ಹೊಳೆಆಲೂರ: ಜಿ. ರಾಮಪ್ಪಗೆ ಸನ್ಮಾನ, ಬೀಳ್ಕೊಡುಗೆ
ಹೊಳೆಆಲೂರ: ಕಳೆದ ಮೂರೂವರೆ ವರ್ಷಗಳಿಂದ ಇಲ್ಲಿನ ರೋಣ ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಮುಖ್ಯ ಕಚೇರಿ ಹೊಳೆಆಲೂರದಲ್ಲಿ ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಜಿ. ರಾಮಪ್ಪ ಅವರಿಗೆ ಕೃಷಿ ಉತ್ಪನ್ನ ಮಾರುಕಟ್ಟೆಯ ವರ್ತಕರಿಂದ ಸನ್ಮಾನಿಸಿ, ಬೀಳ್ಕೊಡುವ ಕಾರ್ಯಕ್ರಮ ಈಚೆಗೆ ಜರುಗಿತು. ಕೃಷಿ ಉತ್ಪನ್ನ ಕಚೇರಿಯಲ್ಲಿ ನಡೆದ ಸಮಾರಂಭದ ಅಧ್ಯಕ್ಷತೆಯನ್ನು ವರ್ತಕರ ಸಂಘದ ಅಧ್ಯಕ್ಷ ಸಿ.ಬಿ. ಪಾಟೀಲ ವಹಿಸಿದ್ದರು. ಜಿ. ರಾಮಪ್ಪ ಅವರನ್ನು ಸನ್ಮಾನಿಸಿದ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಶಿವಣ್ಣ ಯಾವಗಲ್ಲ ಮಾತನಾಡಿ, ಜಿ. ರಾಮಪ್ಪ ಅವರು ತಮ್ಮ ಸೇವಾವಧಿಯಲ್ಲಿ ಕೈಗೊಂಡ ಕಾರ್ಯಗಳ ಕುರಿತು ಮಾತನಾಡಿದರು. ವಾಣಿಜ್ಯೋದ್ಯಮ ಸಂಘದ ಮಾಜಿ ಅಧ್ಯಕ್ಷ ಶೇಖಪ್ಪ ತೋಟದ, ಗುತ್ತಿಗೆದಾರ ಕೆ.ಸಿ. ಹಿರೇಮಠ ಪಾಟೀಲ ಮಾತನಾಡಿ, ರಾಮಪ್ಪ ಅವರ ಸೇವಾವಧಿಯಲ್ಲಿ ವರ್ತಕರ ಜತೆ ಉತ್ತಮ ಬಾಂಧವ್ಯ, ವ್ಯಾಪಾರಸ್ಥರ ಬಗ್ಗೆ ಕಾಳಜಿ ಉಳ್ಳವರಾಗಿದ್ದರು. ಅವರು ನಿವೃತ್ತಿ ನಂತರದ ಬದುಕು ಸುಖವಾಗಿ ಕಳೆಯುವಂತಾಗಲಿ ಎಂದು ಹಾರೈಸಿದರು. ರಾಮಪ್ಪ ಅವರು ವರ್ತಕರ ಮತ್ತು ತಮ್ಮ ಕಚೇರಿಯವರ ಸಹಕಾರ ಸ್ಮರಿಸಿದರು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ನೂತನ ಕಾರ್ಯದರ್ಶಿಗಳಾಗಿ ಆಗಮಿಸಿದ ಎಂ.ಎ. ಲಕ್ಕುಂಡಿ, ವಿ.ವಿ. ಯಾವಗಲ್ ಎಪಿಎಂಸಿ ಸಿಬ್ಬಂದಿ ಎಸ್.ಎಂ. ಗುಳೇದ, ಜಿ.ಟಿ. ಕಾಕನೂರ, ಎಸ್.ಎಲ್. ಬಾಗಲಕೋಟ ಮುಂತಾದವರು ಉಪಸ್ಥಿತರಿದ್ದರು. ಪುಷ್ಪ ಹಿರೇಮಠ ಸ್ವಾಗತಿಸಿ ನಿರೂಪಿಸಿದರು. ಆರ್.ಬಿ. ಪರಸನಗೌಡ್ರ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

