ಸುದ್ದಿ ಸಂಕ್ಷೇಪ
43 ನಾಮಪತ್ರ ಸಲ್ಲಿಕೆ
ರೋಣ: ರೋಣ ಪುರಸಭೆ ಚುನಾವಣೆಗೆ ಶುಕ್ರವಾರ ಒಟ್ಟು 43 ಅಭ್ಯರ್ಥಿಗಳು ನಾಮ ಪತ್ರಗಳನ್ನು ಸಲ್ಲಿಸಿದರು. ಕಾಂಗ್ರೆಸ್ 15, ಬಿಜೆಪಿ 20, ಕೆಜೆಪಿ, ಬಿಎಸ್.ಆರ್ ಕಾಂಗ್ರೆಸ್ 1 ಹಾಗೂ ಪಕ್ಷೇತರ 5 ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ಬೆಂಬಲಿಗರೊಂದಿಗೆ ಬಂದು ಪುರಸಭೆಯಲ್ಲಿನ ಚುನಾವಣಾ ಕಾರ್ಯಾಲಯಕ್ಕೆ ಸಲ್ಲಿಸಿದರು. ಗುರುವಾರದವರೆಗೂ ಯಾವುದೇ ನಾಮಪತ್ರಗಳು ಸಲ್ಲಿಕೆಯಾಗಿರಲಿಲ್ಲ. ಫೆ. 23 (ಶನಿವಾರ) ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿದ್ದು, ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ನಾಮಪತ್ರ ಸಲ್ಲಿಕೆಯಾಗುವ ಸಾಧ್ಯತೆಗಳಿವೆ.
30 ನಾಮಪತ್ರ ಸಲ್ಲಿಕೆ
ನರಗುಂದ: ಪುರಸಭೆ ಚುನಾವಣೆಗೆ ಶುಕ್ರವಾರ ವಿವಿಧ ಪಕ್ಷಗಳಿಂದ 30 ನಾಮಪತ್ರಗಳು ಸಲ್ಲಿಕೆಯಾಗಿವೆ. 1 ವಾರ್ಡಗೆ ಬಿಜಿಪಿ ಹಾಗೂ ಕಾಂಗ್ರೆಸ್ನಿಂದ ತಲಾ ಒಂದು, 2ನೇ ವಾರ್ಡ್ಗೆ ಬಿಜೆಪಿ, ಕಾಂಗ್ರೆಸ್, ಬಿಎಸ್ಸಾರ್ ಕಾಂಗ್ರೆಸ್ ಪಕ್ಷದಿಂದ ತಲಾ ಒಂದು, 4ನೇ ವಾರ್ಡ್ ಕಾಂಗ್ರೆಸ್ 1, 5ನೇ ವಾರ್ಡ್ ಬಿಜೆಪಿ, ಕಾಂಗ್ರೆಸ್ ತಲಾ ಒಂದು, 6ನೇ ವಾರ್ಡ್ಗೆ ಬಿಜೆಪಿಯಿಂದ ಪುರಸಭೆ ಮಾಜಿ ಅಧ್ಯಕ್ಷ ಚಂದ್ರಶೇಖರ ಕೋಟಿ ಮಾತ್ರ ನಾಮಪತ್ರ ಸಲ್ಲಿಸಿದರು. 7ನೇ ವಾರ್ಡ್ ಬಿಜೆಪಿ ಒಂದು, 8ನೇ ವಾರ್ಡ್ ಕಾಂಗ್ರೆಸ್ನಿಂದ ಒಂದು, 9ನೇ ವಾರ್ಡ್ ಬಿಜೆಪಿಯಿಂದ ಒಂದು, 10ನೇ ವಾರ್ಡಗೆ ಪುರಸಭೆ ಮಾಜಿ ಉಪಾಧ್ಯಕ್ಷ ಉಮೇಶ ಯಮೋಜಿ, 11 ವಾರ್ಡ್ ಬಿಜೆಪಿಯಿಂದ ಒಂದು, 15ನೇ ವಾರ್ಡ್ ಕಾಂಗ್ರೆಸ್ನಿಂದ ಒಂದು, 17ನೇ ವಾರ್ಡ್ ಬಿಎಸ್ಆರ್ ಕಾಂಗೆಸ್, ಬಿಜೆಪಿ, ಪಕ್ಷೇತರ ತಲಾ 1 ನಾಮಪತ್ರ, 18ನೇ ವಾರ್ಡ್ ಬಿಜೆಪಿಯಿಂದ ವಾಸು ಜೋಗಣ್ಣವರ, ಕಾಂಗ್ರೆಸ್ದಿಂದ ಫಕೀರಪ್ಪ ಜೋಗಣ್ಣವರ, 21ನೇ ವಾರ್ಡ್ ಕಾಂಗ್ರೆಸ್ ಜ್ಯೋತಿ ಪತ್ರಿ, 22ನೇ ವಾರ್ಡ್ ಬಿಜೆಪಿ ಕೃಷ್ಣ ಗೊಂಬಿ, ಕಾಂಗ್ರೆಸ್ ಶಂಕ್ರಪ್ಪ ಬಡಿಗೇರ, 23ನೇ ವಾರ್ಡ್ ಕಾಂಗ್ರೆಸ್ದಿಂದ ಫಕೀರವ್ವ ದೊಡಮನಿ ಸೇರಿದಂತೆ ಒಟ್ಟು 30 ನಾಮಪತ್ರಗಳು ಸಲ್ಲಿಕೆಯಾಗಿವೆ.ನಾಳೆ ವೀರಶೈವರ ಸಭೆ
ಗದಗ: ಅಖಿಲ ಭಾರತ ವೀರಶೈವ ಮಹಾಸಭಾದ ಗದಗ ಜಿಲ್ಲಾ ಘಟಕದ ಸಭೆಯನ್ನು ಫೆ. 24ರಂದು ಸಂಜೆ 4 ಗಂಟೆಗೆ ನಗರದ ವೀರಶೈವ ಜನರಲ್ ಲೈಬ್ರರಿಯಲ್ಲಿ ಏರ್ಪಡಿಸಲಾಗಿದೆ. ಜಿಲ್ಲಾ ಘಟಕದ ಸದಸ್ಯರು, ನಿರ್ದೇಶಕರು, ಮಹಿಳಾ ಘಟಕದ ಪದಾಧಿಕಾರಿಗಳು ಹಾಗೂ ಎಲ್ಲ ಸದಸ್ಯರು ಸಭೆಗೆ ಹಾಜರಾಗಿ ತಮ್ಮ ಸಲಹೆ ಸೂಚನೆಗಳನ್ನು ನೀಡಬೇಕು ಎಂದು ಜಿಲ್ಲಾ ಘಟಕದ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

