ಗದಗ

ಬಿಎಸ್‌ಆರ್ ಬೆಂಬಲಿಸಿ: ಶ್ರೀರಾಮುಲು

Published On :

ಗದಗ:  ಸ್ಥಳೀಯ ಸಂಸ್ಥೆಗಳಲ್ಲಿ ಉತ್ತಮ ಆಡಳಿತಕ್ಕಾಗಿ ಬಿಎಸ್‌ಆರ್ ಕಾಂಗ್ರೆಸ್ ಬೆಂಬಲಿಸಿ, ನೆಮ್ಮದಿ ಜೀವನ ಕಳೆಯುವಂತಹ ಎಲ್ಲ ಮೂಲ ಸೌಲಭ್ಯಗಳನ್ನು ಕಲ್ಪಿಸಲು ಪಕ್ಷ ವೇದಿಕೆಯಾಗಲಿದೆ ಎಂದು ಬಿಎಸ್‌ಆರ್ ಸಂಸ್ಥಾಪಕ ಬಿ.ಶ್ರೀರಾಮುಲು ಹೇಳಿದರು.
ಅವರು ಶುಕ್ರವಾರ ರಾತ್ರಿ ನಗರದ ಕಳಸಾಪುರ ರಸ್ತೆಯ 35ನೇ ವಾರ್ಡಿನಲ್ಲಿ ಚುನಾವಣಾ ಪ್ರಚಾರ ಸಭೆ, ಯುವಕರ ಬೈಕ್ ರ್ಯಾಲಿ ಮತ್ತು ರೋಡ್ ಶೋಗೆ ಚಾಲನೆ ನೀಡಿ ಮಾತನಾಡಿದರು.  ರಾಜ್ಯದ ಕೆಲವರು ನನ್ನ ಪಕ್ಷ ಹಾಗೂ ನನ್ನ ಅಸ್ತಿತ್ವದ ಬಗ್ಗೆ ಮಾತಾಡುತ್ತಿದ್ದು, ಈ ಬಾರಿ ಮತದಾರ ನನ್ನ ಪಕ್ಷವನ್ನು ಬೆಂಬಲಿಸುವ ಮೂಲಕ ಅವರೆಲ್ಲರಿಗೂ ಉತ್ತರ ನೀಡಬೇಕು ಎಂದು ಮತದಾರರಲ್ಲಿ ವಿನಂತಿಸಿದ ಅವರು, ಜನತೆ ಈಗಾಗಲೇ ಎಲ್ಲ ರಾಷ್ಟ್ರೀಯ ಪಕ್ಷಗಳಿಗೆ ಅಧಿಕಾರ ನೀಡಿ ಅವರ ಆಡಳಿತ ನೋಡಿದ್ದು, ಒಮ್ಮೆ ನಮ್ಮ ಪ್ರಾದೇಶಿಕ ಪಕ್ಷಕ್ಕೂ ಅಧಿಕಾರ ನೀಡಿ, ಆಮೇಲೆ ರಾಜ್ಯದ ಅಭಿವೃದ್ಧಿಯನ್ನು ನೀವೇ ಕಾಣುತ್ತೀರಿ ಎಂದರು. ತೆರೆದ ವಾಹನದಲ್ಲಿ ಪ್ರಚಾರ ಭಾಷಣ ಕೈಗೊಂಡ ಶ್ರೀರಾಮುಲು ಅವರು, ನಗರದ ಕಳಸಾಪುರ ರಸ್ತೆಯ ಬಾಪುಜಿ ನಗರದಿಂದ ಪ್ರಾರಂಭವಾದ ಚುನಾವಣಾ ಪ್ರಚಾರಾರ್ಥ ರ್ಯಾಲಿಯೂ ನಂದೀಶ್ವರ ನಗರ, ಸಿದ್ದರಾಮೇಶ್ವರ ನಗರ, ಸಿದ್ದಲಿಂಗ ನಗರ, ಚಿದಾನಂದ ಮಠ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು. ಬಿಎಸ್‌ಆರ್ ಕಾಂಗ್ರೆಸ್ ಕಾರ್ಯಕರ್ತರು ಬೈಕ್ ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು.
ಗದಗ ವಿಧಾನಸಭಾ ಕ್ಷೇತ್ರದ ನಿಯೋಜಿತ ಅಭ್ಯರ್ಥಿ ಅನಿಲ ಮೆಣಸಿನಕಾಯಿ, ಇಸ್ಮಾಯಿಲ್ ಮುಲ್ಲಾ, ಎಸ್.ಎಚ್. ಶಿವನಗೌಡರ, ವೆಂಕಟೇಶ ದಾಸರ, ಬಸವಣ್ಣೆಯ್ಯ ಹಿರೇಮಠ, ಸತೀಶ ಮುದಗಲ್ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.