ಇಂದು ಕಾನೂನು ಸಾಕ್ಷರತಾ ಕಾರ್ಯಕ್ರಮ
ನರಗುಂದ: ತಾಲೂಕಿನ ಚಿಕ್ಕನರಗುಂದ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಗಂಡು ಮಕ್ಕಳ ಶಾಲೆಯಲ್ಲಿ ಆ. 27 ರಂದು ಜನ ಸಾಮಾನ್ಯರಿಗೆ, ಹಾಗೂ ಶಾಲಾ ವಿದ್ಯಾರ್ಥಿಗಳಿಗಾಗಿ ಕಾನೂನು ಸಾಕ್ಷರತಾ ಕಾರ್ಯಕ್ರಮವನ್ನು ತಾಲೂಕು ನ್ಯಾಯವಾದಿಗಳ ಸಂಘ, ತಹಸೀಲ್ದಾರ್ ಕಾರ್ಯಾಲಯ, ಸರ್ಕಾರಿ ಪ್ರಾಥಮಿಕ ಶಾಲೆಗಳ ಆಶ್ರಯಗಳಲ್ಲಿ ಆಯೋಜಿಸಲಾಗಿದೆ. ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಟಿ.ಎಚ್. ಆವಿನ, ಎಚ್.ವಿ. ಕಣವಿ, ದಿವಾಣಿ ನ್ಯಾಯಧೀಶೆ ಸರ್ವಮಂಗಳ ಚಿಕ್ಕನಗೌಡರ, ಭಾರತಿ ಹೊಸಮನಿ, ತೋಟಯ್ಯ ವಿರಕ್ತಮಠ, ಬಿ.ವಿ. ತಟವಟ್ಟಿ, ಶಿವಾನಂದ ಯರಗಟ್ಟಿ, ಬಸನಗೌಡ ಮುದ್ದೇನಗೌಡರ, ಫಕೀರಪ್ಪ ಚಲವಾದಿ, ಹನುಮಂತಪ್ಪ ಹೊಸಗಾಣಿಗೇರ, ಎಂ.ಬಿ. ಅಸೂಟಿ, ವಿ.ಎಸ್.ದೇಶಪಾಂಡೆ, ಬಿ.ಎಸ್. ಪಾಟೀಲ, ವಿ.ಡಿ. ಮೊರಬ, ಎಂ.ಎಚ್. ತಹಸೀಲ್ದಾರ್, ಎಂ.ಡಿ. ರಂಗರೆಡ್ಡಿಯವರ, ಎನ್.ಸಿ. ಪಾಟೀಲ ಆಗಮಿಸುವರು ಎಂದು ಪ್ರಕಟಣೆ ತಿಳಿಸಿದೆ.
ಪರೀಕ್ಷೆಗೆ ಅರ್ಜಿ ಆಹ್ವಾನ
ರೋಣ: 2013-14ನೇ ವರ್ಷಕ್ಕೆ ಸಂಬಂಧಿಸಿದಂತೆ ಸರ್ಕಾರಿ, ಅನುದಾನಿತ ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 8 ಮತ್ತು 9ನೇ ವರ್ಗದ ವಿದ್ಯಾರ್ಥಿಗಳಿಗೆ ಎನ್ಎಂಎಂಎಸ್ ಪರೀಕ್ಷೆಗಾಗಿ ಹಾಗೂ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರೌಢಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 10ನೇ ತರಗತಿ ವಿದ್ಯಾರ್ಥಿಗಳಿಗೆ ಎಸ್ಟಿಎಸ್ಇ ಪರೀಕ್ಷೆಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಗಳನ್ನು ಸಿಆರ್ಸಿ ಕೇಂದ್ರಗಳಲ್ಲಿ ಅಥವಾ ಬಿಆರ್ಸಿ ಕೇಂದ್ರ ರೋಣದಲ್ಲಿ ಅಥವಾ ಬಿಇಒ ಕಚೇರಿಯಲ್ಲಿ ವಿತರಿಸಲಾಗುವುದು. ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಸೆ. 10ರೊಳಗೆ ಸಲ್ಲಿಸಬೇಕು ಎಂದು ಬಿಇಓ ಕೆ.ವಿ. ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಹುಮಾನ: ಅರ್ಜಿ ಆಹ್ವಾನ
ರೋಣ: 2012-13ನೇ ಸಾಲಿನಲ್ಲಿ ಪ್ರಥಮ ಯತ್ನದಲ್ಲಿ ಪ್ರಥಮ ಶ್ರೇಣಿಯಲ್ಲಿ ಪಾಸಾದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಬಹುಮಾನ ಹಣ ಮಂಜೂರಾತಿ ಮಾಡಲು ಆನ್ಲೈನ್ ಮೂಲಕ ಅರ್ಜಿ ಕರೆಯಲಾಗಿದೆ. ಅರ್ಹ ವಿದ್ಯಾರ್ಥಿಗಳು ಢಿಢಿಢಿ.ಡಢ್ಞಿಛ್ಠಟ್ಝ್ಛಿ.್ಝಟಿ ಯಲ್ಲಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಪ್ರತಿಭಾ ಪುರಸ್ಕಾರಕ್ಕೆ ಆಹ್ವಾನ
ಗಜೇಂದ್ರಗಡ: ಸ್ಥಳೀಯ ಭೋವಿ (ವಡ್ಡರ) ಸಮಾಜ ವತಿಯಿಂದ ಸಮುದಾಯದ ಬಡ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು. ರೋಣ ತಾಲೂಕಿನ ಭೋವಿ ಸಮಾಜದ ಎಸ್ಎಸ್ಎಲ್ಸಿ, ಪಿಯುಸಿ ಹಾಗೂ ಡಿಗ್ರಿಯಲ್ಲಿ ಶೇ. 70ರಷ್ಟು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ಸೆ. 1ರಂದು ನಡೆಯುವ ಸಮಾರಂಭದಲ್ಲಿ ನೀಡಲಾಗುವುದು. ಆ. 30 ರೊಳಗಾಗಿ ದುರ್ಗಾದೇವಿ ದೇವಸ್ಥಾನ ಟ್ರಸ್ಟ್ ಕಮಿಟಿಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಮೊ. 9448540853, 9164100483 ಇಲ್ಲಿಗೆ ಸಂಪರ್ಕಿಸಬೇಕು.
ಅತ್ಯಾಚಾರ ಖಂಡಿಸಿ ಪ್ರಧಾನಮಂತ್ರಿಗೆ ಮನವಿ
ಮುಂಡರಗಿ: ಇಲ್ಲಿನ ತಾಲೂಕು ಛಾಯಾಗ್ರಾಹಕರ ಕ್ಷೇಮಾಭಿವೃದ್ಧಿ ಸಂಘದಿಂದ ಮುಂಬೈನಲ್ಲಿ ನಡೆದ ಪತ್ರಿಕಾ ಛಾಯಾಗ್ರಾಹಕಿ ಮೇಲೆ ನಡೆದ ಅತ್ಯಾಚಾರ ಖಂಡಿಸಿ ತಹಸೀಲ್ದಾರ್ ಮೂಲಕ ಪ್ರಧಾನಮಂತ್ರಿಗೆ ಮನವಿ ಸಲ್ಲಿಸಲಾಯಿತು.
ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವುದು ಖಂಡನೀಯ. ಇಂತಹ ಹೇಯ ಕೃತ್ಯ ಮಾಡಿರುವ ಆರೋಪಿಗಳನ್ನು ಬಂಧಿಸಿರುವುದನ್ನು ಸ್ವಾಗತಿಸಿದ ಸಂಘ, ಇಂತಹ ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಯುವತಿಯ ಕುಟುಂಬಕ್ಕೆ ಸರ್ಕಾರ ಸೂಕ್ತ ಪರಿಹಾರ ಮತ್ತು ರಕ್ಷಣೆ ನೀಡಬೇಕು ಎಂದು ಆಗ್ರಹಿಸಲಾಯಿತು. ಸಂಘದ ಗೌರವಾಧ್ಯಕ್ಷ ಬಿ.ಬಾಬು, ಕಾಶೀನಾಥ ಕಲಬುರ್ಗಿ, ಮುತ್ತು ಹಾಳಕೇರಿ, ನಾಗರಾಜ ಅರ್ಕಸಾಲಿ, ಉಮೇಶ ದೇವರಮನಿ, ಮಂಜುನಾಥ ತ್ಯಾಮನವರ, ರಾಜಾಭಕ್ಷಿ ಜವಳಿ, ಹನುಮಂತ ರಾಮೇನಹಳ್ಳಿ, ಅಶೋಕ ಭಜಂತ್ರಿ, ರಮೇಶ ಹುಳಕಣ್ಣವರ, ಶಂಭು ಸಂಗನಾಳ, ಅಮರ ಆರಿ, ವಿರೇಶ ಹಡಗಲಿ, ಸುರೇಶ ಕಲಬುರ್ಗಿ ಮುಂತಾದವರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

