ಗದಗ

ಕೊಪ್ಪಳದಲ್ಲೂ ಏಕಮುಖ ಸಂಚಾರ ಶುರು

Published On :

ಕೊಪ್ಪಳ: ನಗರದ ಜವಾಹರ ರಸ್ತೆಯಲ್ಲಿ ಈಗ ಯದ್ವಾತದ್ವಾ ವಾಹನ ಚಲಾಯಿಸುವಂತಿಲ್ಲ. ಇಲ್ಲಿಯ ಗಡಿಯಾರ ಕಂಬದಿಂದ ಆಜಾದ್ ವೃತ್ತದವರೆಗೆ ಏಕಮುಖ ಸಂಚಾರದ ವ್ಯವಸ್ಥೆ ಕಲ್ಪಿಸಲು ಪೊಲೀಸ್ ಇಲಾಖೆ ಮುಂದಾಗಿದೆ. ಭಾನುವಾರದಿಂದ ಈ ಏಕಮುಖ ಸಂಚಾರ ಶುರುವಾಗಿದೆ.
ಹತ್ತಾರು ವರ್ಷದಿಂದ ಟ್ರಾಫಿಕ್ ಪೊಲೀಸರ ಕೊರತೆಯಿಂದ ನಗರದಲ್ಲಿ ಸಂಚಾರಿ ನಿಯಮ ಪಾಲನೆಯಾಗುತ್ತಿರಲಿಲ್ಲ. ಹೀಗಾಗಿ ಪೊಲೀಸರು ಎಷ್ಟೇ ದಂಡ ವಿಧಿಸಿದರೂ ವಾಹನ ಸವಾರರು ಮಾತ್ರ ತಮ್ಮ ಹಳೆಯ ಚಾಳಿಯನ್ನು ಬಿಡುತ್ತಿರಲಿಲ್ಲ. ಇದರಿಂದಾಗಿ, ಟ್ರಾಫಿಕ್ ಸಮಸ್ಯೆ ಉಂಟಾದಾಗ ಪೊಲೀಸರು ತಲೆ ಬಿಸಿ ಮಾಡಿಕೊಂಡು ಸಂಚಾರ ಸುಗಮಗೊಳಿಸುತ್ತಿದ್ದರು.
ಈಗ ಅದಕ್ಕೆಲ್ಲ ಬ್ರೇಕ್ ಬಿದ್ದಿದೆ. ಕೊಪ್ಪಳ ನಗರಕ್ಕೆ ಪ್ರತ್ಯೇಕವಾಗಿ ಸಂಚಾರಿ ಪೊಲೀಸ್ ಠಾಣೆ ಆರಂಭವಾಗಿದೆ. ಆದರೂ ಯರ್ರಾಬಿರ್ರಿ ವಾಹನ ಚಲಾಯಿಸುವವರಿಗೆ ದಂಡ ಹಾಕಿದ್ದೇ ಬಂತು. ಟ್ರಾಫಿಕ್ ಸಮಸ್ಯೆ ಬಗೆಹರಿದಿರಲಿಲ್ಲ. ಈ ನಿಟ್ಟಿನಲ್ಲಿ ಸುಗಮ ಸಂಚಾರ ಕಲ್ಪಿಸಲು ನಗರದಲ್ಲಿ ಮೊಟ್ಟ ಮೊದಲ ಬಾರಿಗೆ ಆಜಾದ್ ವೃತ್ತದಿಂದ ಗಡಿಯಾರ ಕಂಬದವರೆಗೆ ಏಕಮುಖ ಸಂಚಾರ ಆರಂಭಿಸಲಾಗಿದೆ.
ತಪ್ಪಲಿದೆ ಟ್ರಾಫಿಕ್: ಕೊಪ್ಪಳ ನಗರದಲ್ಲಿಯೇ ಜವಾಹರ ರಸ್ತೆ ಅತ್ಯಂತ ಜನದಟ್ಟಣೆ ಪ್ರದೇಶ. ಅಲ್ಲದೇ ಇಲ್ಲಿ ವಾಹನಗಳ ಸಂಚಾರವೂ ಹೆಚ್ಚು. ನಗರದಲ್ಲಿ ಪ್ರತಿಭಟನೆಗಳು ನಡೆದರೆ ಮೆರವಣಿಗೆ ಸಾಗುವುದೇ ಇಲ್ಲಿಂದ. ಪ್ರತಿಭಟನೆ ವೇಳೆ ಕಿ.ಮೀ. ಗಟ್ಟಲೇ ವಾಹನಗಳು ಸಾಲುಗಟ್ಟಿ ನಿಲ್ಲುತ್ತಿದ್ದವು. ಈಗ ಏಕಮುಖ ಸಂಚಾರ ವ್ಯವಸ್ಥೆ ಜಾರಿಗೆ ಬಂದಿರುವುದರಿಂದ ಟ್ರಾಫಿಕ್ ಸಮಸ್ಯೆ ತಪ್ಪಲಿದೆ.   
ಪರ್ಯಾಯ ವ್ಯವಸ್ಥೆ: ಜವಾಹರ ರಸ್ತೆಯಲ್ಲಿ ಏಕಮುಖ ಸಂಚಾರ ಆರಂಭವಾಗಿರುವುದರಿಂದ ಇಲ್ಲಿಯ ಸಿಂಪಿ ಲಿಂಗಣ್ಣ ರಸ್ತೆ ಹಾಗೂ ಕಿತ್ತೂರು ಚನ್ನಮ್ಮ ರಸ್ತೆಯಲ್ಲಿ ಇನ್ನೊಂದು ಬದಿಯ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಗಡಿಯಾರ ಕಂಬದಿಂದ ಅಜಾದ್ ವೃತ್ತದವರೆಗೆ ಏಕಮುಖ ಸಂಚಾರ ವ್ಯವಸ್ಥೆ ಜಾರಿಗೊಳಿಸಿದೆ.
ಫಲಕ ಅಳವಡಿಕೆ: ಇನ್ನು ಕೊಪ್ಪಳ ನಗರದ ರಾಷ್ಟ್ರೀಯ ಹೆದ್ಜಾರಿ ರಸ್ತೆ 63ರಲ್ಲಿಯೂ ಸುಗಮ ಸಂಚಾರಕ್ಕೆ ಎಚ್ಚರಿಕೆಯ ಫಲಕಗಳನ್ನು ಹಾಕಲಾಗಿದೆ. ಪಾನಮತ್ತರಾಗಿ ವಾಹನ ಚಲಾವಣೆ, ಪೋನ್‌ನಲ್ಲಿ ಮಾತನಾಡುತ್ತಾ ವಾಹನ ಚಲಾವಣೆ ತಪ್ಪಿಸಲು ಮುನ್ನೆಚ್ಚರಿಕೆ ಫಲಕಗಳನ್ನು ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ಹಾಕಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.