಿಕೆಯಲ್ಲಿ ನಡೆಯುತ್ತ ಬಂದಿರುವ ಸೃಜನಾತ್ಮಕ, ವಾತಾವರಣ, ಭಾವನೆ ಮತ್ತು ಒತ್ತಡಗಳನ್ನು ಸಾಹಿತ್ಯದಲ್ಲಿ ಕಾಣಬಹುದು. ಇದಕ್ಕೆ ಪೂರಕವಾಗಿ ಪತ್ರಿಕೋದ್ಯಮ ಅಕ್ಷರಗಳ ಮೂಲಕ ಬದುಕನ್ನು ಕಟ್ಟಿಕೊಡಲು ಸಾಧ್ಯವಾಗಿದೆ. ಕಲ್ಲಚ್ಚು ಮತ್ತು ಅಚ್ಚುಮೊಳೆಯಿಂದ ಆರಂಭಗೊಂಡ ಮುದ್ರಣ ರಂಗ ಇಂದು ಅತ್ಯಾಧುನಿಕ ಆಫ್‌ಸೆಟ್ ಮುದ್ರಣದೊಂದಿಗೆ, ಅಂತರ್ ಜಾಲದ ಮೂಲಕವೂ ಸಾಹಿತ್ಯ ಮತ್ತು ಪತ್ರಿಕೋದ್ಯಮ ವೈವಿಧ್ಯಮಯವಾಗಿ ಹೊರಹೊಮ್ಮಿದೆ ಎಂದರು. ವರದಿಗಾರ ಸಂಗಮೇಶ ಮೆಣಸಿನಕಾಯಿ ಮಾತನಾಡಿ, ಪತ್ರಿಕೋದ್ಯಮ ಮತ್ತು ಸಾಹಿತ್ಯ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ಸಾಹಿತ್ಯಕ್ಕೆ 3 ಸಾವಿರ ವರ್ಷಗಳ ಇತಿಹಾಸವಿದ್ದರೆ, ಪತ್ರಿಕೋದ್ಯಮಕ್ಕೆ 150 ವರ್ಷಗಳ ಇತಿಹಾಸವಿದೆ. ಈ ಹಿಂದೆ ಪತ್ರಿಕೆಗಳಲ್ಲಿ ಸಾಹಿತ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿತ್ತು. ಆದರೆ, ಇಂದು ಜಾಗತೀಕರಣದ ವಾತಾವರಣದಲ್ಲಿ ಪತ್ರಿಕೋದ್ಯಮ ಸಾಗುತ್ತಿದೆ ಎಂಬ ಭಾವನೆ ಕಂಡು ಬರುತ್ತಿದೆ. ಈ ಹಿನ್ನೆಲೆಯಲ್ಲಿ ಪತ್ರಿಕೆಗಳು ಸಾಹಿತ್ಯಕ್ಕೂ ಆದ್ಯತೆ ನೀಡುವಂತಾಗಬೇಕು. ಯುವ ಪತ್ರಕರ್ತರು ಸಾಹಿತ್ಯವನ್ನು ಬಲ್ಲವರಾಗಿದ್ದರೆ ಪತ್ರಿಕೆಗಳ ಮೌಲ್ಯ ಹೆಚ್ಚುವುದು ಎಂದರು.  
ಅಧ್ಯಕ್ಷತೆ ವಹಿಸಿದ್ದ ಗದಗ ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಶಿವಣ್ಣ ಕುರಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರಾ. ಕೆ.ಎಚ್. ಬೇಲೂರ, ಪ್ರೊ. ಆರ್.ಎಲ್. ಪೊಲೀಸ್‌ಪಾಟೀಲ, ಡಾ. ರಾಜಶೇಖರ ದಾನರೆಡ್ಡಿ, ಮಂಜುನಾಥಗೌಡ ಪಾಟೀಲ, ಪ್ರಭು ಗಂಜಿಹಾಳ, ರಿಯಾಜ ಪಾಷಾ, ಸುಜಾತಾ ಬರದೂರ, ಪ್ರೊ. ಶಕುಂತಲಾ ಸಿಂಧೂರ, ಪ್ರಾ. ಆರ್.ಜಿ. ಚಿಕ್ಕಮಠ, ಪ್ರೊ. ಅಣ್ಣಪ್ಪ ರೊಟ್ಟಿಗವಾಡ, ತಾಲೂಕು ಕಸಾಪ ಅಧ್ಯಕ್ಷ ಕಿಶೋರಬಾಬು ನಾಗರಕಟ್ಟಿ, ಕಾರ್ಯದರ್ಶಿ ಶಶಿಕಾಂತ ಕೊರ್ಲಹಳ್ಳಿ, ಅ.ದ. ಕಟ್ಟಿಮನಿ, ಬಿ.ಎಸ್. ಹಿಂಡಿ, ರಾಜಶೇಖರಯ್ಯ ಕಾಲವಾಡಮಠ, ಬಸವರಾಜ ವಾರಿ, ಶಿಕ್ಷಕ ಪ್ರಕಾಶ ಗಿಡ್ಡಣ್ಣನವರ, ಶರೀಫಸಾಹೇಬ ನದಾಫ ಉಪಸ್ಥಿತರಿದ್ದರು.
ವಾಸು ಟೀಕಾನದಾರ ಪ್ರಾರ್ಥಿಸಿದರು. ಗೌರವ ಕಾರ್ಯದರ್ಶಿ ಶರಣು ಗೋಗೇರಿ ಸ್ವಾಗತಿಸಿದರು. ಗೌರವ ಕೋಶಾಧ್ಯಕ್ಷ ಮಲ್ಲೇಶ ಡಿ.ಎಚ್. ನಿರೂಪಿಸಿದರು. ಶಿಕ್ಷಕ ಎಸ್.ಬಿ. ಗಾಣಿಗೇರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.