ಕುರುಬ ಜನಾಂಗ ಎಸ್ಟಿಗೆ ಸೇರಿಸಿ
ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ಆ. 26
ರಾಜ್ಯದಲ್ಲಿ ಕುರುಬ ಜನಾಂಗ ಅತ್ಯಧಿಕ ಸಂಖ್ಯೆಯಲ್ಲಿರುವ 2ನೇ ದೊಡ್ಡ ಸಮಾಜವಾಗಿದ್ದು, ಈ ಸಮಾಜ ಆರ್ಥಿಕ, ಶೈಕ್ಷಣಿಕ, ಸಾಮಾಜಿಕವಾಗಿ ತೀರಾ ಹಿಂದುಳಿದಿದ್ದು, ಕುರುಬ ಜನಾಂಗವನ್ನು ಪರಿಶಿಷ್ಟ ಪಂಗಡದ (ಎಸ್‌ಟಿ) ವರ್ಗಕ್ಕೆ ಸೇರಿಸುವಂತೆ ಮಾಜಿ ಶಾಸಕ ಎಸ್.ಎನ್. ಪಾಟೀಲ ಆಗ್ರಹಿಸಿದರು.
ಸೋಮವಾರ ಪಟ್ಟಣದ ಬೀರೇಶ್ವರ ದೇವಸ್ಥಾನದ ಆವರಣದಲ್ಲಿ ಜರುಗಿದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, 1936ರಲ್ಲಿ ಅಂದಿನ ಬ್ರಿಟಿಷ್ ಸರ್ಕಾರವು ಕುರುಬ ಜನಾಂಗವನ್ನು ಗೋಂಡ ಜನಾಂಗ ಎಂದು ನಾಮಕರಣಮಾಡಿ ಎಸ್‌ಟಿ ಮೀಸಲಾತಿಗೆ ಒಳಪಡಿಸಿದ್ದು, ಇಂದಿಗೂ ಕೂಡ ಜಾರಿಯಲ್ಲಿದೆ. ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಮೀಸಲಾತಿ ಪಡೆಯುವಲ್ಲಿ ಈ ಜನಾಂಗ ವಂಚನೆಗೊಳಗಾಗಿದೆ ಎಂದು ದೂರಿದರು.
ಈಗಾಗಲೇ ಕ್ಷತ್ರಿಯ, ಮಡಿವಾಳ, ಕಲಾಲ, ಅಕ್ಕಸಾಲಿಗ, ವಿಶ್ವಕರ್ಮ, ದೈವಜ್ಞಬ್ರಾಹ್ಮಣ ಅನೇಕ ಮುಂದುವರೆದ ಸುಮಾರು 120ಕ್ಕೂ ಅಧಿಕ ಜಾತಿಯ ಜನಾಂಗದವರು ಸರ್ಕಾರದ ಸೌಲಭ್ಯ ಪಡೆಯಲು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಯಾಗಿದ್ದು, ತೀರಾ ಹಿಂದುಳಿದಿರುವ ಕುರುಬ ಜನಾಂಗವನ್ನು ಎಸ್ಟಿ ವರ್ಗಕ್ಕೆ ಸೇರಿಸಬೇಕೆಂದು ತಿಳಿಸಿದರು.
ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಬಗ್ಗೆ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಂದ ಕುರುಬ ಜನಾಂಗದ ಸ್ಥಿತಿ-ಗತಿ ಬಗ್ಗೆ ಅಭಿಪ್ರಾಯ ತಿಳಿಸಲು ನಿರ್ದೇಶಕರು ಗಿರಿಜನ ಸಂಶೋಧನಾ ಸಂಸ್ಥೆ, ಆಯುಕ್ತರು ಸಮಾಜ ಕಲ್ಯಾಣ ಇಲಾಖೆಯವರು ಆದೇಶಿದ್ದು, ಅಧಿಕಾರಿಗಳು ಮಾಹಿತಿ ನೀಡಿಲ್ಲ ಎಂದು ಅಪಾದಿಸಿದರು.
ಬರುವ ಸೆಪ್ಟೆಂಬರ್ 16 ರಂದು ತಾಲೂಕಿನ ಸಮಸ್ತ ಹಾಲುಮತ ಕುರುಬ ಜನಾಂಗದವರು ತಹಸೀಲ್ದಾರ್ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸುವುದಾಗಿ ತಿಳಿಸಿದರು.
ಸಿದ್ಧಯ್ಯ ಮಹಾಸ್ವಾಮಿಗಳು, ತಿಪ್ಪಣ್ಣ ಸಂಶಿ, ಸತೀಶಗೌಡ ಪಾಟೀಲ, ಕಾರ್ಯದರ್ಶಿ ಹಾಲಪ್ಪ ಸೂರಣಗಿ, ಸಹ ಕಾರ್ಯದರ್ಶಿ ಸೋಮನಗೌಡ ಮರಿಗೌಡರ, ಸುರೇಶ ಗೌಳಿ, ನಿಂಗಪ್ಪ ಬನ್ನಿ, ಬಿ.ಎನ್. ಬೆಟಗೇರಿ, ದೇವಪ್ಪ ಬಟ್ಟೂರ, ಸೋಮು ಬೆಟಗೇರಿ, ಗೋವಿಂದಪ್ಪ ಶೆರಸೂರಿ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

