ಗದಗ

ತಾಂಡಾಗಳಲ್ಲಿ ಶಿಕ್ಷಣಕ್ಕೆ ಆದ್ಯತೆ ನೀಡಿ

Published On :

ಕನ್ನಡಪ್ರಭ ವಾರ್ತೆ, ಗದಗ, ಆ. 30
ಇತ್ತೀಚಿನ ದಿನಗಳಲ್ಲಿ ತಾಂಡಾಗಳಲ್ಲಿನ ಜನರು ಶಿಕ್ಷಣಕ್ಕೆ ಮಹತ್ವವನ್ನು ನೀಡುತ್ತಿರುವುದು ಉತ್ತಮ ಬೆಳವಣಿಗೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರಾಜೀವ ನಾಯಕ ಹೇಳಿದರು.
ಅವರು ಗುರುವಾರ ತಾಲೂಕಿನ ಅಡವಿಸೋಮಾಪುರ ಸಣ್ಣತಾಂಡೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ಶ್ರಾವಣ ಮಾಸದ ಅಂಗವಾಗಿ ಸಿಹಿ ಭೋಜನ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ತಾಂಡೆಗಳು ಇನ್ನೂ ಹೆಚ್ಚು ಹೆಚ್ಚು ಶಿಕ್ಷಣ ರಂಗದಲ್ಲಿ ಪ್ರಗತಿ ಸಾಧಿಸುವಂತಾಗಲಿ. ತಾಂಡಾದ ಪಾಲಕರು ತಮ್ಮ ಮಕ್ಕಳಿಗೆ ಶಿಕ್ಷಣ ನೀಡುವಲ್ಲಿ ಹಿಂಜರಿಯಬಾರದು. ಎಷ್ಟೇ ಕಷ್ಟ ಬಂದರೂ ಮಕ್ಕಳ ಶಿಕ್ಷಣಕ್ಕೆ ಧಕ್ಕೆ ಬಾರದಂತೆ ಎಚ್ಚರ ವಹಿಸಬೇಕು. ತಮ್ಮ ಮಕ್ಕಳು ವಿದ್ಯಾವಂತರಾದರೆ ಮುಂದೆ ತಾಂಡಾಗಳು ಅಭಿವೃದ್ಧಿ ಪಥದತ್ತ ಸಾಗಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ತಾಂಡಾದ ಹಿರಿಯರು ಶಾಲೆಗೆ ಸಹಾಯ, ಸಹಕಾರ ನೀಡಬೇಕು ಎಂದರು.
ಗ್ರಾಮೀಣ ಬಿಇಒ ಎಸ್.ಎಸ್. ಗುಡ್ಲಾನೂರ ಮಾತನಾಡಿ, ತಾಂಡಾ ಜನರು ಶೈಕ್ಷಣಿಕ ಬೆಳವಣಿಗೆಗೆ ಶ್ರಮವಹಿಸಿ, ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡಲು ಮುಂದಾಗಬೇಕೆಂದು ಹೇಳಿದರು. ಕ್ಷೇತ್ರ ಸಮನ್ವಯಾಧಿಕಾರಿ ವಿ.ವಿ. ನಡುವಿನಮನಿ, ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಎಸ್.ಎನ್. ಬಳ್ಳಾರಿ, ತಾಲೂಕು ಅಧ್ಯಕ್ಷ ಡಿ.ಎಸ್. ತಳವಾರ, ಶಿವಕುಮಾರ ರಾಠೋಡ ಮಾತನಾಡಿದರು.
ಪ್ರತಿಭಾವಂತ ವಿದ್ಯಾರ್ಥಿಗಳಾದ ಅನಿಲ ರಾಠೋಡ, ಸಾವಿತ್ರಿ ಪವಾರ, ಗೋಪಾಲ ಲಮಾಣಿ, ಮಂಜುನಾಥ ಲಮಾಣಿ, ಮಹಾಂತೇಶ ರಾಠೋಡ, ಆಶಾ ಪವಾರ, ನೇತ್ರಾವತಿ ಪವಾರ, ನವೀನ ಲಮಾಣಿ, ಸುನೀಲ ರಾಠೋಡ, ಅನಸೂಯಾ ರಾಠೋಡ, ಜ್ಯೋತಿ ಪವಾರ, ಪ್ರೇಮಾ ರಾಠೋಡ ಅವರನ್ನು ಸನ್ಮಾನಿಸಲಾಯಿತು.
ಎಸ್‌ಡಿಎಂಸಿ ಅಧ್ಯಕ್ಷ ಸೋಮಪ್ಪ ಲಮಾಣಿ ಅಧ್ಯಕ್ಷತೆ ವಹಿಸಿದ್ದರು. ಶಹರ ಘಟಕದ ಅಧ್ಯಕ್ಷ ಬಿ.ಬಿ. ಕುಂದಗೋಳ, ಸಿಆರ್‌ಪಿ ಜಿ.ಎಸ್. ಸರಖಾಜಿ, ವಿಶ್ವನಾಥ ಕಮ್ಮಾರ, ಪಿ.ಬಿ. ಮುಧೋಳಮಠ, ಬಿ.ಎಂ. ಹಿರೇಮಠ, ಕೆ.ಎಸ್. ಕಳಕಣ್ಣವರ, ಎಸ್.ಎಸ್. ಉಣ್ಣಿಮಠ, ಎಂ.ಪಿ. ಕಟ್ಟಿಮನಿ, ಕೃಷ್ಣಾ ಲಮಾಣಿ, ಶೇಖಪ್ಪ ನಾಯಕ, ಹೇಮಣ್ಣ ಲಮಾಣಿ, ಮಲ್ಲೇಶ ಪವಾರ, ತಿಪ್ಪಣ್ಣ ಲಮಾಣಿ, ಠಾಕರೆಪ್ಪ ಲಮಾಣಿ, ಜಿ.ಎಲ್. ಹೂವಿನಹಳ್ಳಿ, ಎಸ್.ಟಿ. ಹಳಕಟ್ಟಿ, ಪಿ.ಬಿ. ಕಿಲಬನವರ ಮುಂತಾದವರು ಉಪಸ್ಥಿತರಿದ್ದರು.
ಶಾಲೆ ಪ್ರಧಾನ ಶಿಕ್ಷಕ ಮಲ್ಲೇಶ ಡಿ.ಎಚ್. ಸ್ವಾಗತಿಸಿ, ನಿರೂಪಿಸಿದರು. ಎಲ್.ವಿ. ನಂದೆಪ್ಪನವರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.