ವರ್ಗ ಬಹಿಷ್ಕರಿಸಿ ವಿದ್ಯಾರ್ಥಿಗಳ ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ರೋಣ, ಮಾ. 6
ಕರ್ನಾಟಕ ವಿಶ್ವವಿದ್ಯಾಲಯವು ಪದವಿ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕವನ್ನು ಪದೇ ಪದೇ ಹೆಚ್ಚಿಸುತ್ತಿದೆ. ಪರೀಕ್ಷಾ ಶುಲ್ಕದ ನೆಪದಲ್ಲಿ ಹಳೆ ವಿದ್ಯಾರ್ಥಿಗಳ ನಿರ್ವಹಣೆ ಶುಲ್ಕ ಎಂದು ರು. 500 ಹೆಚ್ಚುವರಿಯಾಗಿ ವಸೂಲಿ ಮಾಡುತ್ತಿದೆ. ಇದರಿಂದ ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳಿಗೆ ತೀವ್ರ ಹೊರೆಯಾಗುತ್ತಿದ್ದು ಕೂಡಲೇ ಹೆಚ್ಚುವರಿ ಶುಲ್ಕ ಕಡಿಮೆಗೊಳಿಸಬೇಕೆಂದು ಆಗ್ರಹಿಸಿ ಬುಧವಾರ ತಾಲೂಕು ಎಬಿವಿಪಿ ಸಂಘಟನೆಯ ನೇತೃತ್ವದಲ್ಲಿ ಬಸನಗೌಡ ಗಿರಡ್ಡಿ ಸರ್ಕಾರಿ ಪದವಿ ಕಾಲೇಜಿನ ವಿದ್ಯಾರ್ಥಿಗಳು ವರ್ಗಗಳನ್ನು ಬಹಿಷ್ಕರಿಸಿ ಪ್ರತಿಭಟಿಸಿದರು.
ಈ ಸಂದರ್ಭದಲ್ಲಿ ಎಬಿವಿಪಿ ಕಾಲೇಜ್ ಕಮಿಟಿ ಅಧ್ಯಕ್ಷ ಜಗದೀಶ ಕೋಟನ್ನವರ ಮಾತನಾಡಿ, ಕಳೆದ ಸೆಮಿಸ್ಟರ್ನಲ್ಲಿ 100 ಪರೀಕ್ಷಾ ಶುಲ್ಕ ತುಂಬಲಾಗಿದೆ. ಈ ಸಾರಿ ರು. 250 ಹೆಚ್ಚುವರಿ ಮಾಡಿದ್ದಾರೆ. ಕವಿವಿ ಪ್ರತಿ ವರ್ಷವೂ ಶುಲ್ಕ ಹೆಚ್ಚು ಮಾಡುತ್ತಿದೆ. ಅಲ್ಲದೇ ಅಲುಮ್ನಿಯಾಗಿ (ಹಳೆ ವಿದ್ಯಾರ್ಥಿಗಳ ನಿರ್ಹಹಣಾ ನಿಧಿ) ವಾರ್ಷಿಕ ಒಬ್ಬ ವಿದ್ಯಾರ್ಥಿಯಿಂದ ರು. 500 ಪಡೆಯಲು ತೀರ್ಮಾನಿಸಿತ್ತು. ಆದರೆ ವಿದ್ಯಾರ್ಥಿ ಸಂಘಟನೆಗಳಿಂದ ತೀವ್ರ ವಿರೋಧ ವಕ್ಯವಾದ ಹಿನ್ನೆಲೆಯಲ್ಲಿ ಕವಿವಿ ಅಲುಮ್ನಿ ಶುಲ್ಕವನ್ನು ರದ್ಧತಿ ಮಾಡಿದೆ. ಈ ಕುರಿತು ಪ್ರಾಚಾರ್ಯರನ್ನು ಕೇಳಿದರೆ ನಮಗೆ ಕವಿವಿಯಿಂದ ಯಾವುದೇ ರೀತಿಯ ಲಿಖಿತ ಆದೇಶ ಬಂದಿಲ್ಲ ಎನ್ನುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
ಎಬಿವಿಪಿ ತಾಲೂಕು ಘಟಕದ ಪ್ರಮುಖ ಅನಿಲ ನವಲಗುಂದ ಮಾತನಾಡಿ, ತಾಲೂಕಿನಲ್ಲಿರುವ ಕೃಷಿಕ ಕುಟುಂಬಗಳ ಬಡ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಶುಲ್ಕ ತುಂಬಲಾಗುತ್ತಿಲ್ಲ. ಹಾಗೂ ಅಲುಮ್ನಿ ಶುಲ್ಕ ರದ್ದತಿಗೆ ಕವಿವಿ ಕ್ರಮ ಕೈಗೊಂಡಿದ್ದರೂ ಈ ಕಾಲೇಜಿನಲ್ಲಿ ವಸೂಲಿ ಮಾಡುತ್ತಿದ್ದಾರೆ. ಈ ಕುರಿತು ಪ್ರಾಚಾರ್ಯ ಡಾ. ಎಂ.ವೈ. ಜಟ್ಟೆನ್ನವರ ಸಮಜಾಯಿಷಿ ಹೇಳಿ ಕಳುಹಿಸುತ್ತಿದ್ದಾರೆಂದು ಆರೋಪಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ, ಪ್ರಾ. ಡಾ. ಎಂ.ವೈ. ಜಟ್ಟೆನ್ನವರ, ಕವಿವಿ ಆದೇಶದಂತೆ ರು. 250 ಪರೀಕ್ಷಾ ಶುಲ್ಕ ಪಡೆಯಲಾಗುತ್ತಿದೆ. ಹಳೆಯ ವಿದ್ಯಾರ್ಥಿಗಳ ನಿರ್ವಹಣಾ ಶುಲ್ಕ ರದ್ಧತಿಯಾದ ಕುರಿತು ನಮಗೆ ಕವಿವಿಯಿಂದ ಯಾವುದೇ ಅಧಿಕೃತ ಲಿಖಿತ ಆದೇಶ ಬಂದಿಲ್ಲ. ಮಾ. 8 ಮಧ್ಯಾಹ್ನ 2 ರೊಳಗೆ ಪರೀಕ್ಷಾ ಶುಲ್ಕ ತುಂಬಬೇಕು ಎಂದು ಹೇಳಿದರು.
ಪ್ರತಿಭಟನೆಯಲ್ಲಿ ವಿದ್ಯಾರ್ಥಿ ಸಂಘಟನೆಯ ಕಾರ್ಯದರ್ಶಿ ವೈ.ವಿ. ಗೋವಿಂದಗೌಡ್ರ, ರಂಗನಾಥ ಹೊಸೂರ, ರಮೇಶ ಕುಂಟೋಜಿ, ಬಸವರಾಜ ಪರಸಣ್ಣವರ, ಅನೀಲ ಅವ್ವನ್ನವರ, ವೀರೇಶ ಗುಡಿಮನಿ, ಬಸು ತೆಗ್ಗಿನಮನಿ, ಶ್ರೀಕಾಂತ ಗುರಿಕಾರ, ಪಡಿಯಪ್ಪ ಉಸಲಕೊಪ್ಪ, ಪುಷ್ಟಾ ಕೊಳ್ಳಿ, ರೂಪಾ ಪೂಜಾರ, ವೀಣಾ ಜೊಟ್ಟಲದ, ವಿಜಯಲಕ್ಷ್ಮೀ ಜಂಗಮಠ, ರವಿ ಬಡಿಗೇರ, ಚಂದ್ರು ಭಜಂತ್ರಿ, ರಂಗನಾಥ ಹೊಸೂರ, ಅಕ್ಕಮಹಾದೇವಿ ಕಳಸಣ್ಣವರ, ರಶ್ಮಿ ಗದಗಿನ, ಶಿಲ್ಪಾ ಗದಗಿನ, ಮಲ್ಲಮ್ಮ ಸುಧಾಕರ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

