ಗದಗ

ಓದಿನಷ್ಟೆ ಆರೋಗ್ಯವೂ ಮುಖ್ಯ: ಬೀರನೂರ

Published On :

ಹೊಳೆಆಲೂರು: ವಿದ್ಯಾರ್ಥಿಗಳಿಗೆ ಓದಿನಷ್ಟೆ ಆರೋಗ್ಯವೂ ಮುಖ್ಯವಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಚನ್ನಪ್ಪ ಬೀರನೂರ   ಹೇಳಿದರು.
ಅವರು ಗುರುವಾರ ಸ್ಥಳೀಯ ಕಲ್ಮೇಶ್ವರ ಸಂಯುಕ್ತ ಪ್ರೌಢ ಶಾಲೆಯ ವತಿಯಿಂದ ದಿ. ಆರ್.ಎಸ್. ಮಡಿವಾಳರ ಗುರುಗಳ ಸ್ಮರಣಾರ್ಥವಾಗಿ ಸಂಸ್ಥೆಯ ರಜತ ಮಹೋತ್ಸವ ಭವನದಲ್ಲಿ ವಿದ್ಯಾರ್ಥಿಗಳಿಗೆ ಆರೋಗ್ಯ ಉಚಿತ ತಪಾಸಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಈ ಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಮಡಿವಾಳರ ಅವರ ನೆನಪಲ್ಲಿ ಆರೋಗ್ಯ ತಪಾಸಣೆ ನಡೆಸುತ್ತಿರುವುದು ಶ್ಲಾಘನೀಯವಾಗಿದ್ದು, ಸ್ಥಳೀಯ ವೈದ್ಯರೂ ಶಾಲೆಯಲ್ಲಿನ ಮಕ್ಕಳ ಉಚಿತ ತಪಾಸಣೆಗೆ ಸಹಕಾರ ನೀಡಿದ್ದು ಸಂತೋಷ ತಂದಿದೆ ಎಂದರು.
ಸ್ಥಳೀಯ ವೈದ್ಯರ ಸಂಘದ ಅಧ್ಯಕ್ಷ ಡಾ. ಹಿರೇಗೌಡರ, ವಿ.ಎಸ್. ತಳೇವಾಡ, ಡಾ. ಎಂ.ಎಸ್. ಉಪ್ಪಿನ, ಡಾ. ಎ.ಎಸ್. ಭೀಮನಗೌಡ್ರ, ಡಾ. ಕೆ.ಎಸ್. ಸಂತೋಜಿ, ಡಾ. ಎ.ಐ. ಅಂಗಡಿ, ಡಾ. ಪಿ.ಆರ್. ಮಡಿವಾಳರ, ಮುಖ್ಯೋಪಾಧ್ಯಾಯ ಯಂಕಣ್ಣ ಗಾಣಿಗೇರ, ವಿಶ್ವನಾಥ ಧನ್ನೂರ, ಸಿ.ಎ. ಕಲ್ಲನಗೌಡರ, ಎಂ.ಎಸ್. ಕರಡದ, ವಿ.ಎಲ್. ಮಾನೆ, ಕೆ.ಕೆ. ಅರಹುಣಶಿ ಮತ್ತು ಸಿಬ್ಬಂದಿ ವರ್ಗದವರು ಇದ್ದರು. ಶಿಬಿರದಲ್ಲಿ ಒಟ್ಟು 180 ವಿದ್ಯಾರ್ಥಿಗಳನ್ನು ತಪಾಸಣೆ ನಡೆಸಲಾಯಿತು. ಅಗತ್ಯವಿದ್ದವರಿಗೆ ಉಚಿತ ಔಷಧಗಳನ್ನು ವೈದ್ಯರ ಸಂಘದ ನೆರವಿನಿಂದ ವಿತರಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.