ಗದಗ

ಹೆತ್ತವರನ್ನು ನಿರ್ಲಕ್ಷಿಸಬೇಡಿ: ಕಂಠಿ

Published On :

ನರೇಗಲ್ಲ: ಮಡದಿ ಬಂದಳೆಂದು ತಂದೆ-ತಾಯಿಯನ್ನು ಮರೆಯಬೇಡಿ. ಮುಪ್ಪಿನ ತಂದೆ-ತಾಯಿಯನ್ನು ವೃದ್ಧಾಶ್ರಮಕ್ಕೆ ಕಳಿಸುವ ಕಾರ್ಯ ಈಗ ಫ್ಯಾಷನ್ ಆಗುತ್ತಿದೆ ಎಂದು ಸಾಂಸ್ಕೃತಿಕ ಮತ್ತು ಚರ್ಚಾಕೂಟದ ಅಧ್ಯಕ್ಷ ಎಸ್.ಎಸ್. ಕಂಠಿ ಹೇಳಿದರು.
ಈಚೆಗೆ ಅವರು ಸ್ಥಳೀಯ ಅನ್ನದಾನೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ಸಾಂಸ್ಕೃತಿಕ ಮತ್ತು ಚರ್ಚಾಕೂಟ ಸಂಘದ ಆಶ್ರಯದಲ್ಲಿ ಆಚರಿಸಲಾದ ಭಾವ ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಪ್ರಭಾರಿ ಪ್ರಾಚಾರ್ಯ ಸಿ.ಜಿ. ಹುಡೇದಗಡ್ಡಿ ಮಾತನಾಡಿ, ಜನ್ಮ ಕೊಟ್ಟವರನ್ನು ನಿಮ್ಮ ಜನ್ಮ ಇರುವವರೆಗೂ ಮರೆಯಬೇಡಿ. ಅವರು ನಿಮ್ಮ ಕಣ್ಣಿಗೆ ಕಾಣುವ ದೇವರು ಎಂದು ಬಣ್ಣಿಸಿದರು. ನಿಮ್ಮ ಬದುಕನ್ನು ಸುಂದರಗೊಳಿಸಲು, ಬದುಕಿಗೊಂದು ನೆಲೆ ಒದಗಿಸಲು ಕಷ್ಟಪಟ್ಟವರನ್ನು ಮುಪ್ಪಿನ ಕಾಲದಲ್ಲಿ ದೂರವಿಡದೇ ಪ್ರೀತಿ ವಿಶ್ವಾಸಗಳಿಂದ ಚನ್ನಾಗಿ ಸಾಕಬೇಕು ಎಂದರು. ಹಿರಿಯ ಉಪನ್ಯಾಸಕ ಬಿ.ಡಿ. ಕರಡೆಣ್ಣವರ, ಎಂ.ಎಸ್. ಕುಲಕರ್ಣಿ ಉಪಸ್ಥಿತರಿದ್ದರು. ಉಪನ್ಯಾಸಕ ಎಸ್.ಎನ್. ಹೊನ್ನೂರ ಅಕ್ಕಮಹಾದೇವಿಯ ವಚನಗಳನ್ನು ಪ್ರಸ್ತುತ ಪಡಿಸಿದರು. ಸಿಂಧು ಕುಲಕರ್ಣಿ ಪ್ರಾರ್ಥಿಸಿದರು. ಡಾ. ಎಂ.ಆರ್. ಶಿವರಾಂ ನಿರೂಪಿಸಿ, ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.