ಗದಗ

ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ

Published On :

ಗದಗ: ಮಕ್ಕಳಿಗೆ ಅತಿ ಅವಶ್ಯಕವಾಗಿ ಅನ್ನ-ಅಕ್ಷರ-ಆರೋಗ್ಯ-ಶಿಸ್ತು ಇವು ನಿತ್ಯ ನಿರಂತವಾಗಿ ಬೇಕು ಎಂದು ಶೇಖಣ್ಣ ಉಮಚಗಿ ಹೇಳಿದರು.
ಈಚೆಗೆ ಅವರು ತಾಲೂಕಿನ ಹೊಂಬಳ ಕ್ಲಸ್ಟರಿನ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಬ್ಬಿನಾಂಶದ ಮಾತ್ರೆಗಳನ್ನು ಹಾಗೂ 2013-14ನೇ ಸಾಲಿನ ಸಮವಸ್ತ್ರಗಳ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಕ್ಕಳೇ ಈ ದೇಶದ ಸಂಪತ್ತಾಗಿದ್ದು, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದರ ಜತೆಗೆ ಅವರ ಕಲಿಕೆಗೆ ಬೇಕಾದ ಪೂರಕ ಸೇವೆ ಹಾಗೂ ಆರೋಗ್ಯಯುತ ಆಹಾರವನ್ನು ನೀಡುವ ಮೂಲಕ ಮಕ್ಕಳ ಆರೋಗ್ಯದ ಕುರಿತು ಹೆಚ್ಚಿನ ಕಾಳಜಿ ವಹಿಸುವುದು ಅತ್ಯವಶ್ಯಕವಾಗಿದೆ ಎಂದರು.
ಸಂಪನ್ಮೂಲ ವ್ಯಕ್ತಿ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಮಗುವಿಗೆ ಜ್ಞಾನ ಸಂಪಾದಿಸಲು ಪೂರಕವಾದ ಸೌಲಭ್ಯ ಒದಗಿಸಿಕೊಡಬೇಕು. ಹಾಗೂ ಕಲಿಕಾ ವಾತಾವರಣ ನಿರ್ಮಾಣಮಾಡಬೇಕು ಅಂದಾಗ ಮಾತ್ರ ಗುಣಾತ್ಮಕ ಶಿಕ್ಷಣ ಸಿಗುತ್ತದೆ ಎಂದರು.
ಸಂಪನ್ಮೂಲ ವ್ಯಕ್ತಿ ಎ.ವಿ. ಪ್ರಭು ಪ್ರಾಸ್ತಾವಿಕವಾಗಿ ಮಾತನಾಡಿ, ಸಮಾನತೆ, ಸಹಕಾರ, ಹೊಂದಾಣಿಕೆಗೆ ಸಮವಸ್ತ್ರ ಬೇಕು. ಈ ಬಾರಿ ಮಕ್ಕಳಿಗೆ 2 ಜತೆ ಸಮವಸ್ತ್ರ ತಲುಪಿವೆ. ಆರೋಗ್ಯಕರ ಜೀವನಕ್ಕೆ ಮತ್ತು ಸದೃಢತೆಗೆ ವಿವಿಧ ಮಾತ್ರೆಗಳು ಸಹಕಾರಿಯಾಗಿವೆ. ಕಲಿಕೆ ಚಟುವಟಿಕೆಯುತವಾಗಿರಲು ಹಾಗೂ ಆಸಕ್ತಿಯುತವಾಗಲು ಭಾನುಲಿಪಾಠ ಮಕ್ಕಳಿಗೆ ಕೇಳಿಸಬೇಕು ಎಂದು ಹೇಳಿದರು.
ಗದಗ ಡಯಟ್ ಉಪನ್ಯಾಸಕ ಎಂ.ಎಚ್. ಕಂಬಳಿ, ಎಪಿಎಂಸಿ ಸದಸ್ಯ ಜಗದೀಶ ಹಾಲನವರ, ಗ್ರಾಪಂ ಅಧ್ಯಕ್ಷೆ ರೇಣುಕಾ ಪರಸಪ್ಪನವರ, ಕೆ.ಬಿ. ಕೊಣ್ಣೂರ, ಪ್ರಧಾನ ಗುರು ಬಿ.ಕೆ. ಗೌಡರ ಮುಂತಾದವರು ಇದ್ದರು.
ಶಿಕ್ಷಕ ಎಸ್.ಎನ್. ಬದಾಮಿ ಸ್ವಾಗತಿಸಿದರು. ಎಸ್.ಸಿ. ಪೊಲೀಸ್‌ಪಾಟೀಲ ನಿರೂಪಿಸಿದರು. ರಾಜೇಶ್ವರಿ ಯಲ್ಲಪ್ಪಗೌಡರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.