ಗದಗ

ಭೂಬಾಡಿಗೆ ಕ್ರಮ ಜನವಿರೋಧಿ: ಮನವಿ

Published On :




ಗದಗ: ಗದಗ-ಬೆಟಗೇರಿ ನನಗರಸಭೆ ವ್ಯಾಪ್ತಿಯ ಗದಗ ನಗರದ 54 ವಕಾರಸಾಲ್‌ಗಳು ಅಧ್ಯಕ್ಷರ ಹಾಗೂ ಸದಸ್ಯರ ಸ್ವಂತ ಆಸ್ತಿಯಲ್ಲ. ಅವು ಸಾರ್ವಜನಿಕರ ಆಸ್ತಿಯಾಗಿದ್ದು, ಅದನ್ನೇ ಭೂಮಾಲೀಕರಿಗೆ ನೀಡಲು ನಿರ್ಧರಿಸುವ ನಗರಸಭೆಯ ಕ್ರಮವನ್ನು ಜೈ ಭೀಮ್ ಸೇನಾ ಘಟಕ ಖಂಡಿಸಿ, ಜಿಲ್ಲಾ ಉಸ್ತುವಾರಿ ಸಚಿವ ಕಳಕಪ್ಪ ಬಂಡಿ ಅವರಿಗೆ ಮನವಿ ಸಲ್ಲಿಸಿದೆ.
ಸಾರ್ವಜನಿಕರ ಆಸ್ತಿ ಕರ್ನಾಟಕ ಮುನ್ಸಿಪಲ್ ಆಕ್ಟ್ ತಿದ್ದುಪಡಿ ಕಾಯ್ದೆ ಪ್ರಕಾರ ನಗರಸಭೆ ಹಾಗೂ ಪುರಸಭೆಗಳ ಆಸ್ತಿಯನ್ನು ಮಾರಾಟ ಮಾಡಲು ಮತ್ತು ಹೊಸದಾಗಿ ಲೀಜ್ ಕೊಡಲು ಬರುವುದಿಲ್ಲ. ಆದರೂ ಸರ್ವ ಸದಸ್ಯರ ಈ ತೀರ್ಮಾನ ಅತಿರೇಕದ್ದು. ನಗರದ 54 ವಕಾರಸಾಲ್‌ಗಳು ಲೀಸ್ ಅವಧಿ ಮುಗಿದು ಎಷ್ಟೋ ವರ್ಷಗಳಾಗಿವೆ. ಕೆಲವು ಸದಸ್ಯರು ಭೂ ಬಾಡಿಗೆದಾರರ ಜತೆ ಶಾಮೀಲಾಗಿ ನಗರಸಭೆಯಿಂದ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುತ್ತಿದ್ದಾರೆ ಎಂದು ದೂರಿದೆ.
ಕೂಡಲೇ ಈ 54 ವಕಾರಸಾಲ್‌ಗಳನ್ನು ನಗರಸಭೆಯ ಕಬ್ಜಾಕ್ಕೆ ಪಡೆದು, ಅತಿ ಅಮೂಲ್ಯವಾದ ಆಸ್ತಿಯನ್ನು ಉಳಿಸಿಕೊಳ್ಳಬೇಕು. ನಗರಸಭೆ ತೆಗೆದುಕೊಂಡಿರುವ ತೀರ್ಮಾನ ರದ್ದುಪಡಿಸಬೇಕು. ಇಲ್ಲವಾದಲ್ಲಿ ಜೈ ಭೀಮ್ ಸೇನಾ ವತಿಯಿಂದ ನಗರಸಭೆಗೆ ಮುತ್ತಿಗೆ ಹಾಕಲಾಗುವುದು ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ. ಉಪಾಧ್ಯಕ್ಷ ಅಶೋಕ ಹಾದಿಮನಿ, ಗಣೇಶ ಹುಬ್ಬಳ್ಳಿ, ರಾಘವೇಂದ್ರ ಪರಾಪುರ, ಮಂಜುನಾಥ ತೌಜಲ್, ದೀಪಕ ಕಲ್ಮನಿ, ಪರಶುರಾಮ ಸಂಗಾಪುರ, ಓಬಳೇಶ ಯಶವಂತಪುರ, ರವಿ ದೊಡ್ಡಮನಿ, ರಮೇಶ ಗುತ್ತಿ, ಹೇಮಂತ ಹುಬ್ಬಳ್ಳಿ, ಮರಿಯಪ್ಪ ಪರಾಪುರ, ವಿರೂಪಾಕ್ಷ ಸಂಗಾಪುರ, ಮಂಜುನಾಥ ಕಲ್ಲೂರ, ಕೇಶವ ಕೋಟ್ನಿಕಲ್ಲ, ಮಂಜುನಾಥ ಪರಾಪುರ, ನಾಗೇಶ ಸಂಗಾಪುರ ಹಾಜರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.