ಗದಗ

ಮುಂಡರಗಿ: ತಿರಕಪ್ಪ ಹುಬ್ಬಳ್ಳಿ ನಿಧನ

Published On :


ಮುಂಡರಗಿ: ಪಟ್ಟಣದ ಕೋಟೆಭಾಗದ ಹಿರಿಯರು ಹಾಗೂ ಸ್ವಾತಂತ್ರ್ಯ ಹೋರಾಟಗಾರ ತಿರಕಪ್ಪ ಚೆನ್ನಪ್ಪ ಹುಬ್ಬಳ್ಳಿ (92) ಮಂಗಳವಾರ ಬೆಳಗ್ಗೆ ನಿಧನರಾದರು. ಮೃತರು ಪತ್ನಿ, ತಾಲೂಕು ಔಷಧ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ನಾಗೇಶ ಹುಬ್ಬಳ್ಳಿ ಸೇರಿದಂತೆ ಮೂವರು ಪುತ್ರರು ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಬಳಗ ಹೊಂದಿದ್ದರು.
ಅವರಿಗೆ ತಾಲೂಕು ಆಡಳಿತದ ವತಿಯಿಂದ ಸರ್ಕಾರಿ ಗೌರವ ವಂದನೆ ಸಲ್ಲಿಸಲಾಯಿತು. ಜ.ಡಾ. ತೋಂಟದ ಸಿದ್ಧಲಿಂಗ ಶ್ರೀ, ಜ.ಡಾ. ಅನ್ನದಾನೀಶ್ವರ ಶ್ರೀ, ಕರಬಸಪ್ಪ ಹಂಚಿನಾಳ, ಡಾ. ವಿ.ಕೆ. ಸಂಕನಗೌಡ್ರ, ವೈ.ಎನ್. ಗೌಡರ, ಹೇಮಂತಗೌಡ ಪಾಟೀಲ, ಕೊಟ್ರೇಶ ಅಂಗಡಿ, ರವಿಂದ್ರ ಉಪ್ಪಿನಬೆಟಗೇರಿ, ರಜನೀಕಾಂತ ದೇಸಾಯಿ, ಮಂಜುನಾಥ ಇಟಗಿ, ಜಗನ್ನಾತ ಅಳವಂಡಿ, ದೇವಪ್ಪ ಇಟಗಿ, ಆನಂದಗೌಡ ಪಾಟೀಲ್, ಡಿ.ಡಿ. ಮೋರನಾಳ, ದೇವಪ್ಪ ಬಾರಕೇರ, ಡಾ. ನಿಂಗು ಸೊಲಗಿ, ಪಾಲಾಕ್ಷಿ ಗಣದಿಣ್ಣಿ, ಮುತ್ತಣ್ಣ ಹಾಳಕೇರಿ, ರಾಮಣ್ಣ ಬಳ್ಳಾರಿ, ಸಿ.ಎಸ್. ಅರಸನಾಳ, ಅಂದಾನಗೌಡ ಪಾಟೀಲ, ನಾಗರಾಜ ಹೊಂಬಳಗಟ್ಟಿ, ಸದಾಶಿವಯ್ಯ ಕಬ್ಬೂರಮಠ ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.