ಗದಗ

ಪ್ರಥಮ ಪಿಯು ಪರೀಕ್ಷೆ ಗೊಂದಲ ನಿವಾರಿಸಿ

Published On :

ಗದಗ: ಪ್ರಥಮ ಪಿಯುಸಿ ಪರೀಕ್ಷೆ ಗೊಂದಲ ನಿವಾರಿಸುವಂತೆ ಆಗ್ರಹಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ವತಿಯಿಂದ ಬುಧವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಪ್ರಥಮ ಪಿಯುಸಿ ಪರೀಕ್ಷೆಗಳು ಮಾರ್ಚ್ 22 ರಿಂದ ಪ್ರಾರಂಭವಾಗುತ್ತಿವೆ. ಆದರೆ, ಪಿಯುಸಿ ಪ್ರಥಮ ವರ್ಷದ ಪಠ್ಯಕ್ರಮ ಇದುವರೆಗೂ ಪೂರ್ಣಗೊಂಡಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳು ಆತಂಕಗೊಂಡಿದ್ದಾರೆ. ಕಾರಣ ಪಠ್ಯಕ್ರಮ ಮುಗಿಯದೇ ಇರುವುದರಿಂದ ಪರೀಕ್ಷೆಗಳನ್ನು ಎದುರಿಸಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಎದುರಾಗಿದೆ. ಇದುವರೆಗೆ ಮುಗಿದಿರುವ ಪಠ್ಯಕ್ರಮಕ್ಕೆ ಅನುಗುಣವಾಗಿ ಪರೀಕ್ಷೆಗಳನ್ನು ನಡೆಸುವುದಾದರೆ ಯಾವುದೇ ಸಮಸ್ಯೆ ಇಲ್ಲ. ಒಂದು ವೇಳೆ ಪಠ್ಯಕ್ರಮ ಮುಗಿಯದಿರುವ ಪಾಠಗಳ ಮೇಲೆಯೂ ಪ್ರಶ್ನೆಗಳು ಬಂದರೆ ಉತ್ತರ ಬರೆಯುವುದು ಹೇಗೆ ಎಂಬ ಆತಂಕ ಕಾಡುತ್ತಿದೆ. ಇದನ್ನು ನಿವಾರಿಸಿ, ಸುಗಮ ಪರೀಕ್ಷೆ ನಡೆಸಲು ಎಬಿವಿಪಿ ಒಂದು ಸೂತ್ರಕ್ಕೆ ಬಂದಿದೆ. ಅದಕ್ಕಾಗಿ ಪದವಿಪೂರ್ವ ಶಿಕ್ಷಣ ಇಲಾಖೆ ಈ ಸೂತ್ರವನ್ನು ಅಳವಡಿಸಬೇಕು ಎಂಬುದು ಎಬಿವಿಪಿಯ ಅಭಿಪ್ರಾಯವಾಗಿದೆ.
ಬೇಡಿಕೆಗಳು: ಇದುವರೆಗೆ ಮುಗಿದ ಪಠ್ಯಕ್ರಮದ ಅನುಗುಣವಾಗಿ ಪ್ರಶ್ನೆ ಪತ್ರಿಕೆ ತೆಗೆದು ಪರೀಕ್ಷೆಗಳನ್ನು ನಡೆಸುವುದು. ಒಂದು ವೇಳೆ ಪ್ರಶ್ನೆ ಪತ್ರಿಕೆಗಳು ಸಿದ್ಧಗೊಂಡಿದ್ದರೆ ಪೂರ್ಣಗೊಳಿಸಿದ ಅಧ್ಯಾಯಕ್ಕೆ ಸಂಬಂಧಿಸಿದಂತೆ ಪ್ರಶ್ನೆ ಪತ್ರಿಕೆಗಳನ್ನು ಬದಲಾಯಿಸಿಕೊಳ್ಳಲು ಆಯಾ ಕಾಲೇಜುಗಳಿಗೆ ಅನುಮತಿ ನೀಡಬೇಕು. ಇಲ್ಲವೇ ಪೂರ್ಣಗೊಂಡ ಪಠ್ಯಕ್ರಮಗಳ ಮೇಲೆ ಪ್ರಶ್ನೆಗಳನ್ನು ಕೇಳಿ, ಪ್ರಶ್ನೆ ಪತ್ರಿಕೆಗಳನ್ನು ಬದಲಾವಣೆ ಮಾಡದಿದ್ದರೆ ಗ್ರೇಸ್‌ಮಾರ್ಕ್ಸ್‌ಗಳನ್ನು (ಕೃಪಾಂಕ) ಕೊಡಬೇಕು. ಪರೀಕ್ಷೆಗಳ ನೆಪದಲ್ಲಿ ತೀವ್ರವಾಗಿ ಪಠ್ಯಕ್ರಮ ಪೂರ್ಣಗೊಳಿಸದೇ ವಿದ್ಯಾರ್ಥಿಗಳಿಗೆ ಅರ್ಥವಾಗುವಂತೆ ಬೋಧನೆ ಮಾಡಬೇಕು. ಮತ್ತು ಹೆಚ್ಚುವರಿ ತರಬೇತಿ ತೆಗೆದುಕೊಳ್ಳುವುದರಿಂದ ವಿದ್ಯಾರ್ಥಿಗಳಿಗೆ ಅಭ್ಯಾಸ ಮಾಡಲು ಸಮಯದ ಕೊರತೆ ಕಾಣುತ್ತಿದ್ದು, ಇದಕ್ಕಾಗಿ ಹೆಚ್ಚುವರಿ ತರಬೇತಿ ನೀಡುವ ಪ್ರಕ್ರಿಯೆ ಕೈಬಿಡಬೇಕು. ಈ ಎಲ್ಲ ನ್ಯಾಯಯುತ ಬೇಡಿಕೆಗಳನ್ನು ಕೂಡಲೇ ಈಡೇರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಮೋಹನಗೌಡ ಮಲ್ಲನಗೌಡ್ರ, ಶರಣು ಚೌದರಿ, ಅಶೋಕ ಉಕ್ಕಿಸಲ, ಪಿ.ವಿ. ಡೊಳ್ಳಿನ, ಆರ್.ಎಚ್.ಚವ್ಹಾಣ, ಎಸ್.ಎಚ್. ಹೆಬಲಿ, ಎಫ್.ಎನ್. ಮುಂಡರಗಿ, ಎಲ್.ಎಚ್. ಹಳೇಮನಿ, ಪಿ.ಎಸ್. ತಳವಾರ, ಉಮೇಶ ಎಂ, ಅನ್ನಪ್ಪ ಕೆ, ಆರ್.ಆರ್. ಜರಕುಂಟಿ, ಗವಿಸಿದ್ದಯ್ಯ ಹಳ್ಳಿಕೇರಿಮಠ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.