ಗದಗ

ಮಹಿಳೆಗೆ ಹೆಚ್ಚಿನ ಪ್ರಾಮುಖ್ಯ ನೀಡಿ

Published On :

ನರೇಗಲ್ಲ: ಮಹಿಳೆಯನ್ನು ಪ್ರಕೃತಿಗೆ ಹೋಲಿಸಲಾಗುತ್ತದೆ. ಅದರಂತೆಯೇ ಇಂದು ನಾವು ಹೆಣ್ಣು ಮಕ್ಕಳಿಗೆ ಉಡಿ ತುಂಬುವುದರಿಂದ ಪ್ರಕೃತಿ ಮಾತೆ ಸಂತೃಪ್ತಗೊಂಡು ಸರಿಯಾದ ಸಮಯಕ್ಕೆ ಮಳೆ, ಬೆಳೆ ಸರಿಯಾಗುವಂತೆ ಮಾಡುತ್ತಾಳೆ. ಆದ್ದರಿಂದ ನಾವೆಲ್ಲರೂ ಮಹಿಳೆಯರಿಗೆ ಹೆಚ್ಚಿನ ಪ್ರಧಾನ್ಯ ನೀಡಬೇಕು ಎಂದು ಹಾಲಕೆರೆಯ ಅಭಿನವ ಅನ್ನದಾನ ಶ್ರೀ ಹೇಳಿದರು.
ಸಮೀಪದ ಹಾಲಕೆರೆಯ ಸಂಸ್ಥಾನಮಠದಲ್ಲಿ ಅನ್ನದಾನೀಶ್ವರರ 36ನೇ ಪುಣ್ಯ ಸ್ಮರಣೋತ್ಸವದ ನಿಮಿತ್ತ ಹಮ್ಮಿಕೊಂಡ 2ನೇ ದಿನದ ಕಾರ್ಯಕ್ರಮದಲ್ಲಿ 101 ಮುತೈದೆಯರ ಉಡಿ ತುಂಬುವ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಮಹಿಳೆ ಇಂದಿನ ದಿನಗಳಲ್ಲಿ ಮಾತ್ರ ಅಲ್ಲ. ಹಿಂದೆ ಸ್ವಾತಂತ್ರ್ಯ ಸಂಗ್ರಾಮದಲ್ಲಿಯೂ ತನ್ನ ಪ್ರಾಬಲ್ಯ ಮೆರೆದಿದ್ದಾಳೆ. ಸ್ವಾತಂತ್ರ್ಯದ ಹೋರಾಟದಲ್ಲಿ ಕಿತ್ತೂರಿನ ರಾಣಿ ಚನ್ನಮ್ಮ ಪ್ರಥಮ ಮಹಿಳೆ ಎನಿಸಿದ್ದಾಳೆ. ದೇಶದ ಪ್ರಮುಖ ಹುದ್ದೆಗಳನ್ನೂ ಅಲಂಕರಿಸಿದ ಕೀರ್ತಿ ಮಹಿಳೆಗೆ ಸಲ್ಲುತ್ತದೆ. ಗ್ರಾಮೀಣ ಮಟ್ಟದ ಮಹಿಳೆಯರು ಇನ್ನೂ ಮುಂದೆ ಬಂದಿಲ್ಲ. ಇದನ್ನರಿತು ಮಹಿಳೆಯರಿಗಾಗಿಯೇ ಹೆಚ್ಚಿನ ಪ್ರಾಶಸ್ತ್ಯ ನೀಡುವ ಉದ್ದೇಶದಿಂದ ಅನ್ನದಾನೀಶ್ವರ ಮಠದಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದೆ. ಕಾರಣ ಲಿಂ. ಅನ್ನದಾನೀಶ್ವರರ ಜಾತ್ರಾ ಮಹೋತ್ಸವದಲ್ಲಿ ಬೆಳ್ಳಿರಥವನ್ನು ಮಹಿಳೆಯರಿಂದಲೇ ಎಳೆಯಿಸಿ ಮಹಿಳೆಗೆ ಸಮಾಜದಲ್ಲಿ ಮುಖ್ಯ ಪಾತ್ರ ವಹಿಸುವಂತೆ ಮಾಡಿದ ಕೀರ್ತಿ ಹಾಲಕೆರೆ ಅನ್ನದಾನೀಶ್ವರ ಮಠಕ್ಕೆ ಸಲ್ಲುತ್ತದೆ ಎಂದರು. ಅಮೀನಗಡದ ಪ್ರಭು ಶಂಕರೇಶ್ವರ ಶ್ರೀ, ಬನವಾಸಿಯ ಶಿವಲಿಂಗ ಶ್ರೀ, ಹಾಲಕೆರೆಯ ನಿಯೋಜಿತ ಉತ್ತರಾಧಿಕಾರಿ ಮುಪ್ಪಿನ ಬಸವಲಿಂಗ ಶ್ರೀಗಳು ಹರ-ಗುರು-ಚರ ಮೂರ್ತಿಗಳು ಇದ್ದರು. ಬಿ.ಜಿ. ಶಿರ್ಶಿ ಹಾಗೂ ಪೂರ್ಣಿಮಾ ಅಂಗಡಿ ನಿರೂಪಿಸಿ, ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.