ಮಕ್ಕಳಿಗೆ ರಾಖಿ ರಚನಾ ಸ್ಪರ್ಧೆ
ಗದಗ: ಮಕ್ಕಳಲ್ಲಿನ ಸುಪ್ತ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಿದಾಗ ಮಕ್ಕಳು ಸರ್ವಾಂಗೀಣ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಗದಗ ಬೆಟಗೇರಿ ಇನ್ನರ್ವೀಲ್ ಕ್ಲಬ್ನ ಅಧ್ಯಕ್ಷೆ ಅನ್ನಪೂರ್ಣ ವರವಿ ಹೇಳಿದರು.
ಅವರು ಸೋಮವಾರ ಗದುಗಿನ ಸಿಡಿಓ ಜೈನ್ ಶಾಲೆಯಲ್ಲಿ ಗದಗ ಬೆಟಗೇರಿ ಇನ್ನರ್ವೀಲ್ ಕ್ಲಬ್ ಶಾಲಾ ಮಕ್ಕಳಿಗಾಗಿ ಆಯೋಜಿಸಿದ್ದ ರಾಖಿ ರಚನಾ ಸ್ಪರ್ಧೆಯ ವಿಜೇತರುಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು.
ಸಿಡಿಓ ಜೈನ್ ಶಾಲೆಯ ಮುಖ್ಯೋಪಾಧ್ಯಾಯಿನಿ ಆರ್.ಪಿ. ಕೋಲಾರ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಅನೇಕ ವೈವಿಧ್ಯಮಯ ಕೌಶಲ್ಯಗಳಿರುತ್ತವೆ ಅವುಗಳನ್ನು ಹೊರಹೊಮ್ಮಿಸಲು ಸೂಕ್ತ ವೇದಿಕೆಯ ಅವಶ್ಯಕತೆ ಇದ್ದು, ಇಂತಹ ಕಾರ್ಯಕ್ರಮಗಳು ಮಕ್ಕಳಿಗೆ ಪ್ರೋತ್ಸಾಹ ನೀಡುತ್ತವೆ ಎಂದರು.
ರಾಖಿ ರಚನಾ ಸ್ಪರ್ಧೆಯಲ್ಲಿ ಪ್ರಾಥಮಿಕ ವಿಭಾಗದಲ್ಲಿ ಸಾಕ್ಷಿ ಜೈನ್ ಪ್ರಥಮ, ವರ್ಧಮಾನ ವಾಸಡ ದ್ವಿತೀಯ, ಶ್ರೀದೇವಿ ಮಾನ್ವಿ ತೃತೀಯ ಸ್ಥಾನ ಪಡೆದುಕೊಂಡರೆ, ಮಾಧ್ಯಮಿಕ ವಿಭಾಗದಲ್ಲಿ ದೃಷ್ಟಿ ಶಹಾ ಪ್ರಥಮ, ಭಾರ್ಗವನ್ ಸೋಗಿ ದ್ವಿತೀಯ ಹಾಗೂ ಭೂಮಿಕಾ ಪಾಟೀಲ ತೃತೀಯ ಸ್ಥಾನ ಪಡೆದುಕೊಂಡರು. ಸುಲೋಚನಾ ಐಹೊಳಿ, ಆರ್.ಎಸ್. ಮಠದ, ಎಂ.ಬಿ. ಹಿರೇಮಠ, ನಿರ್ಣಾಯಕಿ ಖೇತು ಛೆಢಾ, ರಜನಿ ಪಾಟೀಲ, ಶಾಂತಾ ನಿಂಬಣ್ಣವರ, ಮೀನಾಕ್ಷಿ ಸಜ್ಜನರ ಮುಂತಾದವರು ಉಪಸ್ಥಿತರಿದ್ದರು. ಶಾಂತಾ ಮುಂದಿನಮನಿ ಪ್ರಾರ್ಥಿಸಿದರು, ಉಮಾ ಬೇವೂರ ನಿರೂಪಿಸಿದರು. ಎಂ.ಬಿ. ಹಿರೇಮಠ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

