ಗದಗ

ಬಸ್ ಅವ್ಯವಸ್ಥೆ: ವಿದ್ಯಾರ್ಥಿ ಮುಖಂಡರ ಸಭೆ

Published On :

ಗಜೇಂದ್ರಗಡ: ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಸಮರ್ಪಕ ಬಸ್ ವ್ಯವಸ್ಥೆ ಕಲ್ಪಿಸಲು ಆಗ್ರಹಿಸಿ ಸ್ಥಳೀಯ ಭಾರತ್ ವಿದ್ಯಾರ್ಥಿ ಪೆಡರೇಶನ್ (ಎಸ್‌ಎಫ್‌ಐ) ಸಂಘಟನೆ ನೇತೃತ್ವದಲ್ಲಿ ವಿದ್ಯಾರ್ಥಿಗಳು ಈಚೆಗೆ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆಗೆ ಸ್ಪಂದಿಸಿದ ಸಾರಿಗೆ ವ್ಯವಸ್ಥಾಪಕ ಎಚ್.ಟಿ.ಬಳೂಟಗಿ ವಿದ್ಯಾರ್ಥಿ ಮುಖಂಡರ ಸಭೆ ಕರೆದು ಚರ್ಚಿಸಿದರು.
ಗಜೇಂದ್ರಗಡ ಪಟ್ಟಣಕ್ಕೆ ಶಿಕ್ಷಣಕ್ಕಾಗಿ ಸುತ್ತಲಿನ ಗ್ರಾಮಾಂತರ ಪ್ರದೇಶಗಳಿಂದ ಬರುವ ವಿದ್ಯಾರ್ಥಿಗಳ ಬಸ್ ಅನಾನುಕೂಲತೆಯ ಮಾಹಿತಿ ಪಡೆದ ಘಟಕ ವ್ಯವಸ್ಥಾಪಕರು ಕೂಡಲೇ ಆಯಾ ಗ್ರಾಮಗಳಿಗೆ ಬಸ್ ನಿಲುಗಡೆಗೆ ಕ್ರಮಕೈಗೊಳ್ಳಲಾಗುವುದು.
ಇಲಕಲ್‌ದಿಂದ ಗಜೇಂದ್ರಗಡಕ್ಕೆ ಬೆಳಗ್ಗೆ 8.15ಕ್ಕೆ ತಲುಪುವಂತೆ, ಅಲ್ಲದೇ ಹನಮನಾಳದಿಂದ ಬೆಳಗ್ಗೆ 7.45ಕ್ಕೆ ಗಜೇಂದ್ರಗಡಕ್ಕೆ ಮತ್ತು ಕುಷ್ಟಗಿ ಕಡೆಯಿಂದ ಪಟ್ಟಣಕ್ಕೆ ಬರುವ ಬಸ್‌ಗಳನ್ನು ಮಾರ್ಗಮಧ್ಯೆ ಬರುವ ಗ್ರಾಮಗಳಿಗೆ ನಿಲುಗಡೆ ಮಾಡಿಸುವುದಾಗಿ ಭರವಸೆ ನೀಡಿದರು.
ಗಜೇಂದ್ರಗಡದಿಂದ ಮುಶಿಗೇರಿಗೆ ಮಧ್ಯಾಹ್ನ 2.15ಕ್ಕೆ ಹಾಗೂ ಗಜೇಂದ್ರಗಡದಿಂದ ರೋಣಕ್ಕೆ ಸಂಜೆ ಹುಚ್ಚುವರಿ ಬಸ್ ಬಿಡಲಾಗುವುದು ಎಂದರು. ಇದೇ ಸಂದರ್ಭದಲ್ಲಿ ಪಟ್ಟಣದ ಸಮೀಪದಲ್ಲಿನ ಚಿಲಝರಿ, ವಿರಾಪುರ ಗ್ರಾಮದ ವಿದ್ಯಾರ್ಥಿಗಳು ಬಸ್ ಪಾಸ್ ಹೊಂದಿರದ ಬಗ್ಗೆ ಗಮನಕ್ಕೆ ಬಂದಿದ್ದು ಅವರಿಗೂ ಸಾರಿಗೆ ಸಂಸ್ಥೆಯಿಂದ ಬಸ್ ಪಾಸ್ ನೀಡಿ ಗ್ರಾಮಗಳಿಗೆ ಬಸ್ ವ್ಯವಸ್ಥೆ ಕಲ್ಪಿಸುವುದಾಗಿ ಹೇಳಿದರು.
ಸಂಘಟನೆಯ ಜಿಲ್ಲಾಧ್ಯಕ್ಷ ಪೀರು ರಾಠೋಡ, ಉಪಾಧ್ಯಕ್ಷ ಬಾಲು ರಾಠೋಡ, ಶಿವಾನಂದ ಭೂಸಲೆ, ಬಾಲಕೃಷ್ಣ ಜಾಡಬಂಡಿ, ಶಿವು ಚವ್ಹಾಣ, ಪ್ರಕಾಶ ಹೆಳವರ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.