ಗದಗ

ವಿವೇಕಾನಂದರು ಮಹಾ ಮಾನವತಾವಾದಿ: ಮಳಲಿ

Published On :

ಹೊಳೆಆಲೂರ: ಸ್ವಾಮಿ ವಿವೇಕಾನಂದರು ಮಹಾ ಮಾನವತಾವಾದಿಯಾಗಿದ್ದು, ಅವರ ಆದರ್ಶ ಇಂದಿನ ಯುವಕರಿಗೆ ಮಾರ್ಗದರ್ಶಕವಾಗಿದೆ ಎಂದು ಡಾ. ಹನುಮಂತ ಮಳಲಿ ಹೇಳಿದರು. ಈಚೆಗೆ ಅವರು ಸ್ಥಳೀಯ ಕಲ್ಮೇಶ್ವರ ಪ್ರಥಮ ದರ್ಜೆ ಕಾಲೇಜಿನ ಎನ್‌ಎಸ್‌ಎಸ್ ಘಟಕ 1 ಮತ್ತು  2ರ ಸಹಯೋಗದಲ್ಲಿ ಸ್ವಾಮಿ ವಿವೇಕಾನಂದರ 150ನೇ ಜಯಂತಿ ಅಂಗವಾಗಿ ಸ್ವಾಮಿ ವಿವೇಕಾನಂದರ ಸಪ್ತಾಹ ನಿಮಿತ್ತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಇಂದಿಗೂ ನಮ್ಮ ಭಾರತೀಯ ಪರಂಪರೆ, ಸಂಪ್ರದಾಯಗಳು ಇತರ ದೇಶಗಳಿಗೆ ಮಾದರಿಯಾಗಿವೆ. ಆದರೆ, ಇತ್ತೀಚಿನ ದಿನಗಳಲ್ಲಿ ವಿದೇಶಿ ವ್ಯಾಮೋಹದಿಂದ ನಮ್ಮ ಸಂಸ್ಕೃತಿಗೆ ಕುಂದು ತರುವಂತಹ ಕಾರ್ಯ ನಡೆಯುತ್ತಿದೆ. ವಿದ್ಯಾರ್ಥಿಗಳೇ ನೀವು ಈ ದೇಶದ ಪ್ರತಿನಿಧಿಗಳು, ನಮ್ಮ ಭವ್ಯ ಪರಂಪರೆ ಬೆಳೆಸಿ, ಸ್ವದೇಶಿ ಚಿಂತನೆ, ಸ್ವದೇಶಿ ವಸ್ತು ಬಳಕೆ ಮಾಡಿ, ಭಯೋತ್ಪಾದನೆಗೆ ಅವಕಾಶ ನೀಡಬೇಡಿ. ಭಾರತ ಮಾತೆಯ ರಕ್ಷಣೆಗೆ ಪಣತೊಡಿ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾ. ಎಸ್.ಎಸ್. ಪಟ್ಟಣಶೆಟ್ಟಿ ವಹಿಸಿದ್ದರು. ಗೀತಾ ಹಡಪದ ಪ್ರಾರ್ಥಿಸಿದರು. ಪ್ರೊ. ಎನ್.ಎಸ್. ಹುಣಶಿಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ಎಸ್.ಎಸ್. ಹುರಕಡ್ಲಿ ಸ್ವಾಗತಿಸಿದರು. ಪುಷ್ಪಾ ಮುತ್ತಣ್ಣವರ ನಿರೂಪಿದರು. ಪ್ರೊ. ಬಸವರಾಜ ಬೆಳವಟಗಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.