ಅಹಿಂದ ಸಮುದಾಯ ಕಡೆಗಣನೆ: ಮೆಣಸಿನಕಾಯಿ
ಕನ್ನಡಪ್ರಭ ವಾರ್ತೆ, ಗದಗ, ಜ. 23
ದೇಶಕ್ಕೆ ಸ್ವಾತಂತ್ರ್ಯ ದೊರೆತ ನಂತರ ಆಡಳಿತ ಚುಕ್ಕಾಣಿ ಹಿಡಿದ ರಾಷ್ಟ್ರೀಯ ಪಕ್ಷಗಳು ಅಲ್ಪಸಂಖ್ಯಾತರು, ದಲಿತರು, ಹಿಂದುಳಿದ ವರ್ಗಗಳನ್ನು ತಮ್ಮ ಅಧಿಕಾರಕ್ಕಾಗಿ ಏಣಿಯಾಗಿ ಬಳಸಿಕೊಂಡು ಅಧಿಕಾರ ಪಡೆದ ನಂತರ ಅಹಿಂದ ಸಮುದಾಯವನ್ನು ಕಡೆಗಣಿಸುತ್ತಾ ಬಂದಿದ್ದಾರೆ ಎಂದು ಬಿ.ಎಸ್.ಆರ್. ಕಾಂಗ್ರೆಸ್ ಪಕ್ಷದ ಸಂಚಾಲಕ ಅನಿಲ ಮೆಣಸಿನಕಾಯಿ ಹೇಳಿದರು.
ಅವರು ಮಂಗಳವಾರ ನಗರದ ಡೋರಗಲ್ಲಿ, ರೆಹಮತ್ ನಗರ, 16ನೇ ವಾರ್ಡಿನ ಕಾರ್ಯಕರ್ತರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಮಾತನಾಡಿದರು. ದೇಶದಲ್ಲಿ ಇವತ್ತಿಗೂ ಸೂರಿಗಾಗಿ, ನೀರಿಗಾಗಿ, ಜನತೆ ಎಲ್ಲ ನೆತ್ತರು ಹರಿಸುವಂತಾಗಿದೆ. ರಾಷ್ಟ್ರೀಯ ಪಕ್ಷಗಳು ಬಂಡವಾಳ ಶಾಹಿಗಳ ಕಪಿಮುಷ್ಟಿಯಲ್ಲಿ ಸಿಲುಕಿ ಬಡವರು, ಶ್ರೀಮಂತರು, ರೈತರ ಆಶೋತ್ತರಗಳನ್ನು ಈಡೇರಿಸುತ್ತಿಲ್ಲ. ಇದನ್ನು ಸಮಗ್ರವಾಗಿ ಅರಿತುಕೊಂಡಿರುವ ಬಿ. ಶ್ರೀರಾಮುಲು ನೊಂದವರ ಬದುಕಿಗೆ ನೆರಳಾಗಬೇಕೆಂದು ಬಿಎಸ್‌ಆರ್ ಕಾಂಗ್ರೆಸ್ ಪಕ್ಷವನ್ನು ರಾಜ್ಯದಲ್ಲಿ ಹುಟ್ಟುಹಾಕಿದ್ದು, ಈ ಪಕ್ಷವನ್ನು ರಾಜ್ಯದಲ್ಲಿ ಆಡಳಿತಕ್ಕೆ ತರುವುದರೊಂದಿಗೆ ರಾಜ್ಯವನ್ನು ಭಾರತದಲ್ಲಿ ಸಮೃದ್ಧ ರಾಜ್ಯವನ್ನಾಗಿ ಮಾಡುವ ಸಂಕಲ್ಪ ಹೊಂದಿದ್ದಾರೆ ಎಂದರು. ಪಕ್ಷದ ಸಹ-ಸಂಚಾಲಕ ವೆಂಕಟೇಶ ದಾಸರ, ಪಕ್ಷದ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಮೌಲಾಸಾಬ ಮಾನ್ವಿ, ರವೀಂದ್ರ ಲಕ್ಕುಂಡಿ, ಮಂಜುನಾಥ ಮುಳಗುಂದ ಮಾತನಾಡಿದರು. ಈ ಸಂದರ್ಭದಲ್ಲಿ ರಾಜ್ಯ ಯುವ ಘಟಕದ ಕಾರ್ಯದರ್ಶಿ ಸಯ್ಯದಖಾಲಿ ಕೊಪ್ಪಳ, ಸತೀಶ ಮುದಗಲ್ಲ, ರಾಮಚಂದ್ರ ಮುಂಡರಗಿ, ಹನುಮಂತ ಗೆಜ್ಜಳ್ಳಿ, ಫಕ್ರುಸಾಬ ಸಿದ್ನೇಕೊಪ್ಪ, ಮಂಜುನಾಥ ಮುಂಡರಗಿ, ಸೋಹಿಲ್ ಪಟೇಲ, ಲಕ್ಷ್ಮಣ ಗೋಕಾವಿ, ಸುಲೇಮಾನ ಮನಿಯಾರ, ಮಾಬುಸಾಬ ಸಿದ್ನೆಕೊಪ್ಪ, ಶಬ್ಬೀರ ಕಿಲ್ಲೇದಾರ, ಮಹ್ಮದ ಹುಸೇನ ಗಬ್ಬುರ್, ಅಲ್ಲಾಭಕ್ಷಿ ಅತ್ತಾರ, ಶ್ರೀರಂಗ ಹುಯಿಲಗೋಳ, ರಫೀಕ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

