ಗದಗ

ಧರ್ಮಸ್ಥಳ ಯೋಜನೆಯಿಂದ ಜನಕಲ್ಯಾಣ: ಶ್ರೀ

Published On :

ಮುಂಡರಗಿ: ಗಾಂಧೀಜಿಯವರು ಕಂಡಿರುವ ಗ್ರಾಮರಾಜ್ಯದ ಕನಸನ್ನು ಧರ್ಮಸ್ಥಳದ ಡಾ೤ ವೀರೇಂದ್ರ ಹೆಗ್ಗಡೆ ಅವರು ನನಸು ಮಾಡುತ್ತಿದ್ದಾರೆ. ಸರ್ಕಾರದ ಯೋಜನೆಗಳು ಒಮ್ಮೊಮ್ಮೆ ಮುಗ್ಗರಿಸಬಹುದು. ಆದರೆ, ಧರ್ಮಸ್ಥಳದ ಯೋಜನೆಗಳು ಸದಾ ಜನರ ಕಲ್ಯಾಣಕ್ಕಾಗಿ ನಿರಂತರ ನಡೆಯುತ್ತಿವೆ ಎಂದು ನಾಡೋಜ ಡಾ೤ ಅನ್ನದಾನೀಶ್ವರ ಶ್ರೀ ಹೇಳಿದರು.
ಪಟ್ಟಣದ ಸ್ವಾಮಿ ವಿವೇಕಾನಂದ ಶಾಲಾ ಆವರಣದಲ್ಲಿ ಹಮ್ಮಿಕೊಂಡಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮುಂಡರಗಿ ವಲಯದ ಸ್ವ-ಸಹಾಯ ಸಂಘಗಳ ಆಶ್ರಯದಲ್ಲಿ ವಲಯದ ಒಕ್ಕೂಟಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಧರ್ಮಸ್ಥಳದ ಹೆಗ್ಗಡೆಯವರು ಒಂದು ಸರ್ಕಾರ ಮಾಡುವಂತಹ ಅನೇಕ ಜನಪರ ಕಾಳಜಿಯ ಕೆಲಸಗಳನ್ನು ಮಾಡುತ್ತಾ ಸ್ವ-ಸಹಾಯ ಸಂಘಗಳ ಸದಸ್ಯರಿಗೆ ಅನೇಕ ವಿಷಯಗಳಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ದೇವಸ್ಥಾನದಲ್ಲಿ ಬಂದಿರುವ ಕಾಣಿಕೆಯನ್ನು ಸಮಾಜದ ಕಲ್ಯಾಣಕ್ಕಾಗಿ ಅಭಿವೃದ್ಧಿ ಕೆಲಸಗಳಿಗೆ ಉಪಯೋಗಿಸುತ್ತಿದ್ದಾರೆ. ಕುಡಿಯಲು ಶುದ್ಧ ನೀರು, ಶೌಚಾಲಯ ನಿರ್ಮಾಣ, ರುದ್ರಭೂಮಿ ಅಭಿವೃದ್ಧಿ, ಪರಿಸರ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡಿರುವುದು ಉಪಯೋಗಕಾರಿಯಾಗಿದೆ ಎಂದರು.
ಶಾಸಕ ರಾಮಕೃಷ್ಣ ದೊಡ್ಡಮನಿ, ಕುರಿ ಹಾಗೂ ಉಣ್ಣೆ ನಿಗಮದ ಮಾಜಿ ಅಧ್ಯಕ್ಷ ವೈ.ಎನ್. ಗೌಡರ, ಪ್ರಗತಿಪರ ರೈತ ಈಶ್ವರಪ್ಪ ಹಂಚಿನಾಳ, ಹೇಮಗಿರೀಶ ಹಾವಿನಾಳ, ಡಾ೤ ಪಿ.ಬಿ. ಹಿರೇಗೌಡ್ರ ಮಾತನಾಡಿದರು. ಸಿದ್ದಲಿಂಗೇಶ್ವರ ಸ್ವ-ಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷೆ ಮಂಗಳಾ ಶೀರಿ ಅಧ್ಯಕ್ಷತೆ ವಹಿಸಿದ್ದರು. ಆಡಳಿತಾಧಿಕಾರಿ ಎಸ್.ಬಿ. ಇಟಗಿ, ಎ.ಕೆ. ಮುಲ್ಲಾನವರ, ಯೋಜನಾಧಿಕಾರಿ ಕೆ. ದಿವಾಕರ, ಮೇಲ್ವಿಚಾರಕ ಶಿವಾನಂದ ಮತ್ತು ನೂತನ ಪದಾಧಿಕಾರಿಗಳು ಉಪಸ್ಥಿತರಿದ್ದರು. ಶಿವಾನಂದ ಸ್ವಾಗತಿಸಿದರು. ಅಕ್ಕಮ್ಮ ಪಾಟೀಲ ವರದಿ ವಾಚಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.