ಗದಗ

ನಮ್ಮ ಕಣ್ಣು ಮತ್ತೊಬ್ಬರ ಬಾಳಿಗೆ ಬೆಳಕು

Published On :

ಮುಂಡರಗಿ: ನಮ್ಮ ಕಣ್ಣುಗಳು ನಾವು ಸತ್ತ ನಂತರವೂ ಮಣ್ಣಿಗೆ ಅಥವಾ ಬೆಂಕಿಗೆ ನಾಶವಾಗಿ ಹೋಗದೆ ಇನ್ನೊಬ್ಬರ ಬಾಳಿಗೆ ಬೆಳಕಾಗಬೇಕೆಂದು ಮಾಜಿ ಸಚಿವ ಎಸ್.ಎಸ್. ಪಾಟೀಲ ಹೇಳಿದರು.
ಅವರು ಬುಧವಾರ ತಾಲೂಕಿನ ಕಲಕೇರಿ ಗ್ರಾಮದ ಎಂ.ಬಿ. ಪಾಟೀಲ್ ಪಪೂ ಕಾಲೇಜು ಆವರಣದಲ್ಲಿ ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ ಗದಗ, ಡಾ. ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆ ಹುಬ್ಬಳ್ಳಿ, ವಿವೇಕ ಜಾಗೃತ ಬಳಗ ಮುಂಡರಗಿ, ಎಸ್.ಎಸ್.ಪಾಟೀಲ ಪ್ರತಿಷ್ಠಾನ ಕಲಕೇರಿ, ಎಂ.ಬಿ. ಪಾಟೀಲ್ ಪಪೂ ಕಾಲೇಜಿನ ಎನ್.ಎಸ್.ಎಸ್.ಘಟಕ ಕಲಕೇರಿ, ಗ್ರಾಮ ಪಂಚಾಯಿತಿ ಕಲಕೇರಿ, ಜಿಲ್ಲಾ ಆಯುಷ್ ಇಲಾಖೆ, ತಾಲೂಕು ಆರೋಗ್ಯಾಧಿಕಾರಿಗಳು ಮುಂಡರಗಿ, ಔಷಧಿ ವ್ಯಾಪಾರಸ್ಥರ ಸಂಘ, ತ್ಯಾಗವೀರ ಶಿರಸಂಗಿ ಲಿಂಗರಾಜರ ಸೇವಾ ಸಂಸ್ಥೆ ಮುಂಡರಗಿ, ಪಂಚವಟಿ ಪ್ರತಿಷ್ಠಾನ ಮುಂಡರಗಿ ಮತ್ತು ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ ಹಾರೋಗೇರಿ ಇವುಗಳ ಆಶ್ರಯದಲ್ಲಿ ಜರುಗಿದ 13ನೇ ಬೃಹತ್ ಉಚಿತ ಕಣ್ಣಿನ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಮಾನವನ ದೇಹ ಹೆಚ್ಚು ಬೆಲೆ ಬಾಳುವಂತದ್ದು, ಈ ದೇಹವನ್ನು ಸತ್ತಾಗ ಮಣ್ಣಲ್ಲಿ ಹೂಳುವುದು ಅಥವಾ ಸುಡುವುದನ್ನು ಮಾಡದೇ ದೇಹದಾನ ಮಾಡಬೇಕು. ಇದರಿಂದ ಅನೇಕ ವೈದ್ಯಕೀಯ ಕ್ಷೇತ್ರದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ದೇಹದಲ್ಲಿ ಕಣ್ಣು ಒಂದು ಪ್ರಮುಖ ಅಂಗ. ಈ ಕಣ್ಣಿನ ಸಂರಕ್ಷಣೆಗಾಗಿ ಅನೇಕ ಸಂಘಟನೆಗಳು ಸೇರಿ ಇಂತಹ ಕಾರ್ಯಕ್ರಮ ಮಾಡುತ್ತಿರುವುದು ಶ್ಲಾಘನೀಯ ಎಂದ ಎಸ್.ಎಸ್. ಪಾಟೀಲ್ ತಾವು ಮತ್ತು ತಮ್ಮ ಧರ್ಮಪತ್ನಿ ಮರಣದ ನಂತರ ತಮ್ಮ ದೇಹವನ್ನು ವೈದ್ಯಕೀಯ ಕಾಲೇಜಿಗೆ ದಾನ ಮಾಡುವುದಕ್ಕೆ ಒಪ್ಪಿಗೆ ನೀಡಿರುವುದಾಗಿ ಹೇಳಿದರು. ತಾಪಂ ಸದಸ್ಯ ಪಾಲಾಕ್ಷಗೌಡ ಪಾಟೀಲ್ ಮುಂತಾದವರು ಮಾತನಾಡಿದರು. ಕಲಕೇರಿ ಗ್ರಾಪಂ ಅಧ್ಯಕ್ಷ ರಾಜಶೇಖರ ಮೇಟಿ ಅಧ್ಯಕ್ಷತೆ ವಹಿಸಿದ್ದರು. ವಿರುಪಾಪುರ ಮಠದ ಷ.ಬ್ರ ಮುಧುಕೇಶ್ವರ ಶ್ರೀ ಸಾನ್ನಿಧ್ಯ ವಹಿಸಿದ್ದರು. ಈ ಶಿಬಿರದಲ್ಲಿ 150 ಜನರನ್ನು ತಪಾಸಣೆ ಮಾಡಲಾಯಿತು. ಡಾ. ಪಿ.ಬಿ. ಹಿರೇಗೌಡ್ರ, ಡಾ. ಕುಲಕರ್ಣಿ, ಪ್ರೊ. ಬಿ.ಎಂ. ಕಟ್ಟಿಮನಿ ಉಪಸ್ಥಿತರಿದ್ದರು. ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ಪ್ರೊ.ಎ. ಮಂಜುನಾಥ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ವಿ.ವೈ. ತಿಮ್ಮಾಪೂರ ನಿರೂಪಿಸಿ, ಪ್ರೊ. ಎಂ.ವಿ. ಬರಡೋಲ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.