ಚುನಾವಣೆ ಸಿಬ್ಬಂದಿಗೆ ತರಬೇತಿ ಶಿಬಿರ
ರೋಣ: ಗಜೇಂದ್ರಗಡ, ರೋಣ ಪುರಸಭೆ ಮತ್ತು ನರೆಗಲ್ಲ ಪಟ್ಟಣ ಪಂಚಾಯತಿ ಸೇರಿದಂತೆ ಸ್ಥಳೀಯ ಸಂಸ್ಥೆಗಳಿಗೆ ಮಾ. 7ರಂದು ನಡೆಯುವ ಮತದಾನಕ್ಕೆ ನಿಯೋಜನೆಗೊಂಡ ಸಿಬ್ಬಂದಿಗೆ ಶುಕ್ರವಾರ ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಒಂದು ದಿನದ ತರಬೇತಿ ಶಿಬಿರ ಜರುಗಿತು.
ಚುಣಾವಣೆಗೆ ನಿಯೋಜನೆಗೊಂಡ 300ಕ್ಕೂ ಹೆಚ್ಚು ಸಿಬ್ಬಂದಿಗೆ ಹಿರಿಯ ಅಧಿಕಾರಿಗಳಿಂದ ಚುಣಾವಣೆ ನಿಯಮ, ಪಾರದರ್ಶಕತೆಯ ಮಹತ್ವ ತಿಳಿಸುವ ಜತೆಗೆ ಕಾರ್ಯವೈಖರಿಯನ್ನು ವಿವರಿಸಲಾಯಿತು. ನೋಡಲ್ ಅಧಿಕಾರಿ ರಮೇಶ ದೇಶಾಯಿ ಮಾತನಾಡಿ, ಸಿಬ್ಬಂದಿಗೆ ಇಲೆಕ್ಟ್ರಾನಿಕ್ ಮತಯಂತ್ರಗಳ ಬಗ್ಗೆ ಸಂಪೂರ್ಣ ಮಾಹಿತಿ ಒದಗಿಸಿದರು. ಸಭೆಯಲ್ಲಿ ತಹಸೀಲ್ದಾರ ಎಸ್.ಆರ್. ಕಡಿವಾಲ, ವಿಶೇಷ ತಹಸೀಲ್ದಾರ ಎನ್.ಎಸ್. ಕೂಡಲ್, ಸಾಮಾಜಿಕ ಭದ್ರತಾ ಯೋಜನೆಯ ವಿಶೇಷ ತಹಸೀಲ್ದಾರ ಎಂ.ಡಿ. ಸೋಮಕ್ಕನವರ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಪ್ರಶಾಂತ ವರದಪ್ಪನವರ, ಸಹಾಯಕ ಕೃಷಿ ನಿರ್ದೆಶಕ ಎಸ್.ಸಿ. ಸೂಡಿಶೆಟ್ಟರ, ಜಿ.ಎಸ್. ಶಿರಸಿ, ಪಿ.ಎಚ್. ಕಡಿವಾಲ ಉಪಸ್ಥಿತರಿದ್ದರು.
ಅಕ್ರಮ ಸಾರಾಯಿ ವಶ
ಶಿರಹಟ್ಟಿ: ತಾಲೂಕಿನ ಮಾಗಡಿ ಗ್ರಾಮದಿಂದ ಶಿರಹಟ್ಟಿ ಮಾರ್ಗವಾಗಿ ಸಾಗಿಸುತ್ತಿದ್ದ ರು. 34 ಸಾವಿರ ಮೌಲ್ಯದ 18 ಬಾಕ್ಸ್ ಅಕ್ರಮ ಸಾರಾಯಿಯನ್ನು ಖಾನಾಪುರ ಗ್ರಾಮದ ಪೊಲೀಸ್ ಚೆಕ್ಪೋಸ್ಟ್ ಬಳಿ ಪತ್ತೆ ಹಚ್ಚಿ ವಶಪಡಿಸಿಕೊಳ್ಳಲಾಗಿದೆ. ಚಾಲಕ ಸುರೇಶ ಮಲ್ಲಿವಾಡ ಎಂಬಾತನನ್ನು ವಾಹನ ಸಮೇತ ವಶಕ್ಕೆ ತಗೆದುಕೊಳ್ಳಲಾಗಿದ್ದು, ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪಿಎಸ್ಐ ವಿಕಾಸ ಲಮಾಣಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

