ಗದಗ

ಹಾಸ್ಯ ಆರೋಗ್ಯ ವೃದ್ಧಿಗೆಸಹಕಾರಿ: ಪ್ರೊ೤ ವೈದ್ಯ

Published On :


ಮುಂಡರಗಿ: ಆಡಂಬರ ಹಾಗೂ ಒತ್ತಡದ ಜೀವನ ಸಾಗಿಸುತ್ತಿರುವ ಈ ದಿನಗಳಲ್ಲಿ ನಗು ಬಹುತೇಕ ಮಾಯವಾಗಿದೆ. ಮನುಷ್ಯನ ರೋಗಕ್ಕೆ ನಗುವೇ ಔಷಧ. ನಗು ಮನಸ್ಸನ್ನು ಅರಳಿಸುವ ಜತೆಗೆ ಆರೋಗ್ಯವನ್ನು ಹೆಚ್ಚಿಸಲು ಸಹಕಾರಿ ಎಂದು ಗದಗನ ಕೆವಿಎಸ್‌ಆರ್ ಕಾಲೇಜಿನ ಉಪನ್ಯಾಸಕ ಪ್ರೊ೤ ಅನಿಲ ವೈದ್ಯ ಹೇಳಿದರು.
ಪಟ್ಟಣದ ಜ. ಅನ್ನದಾನೀಶ್ವರ ಸಮಿತಿಯ ಕೆ.ಆರ್. ಬೆಲ್ಲದ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಕರ್ನಾಟಕ ಸಂಘದ ಆಶ್ರಯದಲ್ಲಿ ಏರ್ಪಡಿಸಿದ್ದ ಹಾಸ್ಯ ಲಹರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು, ಇನ್ನೊಬ್ಬರು ಬೆಳೆದಾಗ ನಾವು ಖುಷಿ ಪಡುವುದೇ ನಿಜವಾದ ವ್ಯಕ್ತಿತ್ವ. ಕನ್ನಡ ಭಾಷೆಯ ಗತ್ತು ಇನ್ನಾವ ಭಾಷೆಗೂ ಬರುವುದಿಲ್ಲ. ಅನೇಕ ಪ್ರಸಂಗಗಳಲ್ಲಿ ಹಾಸ್ಯವನ್ನು ನಮ್ಮ ಜೀವನದ ಜತೆಗೇ ಕಾಣುತ್ತೇವೆ ಎಂದು ಹಲವು ಹಾಸ್ಯ ಪ್ರಸಂಗಗಳನ್ನು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಎಸ್.ಬಿ.ಕೆ. ಗೌಡರ ಮಾತನಾಡಿ, ಹಾಸ್ಯದಿಂದ ಬರೀ ನಗುವುದಲ್ಲ. ಅದರ ನೀತಿಯನ್ನು ಅರಿತುಕೊಳ್ಳುವುದೂ ಮುಖ್ಯ. ಹಾಸ್ಯದಿಂದ ಅನೇಕ ಕಷ್ಟಗಳನ್ನು ಮರೆಯಬಹುದು ಎಂದರು.
ಪ್ರೊ೤ ಎಂ.ಜಿ. ಗಚ್ಚಣ್ಣವರ, ಪ್ರೊ೤ ಎಸ್.ಆರ್. ಬಸಾಪುರ, ಎ.ವೈ. ನವಲಗುಂದ. ಡಾ೤ ವಿ.ಕೆ. ಕೋಳೂರಮಠ, ಪ್ರೊ೤ ಬಿ.ಎಫ್. ಈಟಿ, ಎ. ಮಂಜುನಾಥ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕರ್ನಾಟಕ ಸಂಘದ ಕಾರ್ಯಾಧ್ಯಕ್ಷ ಪ್ರೊ೤ ಆರ್.ಎಲ್. ಪೊಲೀಸ್‌ಪಾಟೀಲ ಸ್ವಾಗತಿಸಿದರು. ಸುರೇಶ ಬಿಸನಳ್ಳಿ ನಿರೂಪಿಸಿದರು. ಜಿ.ಐ. ತಿಗರಿ ವಂದಿಸಿದರು.




Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.