ಅತಿಕ್ರಮಣ ಅಂಗಡಿಗಳ ತೆರವು ಕಾರ್ಯಾಚರಣೆ
ಲಕ್ಷ್ಮೇಶ್ವರ: ಸಮೀಪದ ಶಿಗ್ಲಿಯಲ್ಲಿ ಅತಿಕ್ರಮಣವಾಗಿ ನಿರ್ಮಿಸಿಕೊಂಡಿದ್ದ 17 ಅಂಗಡಿ ಮುಂಗಟ್ಟು ತೆರವುಗೊಳಿಸುವ ಕಾರ್ಯಾಚರಣೆ ಭಾನುವಾರ ಬೆಳಗ್ಗೆ ನಡೆಯಿತು.
ಹಲವು ವರ್ಷಗಳಿಗೂ ಮೆಲ್ಪಟ್ಟು ಅತಿಕ್ರಮಣವಾಗಿ ನಿರ್ಮಿಸಿಕೊಂಡ ಅಂಗಡಿ ಹಾಗೂ ಡಬ್ಬಾ ಅಂಗಡಿಗಳಿಂದ ಗ್ರಾಮದ ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗಿತ್ತು. ಇದನ್ನರಿತ ಶಿಗ್ಲಿ ಗ್ರಾಪಂ ಅತಿಕ್ರಮಣಗೊಂಡ ಅಂಗಡಿ ತೆರವುಗೊಳಿಸುವ ಕಾರ್ಯಕ್ಕೆ ಮುಂದಾಗಿದೆ. ಗ್ರಾಮದ ಪ್ರಮುಖ ಸ್ಥಳವಾಗಿದ್ದ ಹಳೆಯ ಬಸ್ ನಿಲ್ದಾಣದ ಅಕ್ಕ ಪಕ್ಕದಲ್ಲಿ ಹಲವು ವರ್ಷಗಳಿಂದ ಬೀಡುಬಿಟ್ಟಿದ್ದ ಅಂಗಡಿ ಮುಂಗಟ್ಟು ತೆರವುಗೊಳಿಸುವಲ್ಲಿ ಶಿಗ್ಲಿ ಗ್ರಾಪಂ ಅಧ್ಯಕ್ಷ ಡಿ.ವೈ. ಹುನಗುಂದ, ಉಪಾಧ್ಯಕ್ಷ ಮನೋಹರ ಕರ್ಜಗಿ, ವಿ.ಎಸ್.ಎಸ್. ಬ್ಯಾಂಕ್ ಅಧ್ಯಕ್ಷ ಸಿದ್ದಣ್ಣ ಯಲಿಗಾರ, ಚೆನ್ನಪ್ಪ ತಳವಾರ, ರಮೇಶ ಹಣಗಿ, ದೇವರಾಜ ಬೆಟಗೇರಿ, ಎ.ಎಂ. ಮುಳಗುಂದಮಠ ಹಾಗೂ ಮತ್ತಿತರರು ಈ ಸಂದರ್ಭ ಹಾಜರಿದ್ದರು. ಅಂಗಡಿ ತೆರವುಗೊಳಿಸುವ ಕೆಲ ಕ್ಷಣ ಸ್ಥಳದಲ್ಲಿ ಬಿಗುವಿನಿಂದ ಕೂಡಿದ ವಾತಾವರಣ ನಿರ್ಮಾಣವಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

