ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗಳು ಸಂಜೀವಿನಿ
ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಫೆ. 21
ನಾಡಿನ ಬಡ ಮತ್ತು ದುರ್ಬಲ ಸಮುದಾಯಗಳು ಆರ್ಥಿಕ ಮತ್ತು ಸಾಮಾಜಿಕವಾಗಿ ಸ್ವಾವಲಂಬನೆ ಬದುಕು ಸಾಗಿಸಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗಳು ಸಂಜೀವಿನಿಯಾಗಿವೆ. ಈ ನಿಟ್ಟಿನಲ್ಲಿ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರ ಸೇವಾ ಮನೋಭಾವನೆ ಅನನ್ಯವಾದದ್ದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಕಳಕಪ್ಪ ಬಂಡಿ ಹೇಳಿದರು.
ಅವರು ಬುಧವಾರ ಸ್ಥಳೀಯ ಎಪಿಎಂಸಿ ಎದುರಿನ ಬಯಲು ಮೈದಾನದಲ್ಲಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯ ರೋಣ, ನರಗುಂದ ತಾಲೂಕು ಹಾಗೂ ಕೃಷಿ ಉತ್ಸವ ವ್ಯವಸ್ಥಾಪನಾ ಸಮಿತಿ ವತಿಯಿಂದ ನಡೆದ ಕೃಷಿ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ಜೆಡಿಎಸ್ ಮುಖಂಡ ಹೇಮಗಿರೀಶ ಹಾವಿನಾಳ ಮಾತನಾಡಿ, ಗ್ರಾಮೀಣರನ್ನು ಸಂಘಟಿಸಿ, ಅನ್ನದಾತರಿಗೆ ತಾಂತ್ರಿಕ ಮಾಹಿತಿ ಕೊಡುವದರ ಜತೆಗೆ ಅವರ ಬದುಕಿನ ಕನಸು ನನಸಾಗಿಸುವ ದೃಷ್ಟಿಯಿಂದ ಕೃಷಿ ಉತ್ಸವಗಳು ಸಾರ್ಥಕ ಪಡೆದುಕೊಳ್ಳುತ್ತವೆ. ರೈತರು ಇಂಥ ಉತ್ಸವಗಳಲ್ಲಿ ಹೆಚ್ಚೆಚ್ಚು ಪಾಲ್ಗೊಳ್ಳುವುದು ಸೂಕ್ತ ಎಂದರು.
ಸಂಸ್ಥೆಯ ಪ್ರಾದೇಶಿಕ ನಿರ್ದೇಶಕ ಜಯಶಂಕರ ಶರ್ಮಾ ಮಾತನಾಡಿ, ಆರ್ಥಿಕವಾಗಿ ಹಿಂದುಳಿದವರನ್ನು ಸಬಲರನ್ನಾಗಿಸುವುದೆ ಸಂಸ್ಥೆಯ ಮೂಲ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ನಾಡಿನ ಲಕ್ಷಾಂತರ ಕುಟುಂಬಗಳು ಅಭಿವೃದ್ಧಿ ಹೊಂದಿವೆ ಎಂದರು. ಚಿಂಚಣಿಯ ಸಿದ್ಧ ಸಂಸ್ಥಾನ ಮಠದ ಅಲ್ಲಮ ಪ್ರಭು ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಎಚ್.ಎಸ್. ಸೋಂಪೂರ, ಶರಣಬಸವ ಮೆಣಸಿನಕಾಯಿ ಮಾತನಾಡಿದರು. ಪುರಸಭೆ ಮಾಜಿ ಅಧ್ಯಕ್ಷೆ ದೇವಕ್ಕ ಬೆಳವಣಕಿ, ಎಪಿಎಂಸಿ ಅಧ್ಯಕ್ಷ ಪರಶುರಾಮ ಹಂಡಿ, ಲಾಲಪ್ಪ ರಾಠೋಡ, ಬಸವರಾಜ ಕೊಟಗಿ, ಅಂಬರೀಷ್ ಅರಳಿ, ಕೃಷ್ಣಾಚಾರ್ಯ ಇಟಗಿ, ಪುಷ್ಪಾವತಿ ಭಾಂಡಗೆ, ಕೃಷ್ಣ ಟಿ. ಉಪಸ್ಥಿತರಿದ್ದರು. ವಿಶ್ವನಾಥ ಪಟಗಾರ ಸ್ವಾಗತಿಸಿದರು. ಬಸನಗೌಡ ಗೌಡ್ರ, ನಿರೂಪಿಸಿ ವಂದಿಸಿದರು. ಬಳಿಕ ಕೃಷಿ ವಿಜಾರ ಗೋಷ್ಠಿ, ಕೃಷಿ ಜೀವನಾಡಿ, ಮಹಿಳಾ ವಿಚಾರ ಗೋಷ್ಠಿ ನಡೆದವು.
ರೈತರ ನಿರುತ್ಸಾಹ: ಕೃಷಿಕರನ್ನು ಸಬಲೀಕರಣ ಗೊಳಿಸಬೇಕೆಂಬ ಮಹದಾಸೆ ಹೊಂದಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಏರ್ಪಡಿಸಿದ ಕೃಷಿ ಉತ್ಸವದಲ್ಲಿ ರೈತರು ಹೆಚ್ಚು ಸಂಖ್ಯೆಯಲ್ಲಿ ಪಾಲ್ಗೊಳ್ಳದಿರುವುದು ಕೃಷಿ ಉತ್ಸವ ಕಳೆಗುಂದಿತ್ತು. ಜತೆಗೆ ಸಂಘಟಕರಿಗೆ ನಿರಾಸೆ ಮೂಡಿಸಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

