ಗದಗ

ಇಂದು ಉಪವಾಸ (ಸುದ್ದಿ ಸಂಕ್ಷೇಪ್ಛ)

Published On :

ನರಗುಂದ: ಹಿಂದೂ ಹಾಗೂ ಭಗವಾಧ್ವಜಕ್ಕೆ ಅಪಮಾನ ಖಂಡಿಸಿ ಜ. 24ರಂದು ಬೆಳಗ್ಗೆ 10 ಗಂಟೆಗೆ 1 ದಿನದ ಉಪವಾಸ ಸತ್ಯಾಗ್ರಹವನ್ನು ಪಟ್ಟಣದ ಮಿನಿ ವಿಧಾನಸಭಾ ಆವರಣದಲ್ಲಿ ಹಮ್ಮಿಕೊಳಲಾಗಿದ್ದು, ನರಗುಂದ ವಿಧಾನಸಭಾ ಮತಕ್ಷೇತ್ರದ ಕಾರ್ಯಕರ್ತರು ಭಾಗವಹಿಸಬೇಕೆಂದು ಮತಕ್ಷೇತ್ರದ ಬಿಜೆಪಿ ಅಧ್ಯಕ್ಷ ಸಿ.ವೈ. ದಂಡಿನ ತಿಳಿಸಿದ್ದಾರೆ.

ವಾಲಿಬಾಲ್ ಪಂದ್ಯಾವಳಿ
ನರಗುಂದ: ಪಟ್ಟಣದ ಸಿದ್ದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆಶ್ರಯದಲ್ಲಿ ಫೆ. 5, 6ರಂದು ಕಾಲೇಜು ಆವರಣದಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಪುರುಷರ 2ನೇ ವಲಯ ಮಟ್ಟದ ವಾಲಿಬಾಲ್ ಪಂದ್ಯಾವಳಿ ಜರುಗಲಿದೆ. 2ನೇ ವಲಯದಲ್ಲಿ ಬರುವ ಪದವಿ ಕಾಲೇಜುಗಳ ತಂಡಗಳು ಭಾಗವಹಿಸಬಹುದು. ಆಸಕ್ತ ತಂಡಗಳು ಪ್ರವೇಶ ಶುಲ್ಕ, ವಿದ್ಯಾರ್ಥಿಗಳ ಯಾದಿಯನ್ನು ಫೆ. 4ರೊಳಗೆ ಮಹಾವಿದ್ಯಾಲಯಕ್ಕೆ ತಲುಪಿಸಲು ಪ್ರಾಚಾರ್ಯರು, ದೈಹಿಕ ಶಿಕ್ಷಣ ನಿರ್ದೇಶಕರು, ಕಾರ್ಯಾಧ್ಯಕ್ಷರು ಕ್ರೀಡಾ ವಿಭಾಗ (ದೂ. 08377-244245) ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ನೀರು ಪೂರೈಕೆ ಮಾಹಿತಿ
ಗದಗ: ನಗರದ ಅಂಬೇಡ್ಕರ್ ನಗರ, ಹುಬ್ಬಳ್ಳಿ ರಸ್ತೆ, ಜನತಾ ಕಾಲನಿ, ರೆಹಮತ ನಗರ, ಕುಂಬಾರ ಓಣಿ, ಕುಷ್ಠರೋಗ ಕಾಲನಿ, ನರಿಬಾವಿ ಓಣಿ, ಅರಸಿದ್ದಿ ಓಣಿ, ವಿಭೂತಿ ಓಣಿ ಈ ಭಾಗಗಳಲ್ಲಿ ಗುರುವಾರ ತುಂಗಭದ್ರಾ ನದಿ ನೀರು ಪೂರೈಕೆ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.