ಸದ್ಭಾವನೆಯಿಂದ ಸಮರಸದ ಬದುಕು: ಕುರಬರ
ಗದಗ: ಸದ್ಭಾವನಾ ಮನಸ್ಥಿತಿ ಹೊಂದಿದಾಗ ಸ್ವಾಸ್ಥ್ಯ ಸಮಾಜ, ಸಜ್ಜನ ಮನಸ್ಸು, ಸೌಹಾರ್ದ ಹಾಗೂ ಸಮರಸದ ಬದುಕು ಸಾಗಿಸಲು ಸಾಧ್ಯ ಎಂದು ಉಪನ್ಯಾಸಕ ಎಫ್.ಎನ್. ಕುರಬರ ಹೇಳಿದರು.
ಈಚೆಗೆ ನಗರದ ವಿಜಯ ಲಲಿತಕಲಾ ಮಹಾವಿದ್ಯಾಲಯದ ರಾಷ್ಟ್ರೀಯ ಸದ್ಭಾವನಾ ದಿನಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಬುದ್ಧೀಜೀವಿಯಾದ ಮಾನವರು ಬಸವಣ್ಣನವರ ವಚನದ ಸಾರ ಅರಿತುಕೊಳ್ಳಬೇಕು. ಜಾತಿ, ಧರ್ಮ, ಬೇಧ, ಭಾವದಲ್ಲಿ ಕೋಮುವಿನ ಕೂಗಿಗೆ ಸಮಾಜ ಬಲಿಯಾಗುತ್ತಿದೆ. ಇದರಿಂದ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯವಿಲ್ಲ. ಅಶಾಂತಿಯ ತಾಣವಾಗಿ ಪ್ರಕೃತಿಯ ವಿಕೋಪಕ್ಕೆ ಬಲಿಯಾಗುತ್ತಿದ್ದೇವೆ. ಯುವಜನತೆ ಸೌಹಾರ್ದ ಬದುಕಿನ ಬಗ್ಗೆ ಜಾಗೃತರಾಗಿ ಸಜ್ಜನ ಸಮಾಜ ನಿರ್ಮಾಣ ಮಾಡಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಪ್ರಭಾರಿ ಪ್ರಾಚಾರ್ಯ ಪ್ರೇಮಾ ಹಂದಿಗೋಳ ಮಾತನಾಡಿ, ಮಾನವ ಕುಲ ಒಂದೆಯಾಗಿದ್ದು, ಪ್ರಾಣಿ-ಪಕ್ಷಿ, ಗಾಳಿ-ನೀರು ರಾಜನಂತೆ ಮೆರೆದಿಲ್ಲ. ಎಲ್ಲ ಪಡೆದು ಜೀವಹಿಡಿದ ಮನುಷ್ಯರು ಏಕೆ ಸಮರಸದಿಂದ ಬಾಳುತ್ತಿಲ್ಲ. ಮಾನವ ಮಾತ್ರ ಕೋಮು ದಳ್ಳುರಿಯ ಸಂಕೊಲೆಗಳಲ್ಲಿ ಸೊರಗುತ್ತಿದ್ದಾನೆ. ಕಾರಣ ಮಾನವರು ಎಲ್ಲ ಭೇದ-ಭಾವ ಮರೆತು ಒಂದು ಎಂದು ಬಾಳುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ಪ್ರತಿಯೊಬ್ಬರೂ ಅನ್ಯೋನ್ಯ ಭಾವ ಹೊಂದಿ ಸಮರಸದ ಬದುಕು ನಡೆಸುವಂತೆ ಕೋರಿದರು. ಮಹಾವಿದ್ಯಾಲಯದ ಪ್ರಾಚಾರ್ಯ ಸಿ.ವಿ. ಬಡಿಗೇರ ಮಾತನಾಡಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕ ಸಂತೋಷ ಅಕ್ಕಿ, ಕೆ.ಎಂ. ಕೃಷ್ಣಾ, ಎಸ್.ವಿ. ಗುಂಜಳ, ಎಸ್.ಎಸ್. ಕಮ್ಮಾರ, ಶರಣಪ್ಪ ಬಿ.ಎಚ್, ವಿ.ಎಫ್. ಕುಂದ್ರಳ್ಳಿ ಇತರರು ಉಪಸ್ಥಿತರಿದ್ದರು. ಉಪನ್ಯಾಸಕ ವಿ.ಬಿ. ಪರ್ವತಗೌಡ್ರ ಪ್ರಾಸ್ತಾವಿಕ ಮಾತನಾಡಿದರು. ಬಸವರಾಜ ನೆಲಜೇರಿ ನಿರೂಪಿಸಿ, ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

