ಗದಗ

ಮಗುವಿಗೊಂದು ಮರ, ಶಾಲೆಗೊಂದು ವನ: ಚಿಂಚೆವಾಡಿ

Published On :

ಗದಗ: ಪ್ರತಿಯೊಂದು ಶಾಲೆಯಲ್ಲಿ ಶಿಕ್ಷಕ ಬಳಗ ಆಸಕ್ತಿವಹಿಸಿ ಮಗುವಿಗೊಂದು ಮರ ಬೆಳೆಸುವಂತಹ ಪರಿಸರ ಪ್ರಜ್ಞೆ ಮೂಡಿಸಿದಲ್ಲಿ ಶಾಲೆಯು ಒಂದು ಉತ್ತಮವಾದ ವನವಾಗುವುದರಲ್ಲಿ ಸಂದೇಹವಿಲ್ಲ. ಆ ದಿಸೆಯಲ್ಲಿ ಸಮುದಾಯ ಹಾಗೂ ಶಿಕ್ಷಕರು ಪ್ರಯತ್ನಿಸಲು ಕ್ಷೇತ್ರ ಸಂಪನ್ಮೂಲ ಶಹರ ಘಟಕ ಅಧಿಕಾರಿ ಎಂ.ಪಿ. ಚಿಂಚೆವಾಡಿ ಹೇಳಿದರು.
ಅವರು ಬುಧವಾರ ಸರ್ಕಾರಿ ಮಾದರಿಯ ಕನ್ನಡ ಗಂಡು ಮಕ್ಕಳ ಶಾಲೆ ನಂ. 10 ಗದಗ ಸೆಂಟ್ರಲ್ ಸ್ಕೂಲಿನಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಶಾಲಾ ಪರಿಸರ ಮಲೆನಾಡಿನ ಸೊಬಗನ್ನು ಬಿಂಬಿಸುವಂತಹದ್ದಾಗಿದ್ದು ಶ್ಲಾಘನೀಯ. ವಿದ್ಯಾರ್ಥಿಗಳು ಪ್ರತಿಯೊಬ್ಬರೂ ಒಂದೊಂದು ಸಸಿಯನ್ನು ನೆಡಲು ಮುಂದಾಗಬೇಕು. ಅಷ್ಟೇ ಅಲ್ಲದೇ ನಮ್ಮ ಮನೆಯ ಅಕ್ಕಪಕ್ಕದಲ್ಲಿನ ಪ್ರದೇಶದಲ್ಲಿ ಸಸಿಗಳನ್ನು ನೆಡುವ ಮೂಲಕ ಅವುಗಳನ್ನು ಪೋಷಣೆ ಮಾಡಿ ಬೆಳೆಸಬೇಕು. ನಮ್ಮ ಸುತ್ತಮುತ್ತಲಿನ ಜನರಿಗೆ ಪರಿಸರದ ಕುರಿತು ಜಾಗೃತಿ ನೀಡುವ ಮೂಲಕ ಅವರಲ್ಲಿಯೂ ಪರಿಸರ ಮೇಲೆ ಕಾಳಜಿಯನ್ನುಂಟು ಮಾಡುವ ವಾತಾವರಣ ನಿರ್ಮಿಸುವ ಮೂಲಕ ಪರಿಸರ ಸಂರಕ್ಷಣೆಗೆ ಪಾತ್ರರಾಗಬೇಕು ಎಂದರು.
ಶಾಲಾ ಮುಖ್ಯೋಪಾಧ್ಯಾಯ ಎಸ್.ಎನ್. ಬಳ್ಳಾರಿ ಶಾಲಾ ಪರಿಸರ ಕುರಿತು ಮಾತನಾಡಿ, ಶಿಕ್ಷಕರ ಹಾಗೂ ಮಕ್ಕಳ ಸಹಕಾರ, ಶ್ರಮದೊಂದಿಗೆ ಶಾಲೆಯಲ್ಲಿ ಇಂತಹ ಉತ್ತಮ ಪರಿಸರ ನಿರ್ಮಾಣವಾಗಿದೆ. ಅದರಂತೆ ವಿದ್ಯಾರ್ಥಿಗಳು ಸಮುದಾಯದಲ್ಲಿ ಉತ್ತಮ ಪರಿಸರ ನಿರ್ಮಾಣವಾಗುವಂತೆ ಹಿರಿಯರೊಂದಿಗೆ ಪ್ರಯತ್ನಿಸಲು ಕರೆ ನೀಡಿದರು.
ಅತಿಥಿಗಳಾಗಿ ಆಗಮಿಸಿದ್ದ ಅಶೋಕ ಹಾದಿ ಹಾಗೂ ಎಸ್‌ಡಿಎಂಸಿ ಅಧ್ಯಕ್ಷ ಉಮೇಶ ಬಾರಕೇರ ಮಾತನಾಡಿದರು. ಎಸ್.ವಿ. ಕುರಹಟ್ಟಿ ಅಧ್ಯಕ್ಷತೆ ವಹಿಸಿದ್ದರು. ಎಸ್.ಎ. ಚಂದಪ್ಪನವರ, ಎಸ್.ಎಸ್. ಹಲಕುರ್ಕಿ, ಜೆ.ಆರ್. ಪಾಸ್ತೆ ಸೇರಿದಂತೆ ಶಾಲೆಯ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು. ಎನ್.ಸಿ. ಹದ್ಲಿ ಸ್ವಾಗತಿಸಿದರು. ಎಸ್.ಸಿ. ಹಾನಗಲ್ಲ ನಿರೂಪಿಸಿದರು. ಜೆ.ಜೆ. ಬಿಸರಳ್ಳಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.