ಗದಗ

ಪೈಗಂಬರರ ತತ್ವಾದರ್ಶ ಅವಿಸ್ಮರಣೀಯ: ಪಾಟೀಲ

Published On :

ಕನ್ನಡಪ್ರಭ ವಾರ್ತೆ, ಗದಗ, ಜ. 25
ಪ್ರವಾದಿ ಹಜರತ್ ಮಹ್ಮದ ಪೈಗಂಬರರ ತತ್ವಾದರ್ಶಗಳು ಸದಾ ಅವಿಸ್ಮರಣೀಯ ಎಂದು ಮಾಜಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಅವರು ಶುಕ್ರವಾರ ಬೆಳಗ್ಗೆ ನಗರದ ಸರಾಫ ಬಜಾರದಲ್ಲಿರುವ ಮಾಬುಸುಬಾನಿ ಕಟ್ಟೆಯ ಹತ್ತಿರ ಈದ್ ಮಿಲಾದ ಅಂಗವಾಗಿ ಈದ್ ಮಿಲಾದ ಕಮಿಟಿ ಆಶ್ರಯದಲ್ಲಿ ನಡೆದ ಜುಲೂಸ್ (ಮೆರವಣಿಗೆ)ಗೆ ಚಾಲನೆ ನೀಡಿ ಮಾತನಾಡಿದರು.
ಇಸ್ಲಾಂ ಧರ್ಮ ಶಾಂತಿ, ಸಹಬಾಳ್ವೆ ಹಾಗೂ ಸ್ವಯಂಶಿಸ್ತಿನ ಆದರ್ಶ ಧರ್ಮವಾಗಿದೆ. ಇಸ್ಲಾಂ ಧರ್ಮದ ಪ್ರವಾದಿಗಳಾದ ಹಜರತ್ ಪೈಗಂಬರರ ತತ್ವ ಸಿದ್ಧಾಂತಗಳನ್ನು ಸ್ಮರಿಸುವ ಹಾಗೂ ಅವರು ತೋರಿಸಿದ ಮಾರ್ಗದರ್ಶನದಲ್ಲಿ ನಡೆದು ಸಾರ್ಥಕ ಬದುಕನ್ನು ನಾವೆಲ್ಲ ಸಾಗಿಸಬೇಕಾಗಿದೆ.
ಗದಗ ಪರಿಸರದಲ್ಲಿ ಹಿಂದೂ-ಮುಸ್ಲಿಂ ಬಾಂಧವರು ಪರಿಪಾಲಿಸಿಕೊಂಡು ಬಂದಿರುವ ಸೌಹಾರ್ದ ಪರಂಪರೆ ಇಡಿ ವಿಶ್ವಕ್ಕೆ ಮಾದರಿಯಾಗಿದೆ. ಇಂತಹ ಸೌಹಾರ್ದತೆಯಿಂದ ಸಮಾಜದಲ್ಲಿ ಶಾಂತಿ, ನೆಮ್ಮದಿ ಪರಸ್ಪರ ಗೌರವಿಸುವ ಪರಿಪಾಠ ಎಲ್ಲರಿಗೂ ಅನುಕರಣೀಯವಾಗಿದೆ ಎಂದರು. ಈದ್ ಮಿಲಾದ ಕಮಿಟಿ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಮಿಟಿ ಅಧ್ಯಕ್ಷ ಎಂ.ಐ.ನವಲೂರ, ಅಂಜುಮನ್ ಈ ಇಸ್ಲಾಂ ಅಧ್ಯಕ್ಷ ಸಾಧಿಕ್ ನರಗುಂದ, ಮಾಜಿ ಅಧ್ಯಕ್ಷ ಅಕ್ಬರಸಾಬ್ ಬಬರ್ಚಿ, ಈದ್ ಮಿಲಾದ ಕಮಿಟಿ ಪ್ರಧಾನ ಕಾರ್ಯದರ್ಶಿ ನಿಸ್ಸಾರ ಅಹ್ಮದ ಖಾಜಿ, ಜಿ.ಎಂ. ದಂಡಿನ, ರಾಜಾಸಾಬ ಪಠಾಣ್, ಬಾಬಾಜಾನ ಬಳಗಾನೂರ, ಮುನ್ನಾ ರೇಷ್ಮೆ, ಅಬೂಬಕರ ಅಣ್ಣಿಗೇರಿ, ಇರ್ಷಾದ್ ಖಾಜಿ, ಅಬ್ದುಲ್ ರೆಹಮಾನ್ ಹುಯಿಲಗೋಳ, ಜಿಲಾನಿ ಕಮಲಾಪುರ, ಉಮಚಗಿಸಾಬ್, ಬರಕತ್‌ಅಲಿ ಮುಲ್ಲಾ ಸೇರಿದಂತೆ ಅವಳಿ ನಗರದ ಪ್ರಮುಖ ಗಣ್ಯರು, ಮುಸ್ಲಿಂ ಸಮುದಾಯದ ಮುಖಂಡರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.