ಗದಗ

ಕಾಶೀ ಯಾತ್ರಿಗಳಿಗೆ ವಿಶೇಷ ರೇಲ್ವೆ ವ್ಯವಸ್ಥೆ

Published On :

ಗದಗ: ಗದಗ ಜಿಲ್ಲೆಯಿಂದ ಪವಿತ್ರ ಯಾತ್ರಾ ಸ್ಥಳ ಕಾಶೀಗೆ ಪ್ರತಿವರ್ಷ ಸಾವಿರಾರು ಸಂಖ್ಯೆಯಲ್ಲಿ ಜನರು ತೆರಳುತ್ತಿದ್ದು, ಇಂತಹ ಯಾತ್ರಿಗಳಿಗೆ ಅನಕೂಲ ಕಲ್ಪಿಸಲು ವಿಶೇಷ ರೇಲ್ವೆ ವ್ಯವಸ್ಥೆ ಕಲ್ಪಿಸಲು ಸಂಬಂಧಪಟ್ಟ ರೇಲ್ವೆ ಸಚಿವರೊಂದಿಗೆ ಚರ್ಚಿಸುವುದಾಗಿ ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಅವರು ಭಾನುವಾರ ಬೆಟಗೇರಿಯ ಶರಣ ಬಸವೇಶ್ವರ ನಗರದಲ್ಲಿ ಜ. ರೇಣುಕಾಚಾರ್ಯ ಸಮುದಾಯ ಭವನದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಕಾಶೀ ಒಂದು ಪವಿತ್ರ ಸ್ಥಳವಾಗಿದ್ದು, ಯುವಕರಿಂದ ಹಿಡಿದು ವೃದ್ಧರವರೆಗೂ ಈ ಯಾತ್ರೆ ಕೈಗೊಳ್ಳುತ್ತಿದ್ದು, ಇವರಿಗೆ ಸರಿಯಾದ ಸಾರಿಗೆ ವ್ಯವಸ್ಥೆಯಿಲ್ಲದೇ ತೊಂದರೆಯಾಗುತ್ತಿರುವುದು ಗಮನಕ್ಕೆ ಬಂದಿದೆ. ಈ ಕುರಿತು ರೇಲ್ವೆ ಖಾತೆ ಸಚಿವರೊಂದಿಗೆ ಚರ್ಚಿಸಿ, ಜಿಲ್ಲೆಯಿಂದಲೇ ಪ್ರತ್ಯೇಕ ರೇಲ್ವೆ  ಬಿಡುವಂತೆ ಕೋರಲಾಗುವುದು. ಅಲ್ಲದೇ ಸಮುದಾಯ ಭವನಕ್ಕೆ ಹೆಚ್ಚಿನ ಅನುದಾನ ನೀಡಲಾಗುವುದು ಎಂದರು.
ಸಾನ್ನಿಧ್ಯವಹಿಸಿದ್ದ ಕಾಶೀ ಶ್ರೀಗಳು ಆಶೀರ್ವಚನ ನೀಡಿದರು. ಪ್ರಾರಂಭದಲ್ಲಿ ಸಂಸ್ಕೃತ ವೇದ ಪಾಠ ಶಾಲೆಯ ವಟುಗಳಿಂದ ವೇದಘೋಷ ನಡೆಯಿತು. ಬಸಣ್ಣ ಮಲ್ಲಾಡದ, ವಿರೇಶ ಕೂಗು, ಮಂಜುಳಾ ಕಾಡಪ್ಪನವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಕಾಶೀ ಕ್ಷೇತ್ರಕ್ಕೆ ಹೋಗಿ ಬಂದ 104 ಭಕ್ತರಿಗೆ ಕಾಶೀ ಶ್ರೀಗಳು ಆಶೀರ್ವದಿಸಿದರು. ಈ ಸಂದರ್ಭದಲ್ಲಿ ಹುಬ್ಬಳ್ಳಿಯ ರಾಜಶೇಖರ ಶಿವಾಚಾರ್ಯರು, ಡಾ. ಬಸವರಾಜ ಹಡಗಲಿ, ಪಂಚಾಚಾರ್ಯ ಸೇವಾ ಸಂಘದ ಅಧ್ಯಕ್ಷ ಮಂಜುನಾಥ ಬೇಲೇರಿ, ಸಮುದಾಯ ಭವನದ ಕಾರ್ಯಾಧ್ಯಕ್ಷ ಬಸವರಾಜ ಶಾಬಾದಿಮಠ, ಪಕ್ಕಣ್ಣ ಬೇಲೇರಿ, ಶ್ರೀನಿವಾಸ ಕರಿ, ನಾಗಲಿಂಗ ಐಲಿ, ಅನಿಲ ಅಬ್ಬಿಗೇರಿ, ಆರ್.ಎನ್. ತುಕ್ಕಾ, ಚಂದ್ರು ಬಾಳೆಹಳ್ಳಿಮಠ, ಸುರೇಶ ಅಬ್ಬಿಗೇರಿ, ವೀರಣ್ಣ ಧನ್ನೂರಹಿರೇಮಠ, ಬಾಬಣ್ಣ ಶಾಬಾದಿಮಠ, ವಿ.ಕೆ. ಗುರುಮಠ, ಚಂದ್ರು ಅಬ್ಬಿಗೇರಿ, ಗುರುಸಿದ್ದಯ್ಯ ಹಿರೇಮಠ, ಮಹೇಶ ಬೇಲೇರಿ, ಶರಣು ಶಿಗ್ಲಿ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.