ದೇಶದ ಹಿತಕ್ಕಾಗಿ ಮಡಿದವರ ಸಂಸ್ಮರಣೆ ಅಗತ್ಯ: ಸ್ವಾಮೀಜಿ
ಕನ್ನಡಪ್ರಭ ವಾರ್ತೆ, ಗದಗ, ಆ. 23
ದೇಶದ ಹಿತಕ್ಕಾಗಿ ದುಡಿದ ಮಹನೀಯರ ತ್ಯಾಗಬಲಿದಾನಗಳನ್ನು ಮರೆಯದೆ ಅವರನ್ನು ಸಂಸ್ಮರಣೆ ಮಾಡಿಕೊಳ್ಳುವುದು ಅಗತ್ಯವಾಗಿದೆ ಎಂದು ಜ. ತೋಂಟದ ಡಾ. ಸಿದ್ದಲಿಂಗ ಶ್ರೀಗಳು ಹೇಳಿದರು.
ಅವರು ಈಚೆಗೆ ಜ. ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ಲಿಂಗಾಯತ ಪ್ರಗತಿಶೀಲ ಸಂಘದಾಶ್ರಯದಲ್ಲಿ ನಡೆದ 2133ನೇ ಶಿವಾನುಭವದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಮಕ್ಕಳಲ್ಲಿ ಇಂದು ದೇಶಾಭಿಮಾನ ಬೆಳೆಸಬೇಕಾದುದು ಎಲ್ಲ ಪಾಲಕರ, ಶಿಕ್ಷಕರ ಕರ್ತವ್ಯವಾಗಿದೆ. ನಾಡು-ನುಡಿಯ ಶ್ರೇಷ್ಠತೆಯೊಂದಿಗೆ ದೇಶದ ಹಿರಿಮೆ ಗರಿಮೆಗಳ ಕುರಿತು ಮಕ್ಕಳಲ್ಲಿ ಅರಿವು ಮೂಡಿದಾಗ ಅವರಲ್ಲಿ ದೇಶಾಭಿಮಾನ ಜಾಗೃತಗೊಳ್ಳಲು ಸಾಧ್ಯ. ಅವರೊಬ್ಬ ಉತ್ತಮ ಪ್ರಜೆಯಾಗಲು ಸಾಧ್ಯ. ದೇಶದ ಸ್ವಾತಂತ್ರ್ಯ ಹೋರಾಟ ನಡೆದು ಬಂದ ದಾರಿ ಸ್ಮರಿಸಿದ ಶ್ರೀಗಳು, ದೇಶ ಸೇವೆ ಈಶಸೇವೆಗೆ ಸಮವಾಗಿದೆ ಎಂದರು.
ಸಾಂಸ್ಕೃತಿಕ ಕಾರ್ಯಕ್ರಮ
ಬಸವೇಶ್ವರ ಶಾಲೆ ಮಕ್ಕಳಿಂದ ನಡೆದ ದೇಶಭಕ್ತಿ ಬಿಂಬಿತ ವರ್ಣರಂಜಿತ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಬಸವೇಶ್ವರ ಶಿಶು ಮಂದಿರ ಹಾಗೂ ಬಸವೇಶ್ವರ ಆಂಗ್ಲ ಮತ್ತು ಕನ್ನಡ ಮಾಧ್ಯಮಿಕ ಪ್ರಾಥಮಿಕ ಶಾಲೆ ಮಕ್ಕಳಿಂದ ದೇಶಭಕ್ತಿ ಗೀತೆ, ರೂಪಕ, ರಾಷ್ಟ್ರ ಪುರುಷರ ವೇಷಭೂಷಣ ಪ್ರದರ್ಶನ ನಡೆಯಿತು. ಎಂ.ಎ. ಹಂಚನಾಳ ಅವರಿಂದ ಶ್ರಾವಣ ಮಾಸದಂಗವಾಗಿ ನಡೆದುಕೊಂಡು ಬಂದಿರುವ ಬಸವ ಮಹಾದರ್ಶನ ಪ್ರವಚನ ನಡೆಯಿತು. ಶಿವಾನುಭವ ಭಕ್ತಿಸೇವೆ ವಹಿಸಿದ್ದ ಎಂ.ಎಸ್. ಪಾಟೀಲ, ಆಂಧ್ರದ ಕಣೇಕಲ್ಲನ ವೇಲೂರು ಗಂಗಮ್ಮ ಹಾಗೂ ಕುಟುಂಬ ವರ್ಗದವರಿಗೆ ಶ್ರೀಗಳು ಆಶೀರ್ವದಿಸಿದರು.
ಈ ಸಂದರ್ಭದಲ್ಲಿ ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಪ್ರಕಾಶ ಕರಿಸೋಮನಗೌಡ್ರ, ಉಪಾಧ್ಯಕ್ಷ ಮೃತ್ಯುಂಜಯ ಸಂಕೇಶ್ವರ, ಶಿವಲೀಲಮ್ಮ ಕುರಡಗಿ, ಕಾರ್ಯದರ್ಶಿ ವೀರಣ್ಣ ಹೊನಗಣ್ಣವರ, ಸಹಕಾರ್ಯದರ್ಶಿ ಗುರುಬಸವಲಿಂಗ ತಡಸದ, ಕೋಶಾಧ್ಯಕ್ಷ ಪ್ರಭಯ್ಯ ಹಿರೇಮಠ ಇದ್ದರು. ಶಿವಾನುಭವ ಸಮಿತಿ ಚೇರ್ಮನ್ ಪ್ರೊ. ಎಸ್.ಎನ್. ಆದಿ ಸ್ವಾಗತಿಸಿದರು. ಎಸ್.ಎಂ. ವಾಲಿ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

