ರಂಗಕಲೆ ಸಾಧಕರನ್ನು ಸರ್ಕಾರ ಮರೆಯದಿರಲಿ: ಹಿಡ್ಕಿಮಠ
ಕನ್ನಡಪ್ರಭ ವಾರ್ತೆ, ಗದಗ, ಡಿ. 15
ರಂಗಕಲೆ ಹಾಗೂ ರಂಗಕಲಾ ಸಾಧಕರನ್ನು ಸರ್ಕಾರ ಮರೆಯದೆ ಪುರಸ್ಕರಿಸಬೇಕು. ವಯೋವೃದ್ದ ರಂಗಕಲಾ ಸಾಧಕರಿಗೆ ಸರ್ಕಾರ ನೆರವಿನ ಹಸ್ತ ಚಾಚಬೇಕು ಎಂದು ವೀರೇಶ್ವರ ಪುಣ್ಯಾಶ್ರಮದ ವ್ಯವಸ್ಥಾಪಕ ಬಸವರಾಜ ಹಿಡ್ಕಿಮಠ ಹೇಳಿದರು.
ಭಾನುವಾರ ನಗರದ ವೀರೇಶ್ವರ ಪುಣ್ಯಾಶ್ರಮದ ಡಾ. ಪುಟ್ಟರಾಜ ಕಲಾಭವನದಲ್ಲಿ ಪಂ. ಡಾ. ಪುಟ್ಟರಾಜರ ಕವಿ ಗವಾಯಿಗಳವರ ತೃತೀಯ ಪುಣ್ಯಸ್ಮರಣೋತ್ಸವ ಹಾಗೂ ನಾಡಕವಿ ಹುಯಿಲಗೋಳ ನಾರಾಯಣರಾವ್ ಅವರ 129ನೇ ಜಯಂತಿ ಹಾಗೂ ಹುಯಿಲಗೋಳದ ಹಿರಿಯ ಕವಿ, ನಾಟಕಕಾರ ಸಿ.ಜಿ.ಬಿ. ಹಿರೇಮಠರ 69ನೇ ಹುಟ್ಟುಹಬ್ಬ ನಿಮಿತ್ತ ನಾಡಕವಿ ಹುಯಿಲಗೋಳ ನಾರಾಯಣರಾವ್ ಕಲಾ ಮತ್ತು ಸಂಸ್ಕೃತಿ ರಾಜ್ಯ ಸಮಿತಿ ಸಿ.ಜಿ.ಬಿ.ಎಚ್. ರಂಗಭೂಮಿ ಮಿತ್ರಮಂಡಳಿಯ 44ನೇ ವಾರ್ಷಿಕೋತ್ಸವ ಆಂಗವಾಗಿ ಜರುಗಿದ ರಾಜ್ಯ ಹಿರಿಯ ರಂಗಭೂಮಿ ಕಲಾವಿದರಿಗೆ ಅಭಿನಂದನಾ ಪತ್ರ ವಿತರಣೆ, ರಂಗ ಕಲಾಮೇಳ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸ್ವತಃ ರಂಗಭೂಮಿಯ ಹಿರಿಯ ಕಲಾವಿದರು ನಾಟಕಕಾರರಾದ ಸಿ.ಜಿ.ಬಿ. ಹಿರೇಮಠ ಹಾಗೂ ಸಂಗಡಿಗರು ನಿರಂತರವಾಗಿ ರಂಗಕಲೆಯ ಉಳಿವು ಬೆಳವಣಿಗೆ ಹಾಗೂ ರಂಗಕಲಾವಿದರ ಏಳ್ಗೆಗೆ ಶ್ರಮಿಸುತ್ತಿರುವುದು ಅಭಿನಂದನಾರ್ಹ ಎಂದರು.
ಬಿ. ಬಾಬು ಅವರು ರಂಗಭೂಮಿ ನಡೆದು ಬಂದ ದಾರಿ ಕುರಿತು ಉಪನ್ಯಾಸ ನೀಡಿದರು. ನವಕರ್ನಾಟಕ ಜನಪರ ಅಭಿವೃದ್ಧಿ ವೇದಿಕೆ ರಾಜ್ಯ ಕಾರ್ಯಾಧ್ಯಕ್ಷ ಪಿ. ಸುಬ್ರಮಣ್ಯಂ ರೆಡ್ಡಿ ಅವರು ಗುರುಶಾಂತ ನಾಯಕ ಅವರು ಬರೆದ ಗ್ರಂಥ ಬಿಡುಗಡೆ ಮಾಡಿದರು.
ರಂಗಕರ್ಮಿ ಸಿಜಿಬಿ ಹಿರೇಮಠ, ನವಕರ್ನಾಟಕ ಅಭಿವೃದ್ಧಿ ವೇದಿಕೆ ಕಾರ್ಮಿಕ ಘಟಕ ರಾಜ್ಯಾಧ್ಯಕ್ಷ ಎಸ್.ಎಸ್. ರಡ್ಡೇರ, ಜಿಲ್ಲಾಧ್ಯಕ್ಷ ಶಿವಕುಮಾರ ರಾಮನಕೊಪ್ಪ, ಡಾ. ಎ.ಎನ್. ಶಾಲಗಾರ, ರಾಜ್ಯ ಹಮಾಲರ ಒಕ್ಕೂಟದ ಅಧ್ಯಕ್ಷ ಅಯ್ಯಪ್ಪ ನಾಯ್ಕರ, ಜಿಲ್ಲಾ ರೇಲ್ವೆ ಬ್ರಾಡಗೇಜ್ ಹೋರಾಟ ಸಮಿತಿ ಅಧ್ಯಕ್ಷ ನಿಸ್ಸಾರ ಅಹ್ಮದ್ ಖಾಜಿ, ಶಿವಬಸವ ಜನ ಕಲ್ಯಾಣ ಸಂಸ್ಥೆ ಅಧ್ಯಕ್ಷ ಬಸವಣ್ಣೆಯ್ಯ ಹಿರೇಮಠ, ಎಸ್.ಆರ್. ನಾಯಕ, ಎನ್.ಆರ್. ಭಾಂಡಗೆ, ಡಾ. ವಿ.ಎಚ್. ಪೂಜಾರ, ರೇಣುಕಾ ನಾಯ್ಕರ, ಶೋಭಾ ಕೊಪ್ಪಣವರ ಉಪಸ್ಥಿತರಿದ್ದರು.
ಗುರುರಾಜ ಸುತಾರ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ನಾಡಕವಿ ಹುಯಿಲಗೋಳ ನಾರಾಯಣರಾವ್ ಕಲಾ ಮತ್ತು ಸಂಸ್ಕೃತಿ ರಾಜ್ಯ ಸಮಿತಿ ಉಪಾಧ್ಯಕ್ಷ ಎನ್.ಕೆ. ಕೊರ್ಲಹಳ್ಳಿ ಸ್ವಾಗತಿಸಿ, ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

