ಇಂದು ದತ್ತಿ ಉಪನ್ಯಾಸ ಕಾರ್ಯಕ್ರಮ
ನರೇಗಲ್ಲ: ಸ್ಥಳೀಯ ಅನ್ನದಾನೇಶ್ವರ ಮಹಾವಿದ್ಯಾಲಯದ ಸಭಾಭವನದಲ್ಲಿ ಮಾ. 12ರಂದು ಬೆಳಗ್ಗೆ 9 ಗಂಟೆಗೆ ಹಾಲಕೆರೆ ಅನ್ನದಾನ ಶ್ರೀಗಳ ದತ್ತಿ ಉಪನ್ಯಾಸ ಕಾರ್ಯಕ್ರಮ ಜರುಗಲಿದ್ದು, ಅಧ್ಯಕ್ಷತೆಯನ್ನು ಅನ್ನದಾನೇಶ್ವರ ಮಹಾವಿದ್ಯಾಲಯದ ಉಪನ್ಯಾಸಕ ಸಿ.ಜಿ. ಹುಡೇದಗಡ್ಡಿ ವಹಿಸುವರು. ಉದ್ಘಾಟನೆಯನ್ನು ಅನ್ನದಾನೇಶ್ವರ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಅರವಿಂದ ಸಜ್ಜನ ವಹಿಸುವರು. ಅತಿಥಿಗಳಾಗಿ ಯಲಬುರ್ಗಾ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಶಿವರಾಜ ಗುರಿಕಾರ, ಇಟಗಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಎಂ.ಎಸ್. ದಡೇಸೂರಮಠ, ನಿವೃತ್ತ ಉಪನ್ಯಾಸಕ ಡಿ.ಎ. ಅರವಟಗಿಮಠ, ನಿಡಗುಂದಿ ಅನ್ನದಾನೇಶ್ವರ ಪ್ರೌಢಶಾಲೆ ಶಿಕ್ಷಕ ಸುರೇಶ ಹಳ್ಳಿಕೇರಿ, ರೋಣ ತಾಲೂಕು ಕಸಾಪ ಕೋಶಾಧ್ಯಕ್ಷ ಕೆ.ಎಸ್. ಕಳಕೊಣ್ಣವರ, ತಾಲೂಕು ಕಸಾಪ ಮಹಿಳಾ ಪ್ರತಿನಿಧಿ ಡಾ. ಪ್ರಮೀಳಾ ಕೊರಧಾನ್ಯಮಠ ವಹಿಸಲಿದ್ದಾರೆಂದು ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಶಿವಣ್ಣ ಕುರಿ ಹಾಗೂ ರೋಣ ತಾಲೂಕಾ ಕಸಾಪ ಅಧ್ಯಕ್ಷ ಎಸ್.ವಿ.ಅಂದಾನಶೆಟ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಾಹಿತ್ಯ ಸಂಜೆ ಕಾರ್ಯಕ್ರಮ
ಗದಗ: ಛಲ, ತ್ಯಾಗ, ಬಲ, ವೀರ, ಸಾಹಸ, ಅತ್ಯುನ್ನತಿ ಮೂಲಕ ಪಾತ್ರಗಳಿಗೆ ಜೀವ ತುಂಬಿ ಬದುಕಿನ ಮೌಲ್ಯಗಳನ್ನು ಪ್ರತಿಪಾದಿಸಿದ ಪಂಪ ವಿರಚಿತ ವಿಕ್ರಮಾರ್ಜುನ ವಿಜಯ ಕನ್ನಡದ ಶ್ರೇಷ್ಠ ಕೃತಿ ಎಂದು ಶಿವಾನಂದ ವಿಜ್ಞಾನ ಪಪೂ ಮಹಾವಿದ್ಯಾಲಯದ ಕನ್ನಡ ಅಧ್ಯಾಪಕ ಪ್ರೊ ಮುರಳೀಧರ ಸಂಕನೂರ ಹೇಳಿದರು. ಇಲ್ಲಿನ ತಾಪಂ ಆವರಣದಲ್ಲಿರುವ ಗದಗ ಜಿಲ್ಲಾ ಕಸಾಪ ಕಚೇರಿಯಲ್ಲಿ ಜರುಗಿದ ಶನಿವಾರ ಸಾಹಿತ್ಯ ಸಂಜೆ ಕಾರ್ಯಕ್ರಮದಲ್ಲಿ ಪಂಪ ವಿರಚಿತ ವಿಕ್ರಮಾರ್ಜುನ ವಿಜಯ ಕುರಿತು ಉಪನ್ಯಾಸ ನೀಡಿದರು.
ಗದಗ ಜಿಲ್ಲಾ ಕಸಾಪ ಅಧ್ಯಕ್ಷ ಡಾ ಶಿವಪ್ಪ ಕುರಿ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕ ಎಸ್.ಬಿ. ಗಾಣಿಗೇರ ಸ್ವರಚಿತ ಕವನ ವಾಚನ ಮಾಡಿದರು. ಸಭೆಯಲ್ಲಿ ಕಸಾಪ ಸಲಹಾ ಮಂಡಳಿ ಸದಸ್ಯ ಅಂದಾನಪ್ಪ ವಿಭೂತಿ, ಮಲ್ಲಿಕಾರ್ಜುನ ಪೂಜಾರ, ಕೆ.ವಿ. ಕನ್ನೂರ, ಪ್ರೊ ಎಂ.ಎಸ್. ಕುಲಕರ್ಣಿ, ಪ್ರಕಾಶ ಅಸುಂಡಿ, ಕಾಶಿನಾಥ ಶಿರಬಡಗಿ, ಶ್ಯಾಮಸುಂದರ ಕುಲಕರ್ಣಿ, ಬಿ.ಎಸ್. ಹಿಂಡಿ, ವಿಶ್ವನಾಥ ಕಮ್ಮಾರ, ಎಸ್.ಎನ್. ನದಾಫ, ಎಸ್.ಎಫ್. ಹಡಪದ, ವಿ.ಎ. ನಿಂಗೋಜಿ, ಎಂ.ಐ. ಜೋಬಾಳೆ, ಜಿ.ಎಸ್. ಯತ್ನಟ್ಟಿ, ಗದಗ ಗ್ರಾಮೀಣ ಶಿಕ್ಷಕರ ಸಂಘದ ಅಧ್ಯಕ್ಷ ಡಿ.ಎಸ್. ತಳವಾರ, ಆರ್.ಸಿ. ಕಟ್ಟಿಮನಿ, ಆರ್.ಜಿ. ಚಿಕ್ಕಮಠ, ಎ.ಎಸ್. ಸಾವಂತ, ಹವಳದ, ಪ್ರಕಾಶ ಗಿಡ್ಡಣ್ಣವರ, ರಮೇಶ ಸಜ್ಜಗಾರ, ದೇವೇಂದ್ರ ಮಾಧನವರ, ರವಿ ಕಲ್ಮಠ, ಎಲ್.ಡಿ. ಜಂತ್ಲಿ ಉಪಸ್ಥಿತರಿದ್ದರು. ಜಿಲ್ಲಾ ಗೌರವ ಕಾರ್ಯದರ್ಶಿ ಶರಣು ಗೋಗೇರಿ ಸ್ವಾಗತಿಸಿದರು. ಡಾ ಸಂಗಮೇಶ ತಮ್ಮನಗೌಡರ ನಿರೂಪಿಸಿದರು. ಕೋಶಾಧ್ಯಕ್ಷ ಮಲ್ಲೇಶ ಡಿ.ಎಚ್. ವಂದಿಸಿದರು.
ಎಬಿವಿಪಿ ಸ್ವಾಗತ
ಗದಗ: ಈಚೆಗೆ ಧಾರವಾಡದ ಕರ್ನಾಟಕ ವಿವಿ ಪದವಿ ವಿದ್ಯಾರ್ಥಿಗಳಿಗೆ ಹೆಚ್ಚುವರಿಯಾಗಿ ಹಳೆಯ ವಿದ್ಯಾರ್ಥಿಗಳ ಶುಲ್ಕ ಹೆಚ್ಚುವರಿ ಮಾಡಲು ತೀರ್ಮಾನಿಸಿತ್ತು. ಆದರೆ, ಈ ಬಗ್ಗೆ ಈಚೆಗೆ ಎಬಿವಿಪಿ ರಾಜ್ಯಾದ್ಯಂತ ಹೋರಾಟ ಮಾಡಿದ ಪರಿಣಾಮವಾಗಿ ಕರ್ನಾಟಕ ವಿವಿ ಶುಲ್ಕ ಹೆಚ್ಚಳ ನೀತಿಯನ್ನು ಹಿಂಪಡೆದುಕೊಂಡಿದ್ದಾರೆ ಎಂದು ಎಬಿವಿಪಿ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಮೋಹನಗೌಡ ಮಲ್ಲನಗೌಡ ಹೇಳಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಶುಲ್ಕ ಹೆಚ್ಚಳದಿಂದಾಗಿ ಬಡ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿತ್ತು ಎಂದಿದ್ದಾರೆ.
ಗದಗ: ತುಂತುರು ಮಳೆ
ಗದಗ: ತೀವ್ರ ಬಿಸಿಲಿನಿಂದ ತತ್ತರಿಸಿದ ಜನತೆಗೆ ಭಾನುವಾರ ಸಂಜೆಯ ವೇಳೆಗೆ ಗುಡುಗು ಮಿಶ್ರಿತ ಸುರಿದ ತುಂತುರು ಮಳೆ ಸಂತಸವನ್ನುಂಟು ಮಾಡಿತು.
ಕಳೆದ ಹಲವು ದಿನಗಳಿಂದ ಗದಗ-ಬೆಟಗೇರಿ ಅವಳಿ ನಗರದಲ್ಲಿ ಬಿಸಿಲಿನಿಂದ ಜನರು ತತ್ತರಿಸಿದ್ದರು. ಭಾನುವಾರ ಸುರಿದ ಮಳೆರೈತರು ಬೆಳೆದ ಜೋಳ, ಗೋಧಿ ಬೆಳೆಯ ರಾಸಿ ಮಾಡುವುದಕ್ಕೆ ಅಡ್ಡಿಯಾಗಿದೆ. ಹೊಲಗಳಲ್ಲಿ ಹತ್ತಿ ಬೆಳೆ ಬಂದಿದ್ದು, ತುಂತುರು ಸುರಿದರೆ ಅಡ್ಡಿ ಇಲ್ಲ, ಮಳೆ ಜೋರಾಗಿ ಬಂದರೆ ತಮ್ಮ ಗತಿ ಏನು ಎಂದು ರೈತರು ಭೀತಿಯಿಂದಲೇ ಆಡಿಕೊಂಡರು.
ಗದಗ: ಇಂದು ಸಾಧಕಿಯರಿಗೆ ಸನ್ಮಾನ
ಗದಗ: ಜ. ತೋಂಟದಾರ್ಯ ಮಠದಲ್ಲಿ ಮಾ. 11ರ ಸಂಜೆ 7 ಗಂಟೆಗೆ ಜ. ತೋಂಟದ ಡಾ. ಸಿದ್ದಲಿಂಗ ಶ್ರೀಗಳ ಸಾನ್ನಿಧ್ಯದಲ್ಲಿ ನಡೆಯುವ 2010ನೇ ಶಿವಾನುಭವದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ನಡೆಯಲಿದ್ದು, ಅತಿಥಿ ಉಪನ್ಯಾಸಕರಾಗಿ ಗದಗ ಜಿಲ್ಲಾ ಗ್ರಾಹಕರ ವೇದಿಕೆ ಸದಸ್ಯ ಜಿ. ಶ್ಯಾಮಲಾ ಮಾಣಿಕ್ಯಾಲರಾವ್ ಅವರು ಉಪನ್ಯಾಸ ನೀಡುವರು. ಇದೇ ಸಂದರ್ಭದಲ್ಲಿ ಪಿಎಚ್ಡಿ ಪದವಿ ಪಡೆದ ಕೆಎಸ್ಎಸ್ ಕಾಲೇಜಿನ ಪ್ರಾಧ್ಯಾಪಕಿ ಡಾ. ಪ್ರೇಮಲತಾ ಹಿರೇಮಠ ಹಾಗೂ ರಾಜ್ಯ ಆದರ್ಶ ಶಿಕ್ಷಕಿ ಪ್ರಶಸ್ತಿ ಪಡೆದ ಸ.ಜ. ನಾಗಲೋಟಿಮಠ ಹಾಗೂ ಅಂತಾರಾಷ್ಟ್ರೀಯ ವಿಜ್ಞಾನ ಮಾದರಿ ಪ್ರಶಸ್ತಿ ಪಡೆದ ಪದ್ಮಾ ಹುಂಬಿ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದು ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಅಮರೇಶ ಅಂಗಡಿ, ಕಾರ್ಯದರ್ಶಿ ಶೇಖಣ್ಣ ಕವಳಿಕಾಯಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

