ಗದಗ

ನಾಳೆಯಿಂದ ಗ್ರಾಮಸಭೆ

Published On :

ಗದಗ: ತಾಲೂಕಿನ ಅಡವಿಸೋಮಾಪುರ ಗ್ರಾಪಂನ ಪ್ರಸಕ್ತ ಸಾಲಿನ ಮೊದಲ ಸುತ್ತಿನ ವಾರ್ಡ್ ಸಭೆ ಹಾಗೂ ಗ್ರಾಮ ಸಭೆ ಜು. 18 ಹಾಗೂ 19 ರಂದು ಹಮ್ಮಿಕೊಳ್ಳಲಾಗಿದೆ. ಜು. 18ರಂದು ಬೆಳಗ್ಗೆ 10ಕ್ಕೆ   ಗ್ರಾಮದ ದ್ಯಾಮವ್ವ ದೇವಸ್ಥಾನದಲ್ಲಿ 1ನೇ ವಾರ್ಡ್ ಸಭೆ, 11.30 ಕ್ಕೆ ಬೀರಲಿಂಗೇಶ್ವರ ದೇವಸ್ಥಾನದಲ್ಲಿ 2ನೇ ವಾರ್ಡ್ ಸಭೆ, ಅಡವಿಸೋಮಾಪುರ ಸಣ್ಣತಾಂಡೆಯ ಸೇವಾಲಾಲ ದೇವಸ್ಥಾನದಲ್ಲಿ ಮಧ್ಯಾಹ್ನ 1 ಕ್ಕೆ 3ನೇ ವಾರ್ಡ್‌ಸಭೆ, ಅಡವಿಸೋಮಾಪುರ ದೊಡ್ಡ ತಾಂಡೆಯ ಸೇವಾಲಾಲ ದೇವಸ್ಥಾನದಲ್ಲಿ 2 ಗಂಟೆಗೆ 4ನೇ ವಾರ್ಡ್ ಸಭೆ, ಪಾಪನಾಶಿತಾಂಡೆಯ ಸೇವಾಲಾಲ ದೇವಸ್ಥಾನದಲ್ಲಿ 3 ಗಂಟೆಗೆ 5ನೇ ವಾರ್ಡ್‌ಸಭೆ ಮತ್ತು ಪಾಪನಾಶಿ ಗ್ರಾಮದ ಗ್ರಾಮ ಚಾವಡಿಯಲ್ಲಿ ಸಂಜೆ 4ಕ್ಕೆ 6ನೇ ವಾರ್ಡ್ ಸಭೆಯನ್ನು ಆಯೋಜಿಸಲಾಗಿದೆ. ಜು. 19ರ ಬೆಳಗ್ಗೆ 11ಕ್ಕೆ ಅಡವಿಸೋಮಾಪುರ ಗ್ರಾಮದ ಗೋಣಿ ಬಸವೇಶ್ವರ ದೇವಸ್ಥಾನದಲ್ಲಿ ಗ್ರಾಮಸಭೆ ಹಮ್ಮಿಕೊಳ್ಳಲಾಗಿದೆ. ಈ ಸಭೆಗೆ ನೋಡಲ್ ಅಧಿಕಾರಿಗಳಾಗಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಆಗಮಿಸುವರು. ಗ್ರಾಪಂ ಅಧ್ಯಕ್ಷ ರಮೇಶ ಲಮಾಣಿ, ಉಪಾಧ್ಯಕ್ಷೆ ನಾಗವ್ವ ಹುಡೇದ ಸೇರಿದಂತೆ ಸದಸ್ಯರು ವಾರ್ಡ್‌ಸಭೆಗೆ, ಗ್ರಾಮಸಭೆಯಲ್ಲಿ ಪಾಲ್ಗೊಳ್ಳುವಂತೆ ಪಿಡಿಓ ಬಿ.ವಿ. ತಿಮ್ಮಾಪುರ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.