ಕ್ರೀಡೆಯಿಂದ ಮೈ, ಮನ ಸದೃಢ: ಬಳಿಗೇರಮಠ
ಕನ್ನಡಪ್ರಭ ವಾರ್ತೆ, ಗದಗ, ಜು. 28
ವಿದ್ಯಾರ್ಥಿಗಳು ತಮ್ಮ ದೈನಂದಿನ ಅಭ್ಯಾಸದ ಜತೆಗೆ ಕ್ರೀಡೆಯಲ್ಲಿಯೂ ಹೆಚ್ಚು ಭಾಗವಹಿಸುವುದರಿಂದ ಮೈ, ಮನಸ್ಸು ಸದೃಢವಾಗುವವು ಎಂದು ಗ್ರಾಪಂ ಮಾಜಿ ಅಧ್ಯಕ್ಷ ಪಾಲಾಕ್ಷಯ್ಯ ಬಳಿಗೇರಮಠ ಹೇಳಿದರು.
ಅವರು ಈಚೆಗೆ ಸಮೀಪದ ಕೋಟುಮಚಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಸರ್ವ ಶಿಕ್ಷಣ ಅಭಿಯಾನ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಗದಗ, ಗ್ರಾಮೀಣ ವಲಯ ಗದಗ ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಾರಾಯಣಪುರ ಇವುಗಳ ಆಶ್ರಯದಲ್ಲಿ ನಡೆದ ಗ್ರುಪ್ ಮಟ್ಟದ ಕ್ರೀಡಾಕೂಟದಲ್ಲಿ ಮಾತನಾಡಿದರು.
ಶಾಲೆಗಳ ಆವರಣದಲ್ಲಿ ಮಕ್ಕಳು ಆಟಗಳನ್ನು ಆಡಲು ವಿಶಾಲವಾದ ಜಾಗೆ ಇರುವುದು ಅವಶ್ಯವಾಗಿದೆ. ಮಕ್ಕಳು ಭಾಗವಹಿಸುವ ಯಾವುದೇ ಕ್ರೀಡೆಯಲ್ಲಿನ ಸೋಲು ಗೆಲುವನ್ನು ಕ್ರೀಡಾ ಸ್ಫೂರ್ತಿಯಿಂದ ತೆಗೆದುಕೊಳ್ಳಬೇಕು. ದೈಹಿಕ ಕಸರತ್ತಿನ ಕ್ರೀಡೆಗಳಾದ ಕಬಡ್ಡಿ, ವಾಲಿಬಾಲ್, ಖೋಖೋ ಮುಂತಾದ ಕ್ರೀಡೆಗಳಲ್ಲಿ ಮಕ್ಕಳು ಹೆಚ್ಚು ಭಾಗವಹಿಸುವುದರಿಂದ ದೈಹಿಕ ಶ್ರಮದ ಜತೆಗೆ ಮಾನಸಿಕ ನೆಮ್ಮದಿ ಸಿಗುವುದು ಎಂದರು. ಗ್ರಾಪಂ ಅಧ್ಯಕ್ಷೆ ಸುಮಂಗಲಾ ಜಗ್ಗಲ ಕ್ರೀಡಾರೋಹಣ ನೆರವೇರಿಸಿದರು. ಅಧ್ಯಕ್ಷತೆಯನ್ನು ಎಸ್ಡಿಎಂಸಿ ಅಧ್ಯಕ್ಷ ಮಾಹಾಂತಪ್ಪ ಮಡಿವಾಳರ ವಹಿಸಿದ್ದರು. ಗ್ರಾಪಂ ಉಪಾಧ್ಯಕ್ಷೆ ಶಾಂತಮ್ಮ ಹರ್ಲಾಪುರ, ಸದಸ್ಯ ದೇವಪ್ಪ ಬಡಿಗೇರ, ಶಿವಪುತ್ರವ್ವ ಕಮಾಣಿ, ಕುಮಾರಸ್ವಾಮಿ, ರಾಜೂಗೌಡ ಗೌಡರ, ಈಶ್ವರ ಸೂರಪ್ಪಗೌಡರ, ಮುಖ್ಯೋಪಾಧ್ಯಾಯಿನಿ ಗುಜ್ಜಲ, ಅಣ್ಣಿಗೇರಿ, ಪಾಟೀಲ, ಮಕಾನದಾರ, ದೈಹಿಕ ಶಿಕ್ಷಕ ಚನ್ನಪ್ಪಗೌಡ ಮುಂತಾದವರು ಉಪಸ್ಥಿತರಿದ್ದರು. ಕ್ಲಸ್ಟರ್ ಸಂಯೋಜಕ ಎ.ವೈ. ಕಮ್ಮಾರ ಸ್ವಾಗತಿಸಿದರು. ಎಸ್.ಎಫ್. ಬಡಿಗೇರ ನಿರೂಪಿಸಿದರು. ಆರ್.ಎಸ್. ಮಠದ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

