ಅತ್ಯಾಚಾರ ಖಂಡಿಸಿ ಛಾಯಾಗ್ರಾಹಕರ ಪ್ರತಿಭಟನೆ
ಗದಗ: ಮುಂಬೈಯಲ್ಲಿ ಪತ್ರಿಕಾ ಛಾಯಾಗ್ರಾಹಕಿ ಮೇಲೆ ಜರುಗಿರುವ ಗ್ಯಾಂಗ್‌ರೇಪ್‌ನ್ನು ಖಂಡಿಸಿ ಗದಗ ಜಿಲ್ಲಾ ಛಾಯಾಗ್ರಾಹಕರ ಕ್ಷೇಮಾಭಿವೃದ್ಧಿ ಹಾಗೂ ವಿವಿಧೋದ್ದೇಶಗಳ ಸಂಘದ ಪದಾಧಿಕಾರಿಗಳು ಶನಿವಾರ ನಗರದ ಗಾಂಧಿವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಮಾನವ ಸರಪಳಿ ನಿರ್ಮಿಸಿ ನಂತರ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಎಸ್.ಎಸ್. ಗೌಡರ ಹಾಗೂ ಕಾರ್ಯದರ್ಶಿ ಶಂಕರ ಗುರಿಕಾರ ಮಾತನಾಡಿ, ಈ ಹಿಂದೆ ಹಲವು ಅತ್ಯಾಚಾರ ಪ್ರಕರಣಗಳು ಜರುಗಿದರೂ ಸಹ ಕೇಂದ್ರ ಸರ್ಕಾರವು ಅತ್ಯಾಚಾರಿಗಳ ವಿರುದ್ಧ ಯಾವುದೇ ಕಠಿಣ ಕ್ರಮ ಕೈಗೊಳ್ಳದೇ ಮೃದು ಧೋರಣೆ ತಾಳಿರುವುದನ್ನು ಖಂಡಿಸಿದರು.
ಕಳೆದ ಕೆಲವು ತಿಂಗಳುಗಳ ಹಿಂದೆ ದೆಹಲಿಯಲ್ಲಿಯೇ ಯುವತಿಯ ಮೇಲೆ ಅತ್ಯಾಚಾರ ನಡೆಸಲಾಗಿತ್ತು. ಈ ಸಂದರ್ಭದಲ್ಲಿಯೂ ಕೇಂದ್ರ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದೇ ಬೇಜವಾಬ್ದಾರಿ ತೋರಿತ್ತು. ಇದರಿಂದಾಗಿ ಈಗ ಮಹಿಳಾ ಛಾಯಾಗ್ರಾಹಕಿಯ ಮೇಲೆ ಅತ್ಯಾಚಾರ ನಡೆದಿದೆ. ಅತ್ಯಾಚಾರಿಗಳಿಗೆ ಕೇಂದ್ರ ಸರ್ಕಾರವು ಗಲ್ಲುಶಿಕ್ಷೆಯಂತಹ ಕಠಿಣ ಕಾನೂನು ಜಾರಿಗೊಳಿಸಬೇಕು. ಈ ಕುರಿತು ಕೇಂದ್ರ ಸರ್ಕಾರವೂ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದೇ ಹೋದಲ್ಲಿ ಛಾಯಾಗ್ರಾಹಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಉಗ್ರವಾದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದರು.
ನಗರದ ಗಾಂಧಿ ವೃತ್ತದಲ್ಲಿ ಕೆಲಕಾಲ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿ ನಂತರ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಜಲಾಶಂಕರ ಶಿದ್ಲಿಂಗ, ವಾದಿರಾಜ ಕುಲಕರ್ಣಿ, ರವೀಂದ್ರ ಕೊಳ್ಳಿ, ಚನ್ನಯ್ಯ ಹಿರೇಮಠ, ಶರತ್ ಮಹೇಂದ್ರಕರ, ರಾಜಶೇಖರ ಕೊಣ್ಣೂರ, ಶಂಕರ ವಡ್ಡಿನ, ಬನ್ನೇಶ ಕುಲಕರ್ಣಿ, ವಿನಾಯಕ ಚೌಡಾಪುರ, ರಾಮು ವಗ್ಗಿ, ದಿಲೀಪ ಮುಂಡರಗಿ, ಭಗೀರಥ ಮಲಜಿ, ಮಂಜುನಾಥ ಮೇರವಾಡೆ, ವಿನೋದ ಬಾಕಳೆ, ಚಿಕ್ಕಪ್ಪ ದೇವರಮನಿ, ಮಂಜು ಲಕಶೆಟ್ಟಿ, ಕೃಷ್ಣಾ ಪವಾರ, ವೈಜನಾಥ ಕೌತಾಳ, ಬಸವರಾಜ ಜಂಗಮನಿ, ಶರಣಪ್ಪ ಕುರ್ತಕೋಟಿ, ಸಂತೋಷ ಭರಮಗೌಡ್ರ, ವಿನಯ ಮುಂಡರಗಿ, ರಾಜೇಂದ್ರ ಬದಿ, ಗುರುನಾಥ ಶಿದ್ಲಿಂಗ, ಈಶ್ವರಯ್ಯ ವಸ್ತ್ರದ, ಪ್ರಕಾಶ ವಸ್ತ್ರದ, ರಾಜು ಧೂಳಾ, ಜಂಭುನಾಥ ಗುಡಗೇರಿ, ಬಸು ಹೊಂಬಾಳಿ, ಗುರು ವಡ್ಡಿನ, ಸಂಗಮೇಶ ಜಕ್ಕಲಿ, ಆರ್.ಕೆ.ಖಾನ್, ಮುರಗೇಶ ಬಿರನೂರ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

