ಜನಸಂಖ್ಯೆ ನಿಯಂತ್ರಣಕ್ಕೆ ಕ್ರಮ ಅಗತ್ಯ
ಗದಗ: ಜನಸಂಖ್ಯೆ ವಿಪರಿತವಾಗಿ ಬೆಳೆಯುತ್ತಿದ್ದು, ನಿಯಂತ್ರಣ ಕೈಗೊಳ್ಳದೇ ಇದ್ದಲ್ಲಿ ಭೂಮಿಯ ಅವನತಿ ಖಂಡಿತವಾಗಿದ್ದು, ಕಾರಣ ಪ್ರತಿಯೊಬ್ಬರೂ ಜನಸಂಖ್ಯೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವುದು ಅವಶ್ಯಕ ಎಂದು ಎಂ.ಎಂ. ಗೌಡರ ಹೇಳಿದರು.
ಈಚೆಗೆ ಅವರು ಇನ್ನರ್ವ್ಹೀಲ್ ಸಂಸ್ಥೆಯ ಕಚೇರಿಯಲ್ಲಿ ಗದಗ-ಬೆಟಗೇರಿ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವಜನಸಂಖ್ಯಾ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜನಸಂಖ್ಯಾ ನಿಯಂತ್ರಣ ಮಾಡದೇ ಇದ್ದಲ್ಲಿ ಮುಂದಿನ ದಿನಗಳನ್ನು ಕಷ್ಟಕರ ದಿನಗಳನ್ನು ಎದುರಿಸುವ ಸಂಭವವಿದ್ದು, ನಿಲ್ಲಲು ಸ್ಥಳ ಕುಡಿಯಲು ಗಂಜಿ ಸಿಗುವುದು ಕಷ್ಟವಾಗುತ್ತದೆ. ಇದನ್ನು ತಡೆಯುವಲ್ಲಿ ಪ್ರತಿಯೊಬ್ಬರೂ ಶ್ರಮಿಸುವುದು ಅತ್ಯವಶ್ಯಕ ಎಂದರು. ಸಂಸ್ಥೆ ಯ ಅಧ್ಯಕ್ಷ ಅನ್ನಪೂರ್ಣಾ ವರವಿ, ಸುಲೋಚನಾ ಐಹೋಳಿ, ನಾಗರತ್ನಾ ಮಾರನಬಸರಿ, ಸುವರ್ಣಾ ವಸ್ತ್ರದ, ರಜನಿ ಪಾಟೀಲ, ಪದ್ಮಲತಾ ಮಾನ್ವಿ, ಸಂಘದ ಸದಸ್ಯರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

