ಕಳಸಾ, ಬಂಡೂರಿಯಿಂದ ಉಪಯೋಗವಿಲ್ಲ: ಶಾಸಕ ಯಾವಗಲ್
ನರಗುಂದ: ಮಲಪ್ರಭಾ ಜಲಾಶಯಕ್ಕೆ ಕಳಸಾ-ಬಂಡೂರಿ ನಾಲಾಗಳಿಂದ ಬರುವ ನೀರು ಈ ಭಾಗದ ರೈತರಿಗೆ ಹೆಚ್ಚು ಉಪಯೋಗವಾಗುವುದಿಲ್ಲವೆಂದು ಶಾಸಕ ಬಿ.ಆರ್. ಯಾವಗಲ್ ಹೇಳಿದರು.
ಅವರು ಭಾನುವಾರ ರೈತ ಹುತಾತ್ಮ ದಿನಾಚರಣೆ ಅಂಗವಾಗಿ ಪಟ್ಟಣದಲ್ಲಿರುವ ಹುತಾತ್ಮ ರೈತರ ವೀರಗಲ್ಲಿಗೆ ಮಾಲಾರ್ಪಣೆ ಮಾಡಿ ಮಾತನಾಡಿದರು. ಈ ಹಿಂದೆ ನಾನು ಶಾಸಕನಾಗಿದ್ದಾಗ ಕಳಸಾ-ಬಂಡೂರಿ ಯೋಜನೆಯಿಂದ ಈ ಭಾಗದ ರೈತರಿಗೆ ಹೆಚ್ಚು ಉಪಯುಕ್ತ ಇಲ್ಲವೆಂದು ಹೇಳಿದ್ದಕ್ಕೆ, ಈ ಭಾಗದ ರೈತರು ನನ್ನನ್ನು ತಪ್ಪಾಗಿ ಅರ್ಥೈಸಿಕೊಂಡು, ಈ ಹಳ್ಳದ ಬಗ್ಗೆ ಹೋರಾಟ ಮಾಡುವ ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸಿದರು. ಆದರೆ, ಮುಂದೆ ಈ ಬಿಜೆಪಿಯವರು ರಕ್ತದಲ್ಲಿ ಪತ್ರ ಬರೆದು ತಾವು ಅಧಿಕಾರಕ್ಕೆ ಬಂದರೆ ಈ ಯೋಜನೆ 6 ತಿಂಗಳಲ್ಲಿ ಪೂರ್ಣಗೊಳಿಸುತ್ತೇವೆಂದು ಹೇಳಿ ಈ ಭಾಗದ ಮುಗ್ದ ರೈತರನ್ನು ದಾರಿ ತಪ್ಪಿಸಿ, ಈ ಯೋಜನೆಗೆ ನೂರಾರು ಕೋಟಿ ಹಣ ಖರ್ಚು ಮಾಡಿದರು. ಸುಮ್ಮನೆ ಎಲ್ಲೋ ಹಳ್ಳಗಳಲ್ಲಿ ತೆಗ್ಗು ತೋಡಿ ನೀರು ತರುತ್ತೇವೆಂದು ಹೇಳಿದರು. ಆದರೆ, ಕಾಮಗಾರಿ ಸಂಪೂರ್ಣವಾಗಲಿಲ್ಲ. ಈಗ ಕೆಲ ರೈತರಿಗೂ ಇದು ತಿಳಿದಿದ್ದು, ಮಹಾದಾಯಿ ಯೋಜನೆಯಿಂದ ಮಾತ್ರ ಸಂಪೂರ್ಣವಾಗಿ ಮಲಪ್ರಭೆಗೆ ನೀರು ಬರಲು ಸಾಧ್ಯವೆನ್ನುವುದು ಅರ್ಥವಾಗಿದೆ. ನಾನು ಕೂಡಾ ಮಹಾದಾಯಿ ಕಲ್ಯಾಣ ಸಮಿತಿ ಎಂದು ರಚನೆ ಮಾಡಿಕೊಂಡು, ಈ ಬಗ್ಗೆ ಕೆಲವೇ ದಿನಗಳಲ್ಲಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ, ಈ ಬಗ್ಗೆ ಅಂತಿಮ ನಿರ್ಣಯ ಕೈಗೊಂಡು, ಈ ಯೋಜನೆ ಪ್ರಾರಂಭ ಮಾಡಲು ಮುಂದಾಗುತ್ತೇನೆ. ಇದ್ದಕ್ಕೆ ತಮ್ಮೆಲ್ಲರ ಬೆಂಬಲ ಸದಾ ಇರಲಿ ಎಂದರು.
ಕಾಂಗ್ರೆಸ್ ಮುಖಂಡರಾದ ಎಸ್.ಡಿ. ಕೊಳ್ಳಿ, ದ್ಯಾಮಣ್ಣ ಸವದತ್ತಿ, ದೇಸಾಯಿಗೌಡ ಪಾಟೀಲ, ಎಂ.ಎಂ. ಮುಳ್ಳೂರ, ಬಿ.ಸಿ. ಬ್ಯಾಳಿ, ವಿಠ್ಠಲ ಶಿಂಧೆ, ಎಫ್.ವೈ. ದೊಡಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಚಂಬಣ್ಣ ವಾಳದ, ರಾಜು ಕಲಾಲ, ದ್ಯಾಮಣ್ಣ ಕಾಡಪ್ಪನವರು, ಎಸ್.ಆರ್. ಪಾಟೀಲ, ಸಿ.ಬಿ. ಪಾಟೀಲ, ಶಂಕರ ಸುರೇಬಾನ, ಡಾ. ವೀರನಗೌಡ, ಗುರು ದೊಡಮನಿ, ಹೇಮಂತ ಪಾಂಚಳ, ನಿಂಗಪ್ಪ ಮೊರಬದ ಮುಂತಾದವರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

